AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

18 ವರ್ಷಗಳ ಜರ್ನಿ ಮುಕ್ತಾಯ: CSKಗೆ ಗುಡ್‌ಬೈ ಹೇಳಿದ ಫ್ಲೆಮಿಂಗ್!

ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಅದರ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ತಮ್ಮ 18 ವರ್ಷಗಳ ಐತಿಹಾಸಿಕ ಒಡನಾಟವನ್ನು ಕೊನೆಗೊಳಿಸಿ ಅಧಿಕೃತವಾಗಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದಾರೆ. ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ (2024, 2025, 2026) ತಂಡವು ಪ್ಲೇ-ಆಫ್ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

18 ವರ್ಷಗಳ ಜರ್ನಿ ಮುಕ್ತಾಯ: CSKಗೆ ಗುಡ್‌ಬೈ ಹೇಳಿದ ಫ್ಲೆಮಿಂಗ್!
Stephen Fleming
ಝಾಹಿರ್ ಯೂಸುಫ್
|

Updated on: Jul 13, 2026 | 12:54 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿದಿದ್ದಾರೆ. ಇದರೊಂದಿಗೆ ಐಪಿಎಲ್​ನ ಅತ್ಯಂತ ಸುದೀರ್ಘ ಹಾಗೂ ಯಶಸ್ವಿ ಕೋಚ್-ಫ್ರಾಂಚೈಸಿ ಬಾಂಧವ್ಯವೊಂದು ಕೊನೆಗೊಂಡಂತಾಗಿದೆ.

2008 ರ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಸ್ಟೀಫನ್ ಫ್ಲಯಿಂಗ್, ಆ ಸೀಸನ್ ಮುಗಿದ ತಕ್ಷಣವೇ ಅವರು ನಿವೃತ್ತಿ ಘೋಷಿಸಿ, 2009 ರಿಂದ ಸಿಎಸ್​ಕೆ ತಂಡ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರು. ಇದಾದ ಬಳಿಕ ಅವರು ಹಿಂತಿರುಗಿ ನೋಡಿಲ್ಲ ಎಂದೇ ಹೇಳಬಹುದು. ಆದರೆ ಕಳೆದ ಕೆಲ ಸೀಸನ್​ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಸುದ್ದಿಯು ನಿಜವಾಗಿದೆ.

ಸ್ಟೀಫನ್ ಫ್ಲೆಮಿಂಗ್ ಹಾಗೂ  ಫ್ರಾಂಚೈಸಿ ಪರಸ್ಪರ ಮಾತುಕತೆಯ ಮೂಲಕ ಗೌರವಯುತವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ತಿಳಿಸಿದೆ. ಈ ಮೂಲಕ ಹೊಸ ಅಧ್ಯಾಯಕ್ಕೆ ಕಾಲಿಡಲು ಸಿಎಸ್​ಕೆ ಫ್ರಾಂಚೈಸಿ ನಿರ್ಧರಿಸಿದೆ. ಅದರಂತೆ ಮುಂದಿನ ಸೀಸನ್​ನಿಂದ ಸಿಎಸ್​ಕೆ ತಂಡವನ್ನು ಹೊಸ ಕೋಚ್ ಮುನ್ನಡೆಸಲಿದ್ದಾರೆ.

 ಫ್ಲೆಮಿಂಗ್-ಸಿಎಸ್​ಕೆ ಬೇರ್ಪಡಲು ಕಾರಣವೇನು?

  • ಸತತ ವೈಫಲ್ಯಗಳು: ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ಸಿಎಸ್‌ಕೆ ತಂಡವು ಪ್ಲೇ-ಆಫ್ಸ್ ತಲುಪಲು ವಿಫಲವಾಗಿತ್ತು (ಇತ್ತೀಚಿನ ಸೀಸನ್‌ಗಳಲ್ಲಿ 10 ಮತ್ತು 8 ನೇ ಸ್ಥಾನ ಪಡೆದಿತ್ತು).
  • ಜಾಗತಿಕ ಲೀಗ್‌ಗಳಲ್ಲೂ ಹಿನ್ನಡೆ: ಅಮೆರಿಕಾದ ಮೇಜರ್ ಲೀಗ್ ಕ್ರಿಕೆಟ್ (MLC) 2026 ರ ಸೀಸನ್‌ನಲ್ಲಿ ಸಿಎಸ್‌ಕೆ ಒಡೆತನದ ‘ಟೆಕ್ಸಾಸ್ ಸೂಪರ್ ಕಿಂಗ್ಸ್’ ತಂಡವು ಕೊನೆಯ ಸ್ಥಾನಕ್ಕೆ ಕುಸಿದಿರುವುದು ಈ ಕಠಿಣ ತೀರ್ಮಾನಕ್ಕೆ ಪ್ರಮುಖ ಕಾರಣವಾಗಿದೆ.

ಫ್ಲೆಮಿಂಗ್ ಅವರ ಐತಿಹಾಸಿಕ ಸಾಧನೆಗಳು:

2008 ರ ಚೊಚ್ಚಲ ಐಪಿಎಲ್‌ನಲ್ಲಿ ಆಟಗಾರನಾಗಿ ಸಿಎಸ್‌ಕೆ ಸೇರಿದ ಫ್ಲೆಮಿಂಗ್, 2009 ರಲ್ಲಿ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡರು. ಅಂದಿನಿಂದ ಎಂ.ಎಸ್. ಧೋನಿ ಅವರೊಂದಿಗೆ ಸೇರಿ ಸಿಎಸ್‌ಕೆಯನ್ನು ಟಿ20 ಕ್ರಿಕೆಟ್‌ನ ಅತ್ಯಂತ ಬಲಿಷ್ಠ ತಂಡವನ್ನಾಗಿ ಬೆಳೆಸಿದರು. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐಪಿಎಲ್​ನಲ್ಲಿ 5 ಬಾರಿ ಹಾಗೂ ಚಾಂಪಿಯನ್ಸ್ ಲೀಗ್​ನಲ್ಲಿ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

  •  5 ಐಪಿಎಲ್ ಟ್ರೋಫಿಗಳು (2010, 2011, 2018, 2021, 2023)
  •  2 ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳು
  •  10 ಬಾರಿ ಐಪಿಎಲ್ ಫೈನಲ್ ಪ್ರವೇಶ
  •  12 ಬಾರಿ ಪ್ಲೇ-ಆಫ್ಸ್‌ಗೆ ತಂಡವನ್ನು ಮುನ್ನಡೆಸಿದ ಕೀರ್ತಿ.

ಇದನ್ನೂ ಓದಿ: ಬ್ರಿಟಿಷ್ ಪ್ರಜೆಯಾಗಿ ಕೆರಿಯರ್ ಆರಂಭಿಸಿದ ಅಮೀರ್

ಇದೀಗ 18 ವರ್ಷಗಳ ಸುದೀರ್ಘ ನಂಟಿಗೆ ಸ್ಟೀಫನ್ ಫ್ಲೆಮಿಂಗ್ ಗುಡ್ ಬೈ ಹೇಳಿದ್ದು, ಹೀಗಾಗಿ ಮುಂಬರುವ ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ