ಕುಂಭದ್ರೋಣದಿಂದ ಉತ್ತರಾಖಂಡ್ ಹಲವು ಭಾಗಗಳಲ್ಲಿ ಪ್ರವಾಹ, ಕುಸಿದ ಸೇತುವೆಗಳು ಮತ್ತು ಕೊಚ್ಚಿ ಹೋಗುತ್ತಿರುವ ರಸ್ತೆಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2021 | 7:28 PM

ಡೆಹ್ರಾಡೂನ್, ಹೃಷಿಕೇಶ್ ಮೊದಲಾದ ಕಡೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ (ಎಸ್ ಡಿ ಆರ್ ಎಫ್) ಪಡೆಗಳು ಸನ್ನದ್ಧವಾಗಿ ನಿಂತಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಭರದಿಂದ ನಡೆಯುತ್ತಿವೆ.

ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋಣಕ್ಕೆ ಉತ್ತರಾಖಂಡ್ ತತ್ತರಿಸಿ ಹೋಗಿದೆ. ಮಳೆಯ ಸತತ ಆರ್ಭಟವು ರಾಜ್ಯದ ಕೆಲಭಾಗಗಳಲ್ಲಿ ಪ್ರವಾಹವನ್ನು ಸೃಷ್ಟಿಸಿದೆ. ಜಾರ್ಖನ್ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದು ನೀರು ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಸೇತುವೆಗಳೊಂದಿಗೆ ಪ್ರಮುಖ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು ಸಹ ಕೊಚ್ಚಿಕೊಂಡು ಹೋಗುತ್ತಿವೆ. ರಸ್ತೆ ಮೇಲೆ ಪಾರ್ಕ್ ಮಾಡಲಾಗಿದ್ದ ವಾಹನಗಳನ್ನು ಭಾರೀ ರಭಸದ ಪ್ರವಾಹ ಎಳೆದುಕೊಂಡು ಹೋಗುತ್ತಿದೆ. ಈ ವಿಡಿಯೋನಲ್ಲಿ ಒಂದು ಟ್ಯಾಂಕರ್ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೀವು ಗಮನಿಸಬಹುದು. ಸಾವು ನೋವುಗಳ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲವಾದರೂ ರಾಜ್ಯದ ಬಹಳಷ್ಟು ಕಡೆ ರಸ್ತೆಗಳು ಹದಗೆಟ್ಟು ಹೋಗಿವೆ.

ಡೆಹ್ರಾಡೂನ್, ಹೃಷಿಕೇಶ್ ಮೊದಲಾದ ಕಡೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ (ಎಸ್ ಡಿ ಆರ್ ಎಫ್) ಪಡೆಗಳು ಸನ್ನದ್ಧವಾಗಿ ನಿಂತಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಭರದಿಂದ ನಡೆಯುತ್ತಿವೆ.
ಪ್ರವಾಹಕ್ಕೆ ಸಂಬಂಧಿಸಿದ ಮತ್ತೊಂದು ಘಟನೆಯಲ್ಲಿ ಡೆಹ್ರಾಡೂನ್ನಲ್ಲಿ ಸುರಯುತ್ತಿರುವ ಮಳೆಯಿಂದಾಗಿ ಮಾಲ್ದೇವ್ತಾ-ಸಹಸ್ತ್ರಧಾರಾ ಲಿಂಕ್ ರಸ್ತೆಯ ಕೆಲ ಭಾಗಗಳು ಕುಸಿದಿವೆ.

ಏತನ್ಮಧ್ಯೆ, ತಪೋವನ್ ನಿಂದ ಮಲೇಥಾವರೆಗೆ ರಾಷ್ಟ್ರೀಯ ಹೆದ್ದಾರಿ 58 ಅನ್ನು ಮುಚ್ಚಲಾಗಿದೆ ಎಂದು ತೆಹ್ರಿ-ಗರ್ವಾಲ್ ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ: New York Flood: ಭಾರೀ ಪ್ರವಾಹದಿಂದ ನ್ಯೂಯಾರ್ಕ್​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ; 9 ಜನರು ಸಾವು