AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ

ಕರ್ನಾಟಕದ ಜಲಾಶಯಗಳ ಜುಲೈ 13 ರ ನೀರಿನ ಮಟ್ಟ: ಕಳೆದ ವರ್ಷ ಜೂನ್ ಆರಂಭಕ್ಕೂ ಮುನ್ನವೇ ಕೆಆರ್​ಎಸ್ ಡ್ಯಾಂ ನೀರಿನ ಮಟ್ಟ 100 ಅಡಿ ದಾಟಿತ್ತು. ಆದರೆ ಈ ವರ್ಷ ಜುಲೈ 13 ಆದರೂ ಇನ್ನೂ 92.15 ಅಡಿ ಸಂಗ್ರಹವಷ್ಟೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.

Karnataka Dam Water Level: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ
ಕೆಆರ್​ಎಸ್ ಡ್ಯಾಂImage Credit source: tv9
ಗಣಪತಿ ಶರ್ಮಾ
| Edited By: |

Updated on:Jul 13, 2026 | 12:24 PM

Share

ಮುಖ್ಯಾಂಶಗಳು

  • ಮುಂಗಾರು ಮಳೆ ಕೊರತೆಯಿಂದ ಕಡಿಮೆಯಾದ ಡ್ಯಾಂಗಳ ಒಳಹರಿವು
  • ಇನ್ನೂ 100 ಅಡಿ ತಲುಪದ ಕೆಆರ್​ಎಸ್ ಡ್ಯಾಂ
  • ಕಬಿನಿ ಡ್ಯಾಂನಲ್ಲೂ ನೀರಿನ ಮಟ್ಟ ಕಡಿಮೆ

ಬೆಂಗಳೂರು, ಜುಲೈ 13: ಕರ್ನಾಟಕದಲ್ಲಿ ಮುಂಗಾರು ಮಳೆಯ (Monsoon Rain) ಕೊರತೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜುಲೈ ತಿಂಗಳ ಆರಂಭದಲ್ಲಿ ದಕ್ಷಿಣ ಕನ್ನಡ, ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಳಗಾವಿ ಕಡೆ ಭಾರಿ ಮಳೆಯಾಗಿ ಜಲಾಶಯಗಳ ಒಳಹರಿವು ತುಸು ಹೆಚ್ಚಾಗಿದ್ದರೂ ಒಟ್ಟು ಲೆಕ್ಕದಲ್ಲಿ ನೀರಿನ ಸಂಗ್ರಹದಲ್ಲಿ ಭಾರಿ ಏರಿಕೆಯಾಗಿಲ್ಲ. ಕಳೆದ ವರ್ಷ ಜೂನ್ ಆರಂಭದಲ್ಲೇ ನೂರು ಅಡಿ ನೀರು ತುಂಬಿದ್ದ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಕೆಆರ್​ಎಸ್​​ ಜಲಾಶಯದಲ್ಲಿ (KRS Dam) ಈ ವರ್ಷ ಇನ್ನೂ ನೀರಿನ ಮಟ್ಟ 92.15 ಅಡಿಗೆ ತಲುಪಿದೆಯಷ್ಟೆ. ಇದು ರಾಜ್ಯದ ಜನತೆಯನ್ನು ಆತಂಕ್ಕೆ ಈಡುಮಾಡಿದೆ.

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿ
  • ಪ್ರಸ್ತುತ ನೀರಿನ ಮಟ್ಟ : 92.15 ಅಡಿ
  • ಒಳಹರಿವು : 7,515 ಕ್ಯೂಸೆಕ್
  • ಹೊರಹರಿವು: 619 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ : 17.253 ಟಿಎಂಸಿ
  • 24 ಗಂಟೆಯಲ್ಲಿ 0.588 ಹೆಚ್ಚಳವಾಗಿದೆ.

ಹಾಸನ ಗೊರೂರು ಸಮೀಪದ ಹೇಮಾವತಿ ಜಲಾಶಯ ನೀರಿನ ಮಟ್ಟ

  • ಗರಿಷ್ಠ ಮಟ್ಟ: 2922 ಅಡಿ (37 TMC)
  • ಇಂದಿನ ಪ್ರಮಾಣ: 2903.52(22.048 TMC)
  • ಒಳ ಹರಿವು: 2960 ಕ್ಯೂಸೆಕ್
  • ಹೊರ ಹರಿವು: 300 ಕ್ಯೂಸೆಕ್

ಈ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 2920.82 ಅಡಿ (35.963.TMC) ನೀರಿತ್ತು. 8780 ಕ್ಯೂಸೆಕ್ ನೀರಿನ ಒಳ ಹರಿವು ಮತ್ತು 5400 ಕ್ಯುಸೆಕ್ ಹೊರ ಹರಿವು ಇತ್ತು.

ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಡ್ಯಾಂ ನೀರಿನ ಮಟ್ಟ

  • ಡ್ಯಾಂ ಗರಿಷ್ಟ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.27 ಮೀಟರ್
  • ಒಳ ಹರಿವು: 56,756 ಕ್ಯೂಸೆಕ್
  • ಹೊರ ಹರಿವು: 423 ಕ್ಯೂಸೆಕ್

ಮೈಸೂರು ಕಬಿನಿ ಜಲಾಶಯ ನೀರಿನ ಮಟ್ಟ

  • ಇಂದಿನ ನೀರಿನ ಮಟ್ಟ: 70.06 ಅಡಿ
  • ಕಳೆದ ವರ್ಷ ಇದೇ ದಿನ ಇದ್ದ ನೀರಿನ ಮಟ್ಟ: 81.98 ಅಡಿ
  • 11.71 ಟಿಎಂಸಿ ನೀರು ಸಂಗ್ರಹ
  • ಕಳೆದ ವರ್ಷ ಇದೇ ದಿನ 18.18 ಟಿಎಂಸಿ ಸಂಗ್ರಹ
  • 3,166 ಕ್ಯೂಸೆಕ್ ನೀರು ಒಳಹರಿವು
  • 500 ಕ್ಯೂಸೆಕ್ ನೀರು ಹೊರಹರಿವು

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಮತ್ತೊಂದೆಡೆ, ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲಗೊಂಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೀರಿನ ಅಭಾವ ಸೃಷ್ಟಿಯಾಗಿ ತೀವ್ರತರದ ಸಮಸ್ಯೆ ಎದುರಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Mon, 13 July 26

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್