New York Flood: ಭಾರೀ ಪ್ರವಾಹದಿಂದ ನ್ಯೂಯಾರ್ಕ್​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ; 9 ಜನರು ಸಾವು

TV9 Digital Desk

| Edited By: Sushma Chakre

Updated on: Sep 02, 2021 | 8:20 PM

Hurricane Ida | ನ್ಯೂಯಾರ್ಕ್​ನಲ್ಲಿ ಸೃಷ್ಟಿಯಾಗಿರುವ ಪ್ರವಾಹದಿಂದ ವಿಪರೀತ ಗಾಳಿ ಬೀಸುತ್ತಿದೆ. ಲೂಸಿಯಾನದಲ್ಲಿ ಕಳೆದ ವೀಕೆಂಡ್​ನಲ್ಲಿ ಶುರುವಾಗಿರುವ ಇಡಾ ಚಂಡಮಾರುತದಿಂದ ಅನಾಹುತಗಳು ಸೃಷ್ಟಿಯಾಗಿವೆ.

New York Flood: ಭಾರೀ ಪ್ರವಾಹದಿಂದ ನ್ಯೂಯಾರ್ಕ್​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ; 9 ಜನರು ಸಾವು
ನ್ಯೂಯಾರ್ಕ್​ನಲ್ಲಿ ಪ್ರವಾಹ

ನ್ಯೂಯಾರ್ಕ್: ನ್ಯೂಯಾರ್ಕ್​ನಲ್ಲಿ ಉಂಟಾಗಿರುವ ಇಡಾ ಚಂಡಮಾರುತದಿಂದ ಭಾರೀ ಪ್ರವಾಹ ಸೃಷ್ಟಿಯಾಗಿದೆ. ಬುಧವಾರ ರಾತ್ರಿ ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್​ ನಗರಗಳು ಬಹುತೇಕ ಮುಳುಗಡೆಯಾಗುವಂತೆ ಪ್ರವಾಹದ ನೀರು ಎಲ್ಲೆಡೆ ತುಂಬಿಕೊಂಡಿತ್ತು. ಇನ್ನೂ ಪ್ರವಾಹದ ಅಬ್ಬರ ಕಡಿಮೆಯಾಗಿಲ್ಲ. ನ್ಯೂಯಾರ್ಕ್​ನಲ್ಲಿ ಪ್ರವಾಹದಿಂದ 9 ಜನರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದ ಅನೇಕ ಪ್ರದೇಶಗಳು ಮುಳುಗಡೆಯಾಗಿರುವುದರಿಂದ ನ್ಯೂಯಾರ್ಕ್​ನಲ್ಲಿ ಇಂದು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ನ್ಯೂಯಾರ್ಕ್​ನಲ್ಲಿ ಸೃಷ್ಟಿಯಾಗಿರುವ ಪ್ರವಾಹದಿಂದ ವಿಪರೀತ ಗಾಳಿ ಬೀಸುತ್ತಿದೆ. ಲೂಸಿಯಾನದಲ್ಲಿ ಕಳೆದ ವೀಕೆಂಡ್​ನಲ್ಲಿ ಶುರುವಾಗಿರುವ ಇಡಾ ಚಂಡಮಾರುತದಿಂದ ಅನಾಹುತಗಳು ಸೃಷ್ಟಿಯಾಗಿವೆ. ಇಡಾ ಚಂಡಮಾರುತದಿಂದ ನ್ಯೂಯಾರ್ಕ್​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಪ್ರವಾಹದಿಂದ ನ್ಯೂಯಾರ್ಕ್​ನ ರಸ್ತೆಗಳು, ಹಲವು ಮನೆಗಳು, ಕಂಪನಿಗಳು ಜಲಾವೃತವಾಗಿವೆ.

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನ್ಯೂಯಾರ್ಕ್ ತತ್ತರಿಸಿ ಹೋಗಿದೆ. ಈ ಬಗ್ಗೆ ಮಾತನಾಡಿರುವ ಲೂಸಿಯಾನದ ಮೇಯರ್ ಬಿಲ್ ಡಿ. ಬ್ಲಿಸಿಯೊ, ಇದೊಂದು ಐತಿಹಾಸಿಕ ಹವಾಮಾನ ದುರಂತ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ನ್ಯೂಯಾರ್ಕ್​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಸಬ್‌ವೇ ರೈಲು ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇಡಾ ಚಂಡಮಾರುತ ಪರಿಣಾಮವಾಗಿ ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರೀ ಮಳೆ ಆರಂಭವಾಗಿದ್ದು, ಮಳೆಯಿಂದಾಗಿ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದಾಗಿ ನ್ಯೂಯಾರ್ಕ್ ನಗರದ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ. ಅಲ್ಲದೆ, ನ್ಯೂಜೆರ್ಸಿಯ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ನ್ಯೂಯಾರ್ಕ್​ನಲ್ಲಿ 9 ಜನರು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಹವಾಮಾನ ಇಲಾಖೆಯು ನ್ಯೂಯಾರ್ಕ್, ಬ್ರೂಕ್ಲಿನ್ ಮತ್ತು ಕ್ವೀನ್ಸ್ ನಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ ನೀಡಿದ್ದು, ಸ್ಟೇಟನ್ ಐರ್ಲೆಂಡ್​ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ನ್ಯೂಯಾರ್ಕ್​ನಲ್ಲಿ ಇಡಾ ಚಂಡಮಾರುತದಿಂದ ಉಂಟಾಗಿರುವ ಪರಿಸ್ಥಿತಿಯ ವಿಡಿಯೋಗಳು ವೈರಲ್ ಆಗಿವೆ.

ನ್ಯೂಯಾರ್ಕ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣದ ಒಳಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: Hurricane Ida: ಅಮೆರಿಕದ ಲೂಸಿಯಾನದಲ್ಲಿ ಇಡಾ ಚಂಡಮಾರುತದ ಅಬ್ಬರ; ಸದ್ಯದ ಪರಿಸ್ಥಿತಿಯ ವಿಡಿಯೋ ವೈರಲ್

ನ್ಯೂ ಯಾರ್ಕನ್ನು ಜಲಾವೃತಗೊಳಿಸಿರುವ ಇಡಾ ಚಂಡಮಾರುತ; ಮನೆ, ರಸ್ತೆ, ಸಬ್​ವೇ ಮತ್ತು ಪ್ಲಾಟ್ಫಾರ್ಮ್​ಗಳಲೆಲ್ಲ​ ನೀರು!

(New York City flooding At least 9 dead in record rain Hurricane Ida emergency declared in New York)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada