AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ ದಂಡ: ಈ ವಿನೂತನ ರೂಲ್ಸ್ ಏಕೆ ಗೊತ್ತಾ?

ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ ದಂಡ: ಈ ವಿನೂತನ ರೂಲ್ಸ್ ಏಕೆ ಗೊತ್ತಾ?

ರಮೇಶ್ ಬಿ. ಜವಳಗೇರಾ
|

Updated on: Feb 24, 2026 | 2:55 PM

Share

ಛತ್ತೀಸ್‌ಗಢದ ಬಾಲೋದ್ ಜಿಲ್ಲೆಯ ಮೆಡ್ಡಿ ಎಂಬ ಗ್ರಾಮದಲ್ಲಿ ವಿಶಿಷ್ಟವಾದ ಕಾನೂನನ್ನು ಇತ್ತೀಚೆಗೆ ಅನುಷ್ಠಾನ ಮಾಡಲಾಗಿದೆ. ಅದರಂತೆ ಒಂದು ವೇಳೆ ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸುವುದು ಕಂಡುಬಂದಲ್ಲಿ ಅಂತಹವರಿಗೆ 5,000 ರೂ. ದಂಡ ವಿಧಿಸುವ ನಿಯಮ ಜಾರಿ ಮಾಡಲಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವಂತಹವರಿಗೆ ದಂಡ ವಿಧಿಸುವ ಮೂಲಕ ಸುಳ್ಳು ಸುದ್ದಿಯಿಂದ ಉಂಟಾಗುವ ಘರ್ಷಣೆಗಳನ್ನು ತಡೆದು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನ ಇದಾಗಿದೆ.

ಛತ್ತೀಸ್‌ಗಢದ (Chhattisgarh )ಬಾಲೋದ್ ಜಿಲ್ಲೆಯ ಮೆಡ್ಡಿ ಎಂಬ ಗ್ರಾಮದಲ್ಲಿ ವಿಶಿಷ್ಟವಾದ ಕಾನೂನನ್ನು ಇತ್ತೀಚೆಗೆ ಅನುಷ್ಠಾನ ಮಾಡಲಾಗಿದೆ. ಅದರಂತೆ ಒಂದು ವೇಳೆ ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸುವುದು ಕಂಡುಬಂದಲ್ಲಿ ಅಂತಹವರಿಗೆ 5,000 ರೂ. ದಂಡ ವಿಧಿಸುವ ನಿಯಮ ಜಾರಿ ಮಾಡಲಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವಂತಹವರಿಗೆ ದಂಡ ವಿಧಿಸುವ ಮೂಲಕ ಸುಳ್ಳು ಸುದ್ದಿಯಿಂದ ಉಂಟಾಗುವ ಘರ್ಷಣೆಗಳನ್ನು ತಡೆದು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನ ಇದಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ವದಂತಿ ಹರಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವಂತಿಲ್ಲ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲೂ ಸುಳ್ಳುಸುದ್ದಿಗಳನ್ನು ಹಬ್ಬಿಸುವುದಕ್ಕೆ ನಿಷೇಧ ವೈಯಕ್ತಿಕ ಗೌರವ, ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡುವುದನ್ನು ವದಂತಿ ಎಂದು ಪರಿಗಣನೆ ಮಾಡಿ 5,000 ರೂ ದಂಡ ಹಾಕಲಾಗುತ್ತದೆ. ಫೆಬ್ರವರಿ 19ಕ್ಕೆ ನಡೆದ ಗ್ರಾಮಸಭೆಯಲ್ಲಿ ‘ಚುಗ್ಲಿ’ ಅಥವಾ ಚಾಡಿ ಅಥವಾ ವದಂತಿಗೆ ನಿಷೇಧ ವಿಧಿಸುವ ಬಗ್ಗೆ ಗ್ರಾಮಸ್ಥರು ನಿರ್ಧರಿಸಿದ್ದು, ತಕ್ಷಣದಿಂದಲೇ ಅದು ಅನುಷ್ಠಾನಗೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us