ನ್ಯೂ ಯಾರ್ಕನ್ನು ಜಲಾವೃತಗೊಳಿಸಿರುವ ಇಡಾ ಚಂಡಮಾರುತ; ಮನೆ, ರಸ್ತೆ, ಸಬ್​ವೇ ಮತ್ತು ಪ್ಲಾಟ್ಫಾರ್ಮ್​ಗಳಲೆಲ್ಲ​ ನೀರು!

ಬುಧವಾರ ತಡರಾತ್ರಿ ಪ್ರಬಲ ಚಂಡಮಾರುತದಿದಾಗಿ ಭಾರೀ ಮಳೆ ಸುರಿದಿದ್ದರಿಂದ ನ್ಯೂಯಾರ್ಕ್ ನಗರದಲ್ಲಿ ಫ್ಲ್ಯಾಶ್ ಪ್ರವಾಹ ತುರ್ತು ಪರಿಸ್ಥಿತಿ ಯನ್ನು ಘೋಷಿಸಲಾಗಿದೆ

ಲೌಸಿಯಾನಾ ಮತ್ತು ಮಿಸ್ಸಿಸ್ಸಿಪ್ಪಿಗಳಲ್ಲಿ ಭಾರಿ ಮಳೆಗಳ ಮೂಲಕ ತಲ್ಲಣ ಸೃಷ್ಟಿಸಿ ಇಡಾ ಚಂಡಮಾರುತ ದುರ್ಬಲಗೊಂಡಿರುವುದು ನಿಜವಾದರೂ ಬೇರೆ ರಾಜ್ಯಗಳಲ್ಲಿ ಅದರ ಆರ್ಭಟ ಮುಂದುವರಿದಿದೆ. ನ್ಯೂ ಯಾರ್ಕ್ ಮೆಟ್ರೋಲಾಲಿಟನ್ ಪ್ರದೇಶದಲ್ಲಾಗುತ್ತಿರುವ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ಹರಿದು ರಸ್ತೆ, ವಾಹನ ಮನೆ ಮತ್ತು ಇತರ ಕಟ್ಟಡಗಳು ಜಲಾವೃತಗೊಂಡಿವೆ. ಸಬ್ವೇ, ವಿಮಾನ ನಿಲ್ದಾಣಗಳಲ್ಲಿ ಎದೆ ಮಟ್ಟದವರೆಗೆ ನೀರು ತುಂಬಿಕೊಂಡಿದೆ. ಜನ ತಮ್ಮ ಮೊಬೈಲ್ನಲ್ಲಿ ಶೂಟ್ ಮಾಡಿರುವ ಇಲ್ಲಿನ ದೃಶ್ಯಾವಳಿಗಳು ವೈರಲ್ ಆಗಿವೆ.

ಬುಧವಾರ ತಡರಾತ್ರಿ ಪ್ರಬಲ ಚಂಡಮಾರುತದಿದಾಗಿ ಭಾರೀ ಮಳೆ ಸುರಿದಿದ್ದರಿಂದ ನ್ಯೂಯಾರ್ಕ್ ನಗರದಲ್ಲಿ ಫ್ಲ್ಯಾಶ್ ಪ್ರವಾಹ ತುರ್ತು ಪರಿಸ್ಥಿತಿ ಯನ್ನು ಘೋಷಿಸಲಾಗಿದೆ. ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡಿ ಬ್ಲಾಸಿಯೊ ತುರ್ತು ಪರಿಸ್ಥಿತಿಯ ಘೋಷಣೆ ಮಾಡಿದ್ದು ಅಪಘಾತಗಳನ್ನು ತಪ್ಪಿಸಲು ಮುನ್ಸೂಚನೆಯ ಕ್ರಮವಾಗಿ ರಸ್ತೆಗಳಿಗೆ ಇಳಿಯದಿರಲು ಮತ್ತು ಭೂಗತ ರೈಲು ನೆಟ್ವರ್ಕ್ ಬಳಸದಿರಲು ಜನರಿಗೆ ಸೂಚಿಸಿದ್ದಾರೆ.

‘ಒಂದು ಐತಿಹಾಸಿಕ ಹವಾಮಾನ ಸ್ಥಿತಿಯಿಂದ ನಾವು ಹಾದುಹೋಗುತ್ತಿದ್ದೇವೆ. ನಗರದಾದ್ಯಂತರ ದಾಖಲೆಯ ಮಳೆ ಸುರಿದಿದೆ. ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿಯುತ್ತಿದ್ದು ಸ್ಥಿತಿ ಬಹಳ ಆಪಾಯಕಾರಿಯಾಗಿದೆ,’ ಎಂದು ಬ್ಲಾಸಿಯೋ ಟ್ವೀಟ್ ಮಾಡಿದ್ದಾರೆ.

ನ್ಯೂ ಯಾರ್ಕ್ ಮೆಟ್ರೊಪಾಲಿಟನ್ ಟ್ರಾನ್ಸಿಟ್ ಅಥಾರಿಟಿಯು ಬ್ರೂಕ್ಲಿನ್ ಮತ್ತು ಮ್ಯಾನ್ಹಟ್ಟನ್ ಪ್ರದೇಶಗಳಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಹರಿಯುತ್ತಿದೆ. ಹಾಗಾಗಿ ಕೆಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಲಾಗಿದೆ.

ಪ್ರಯಾಣಿಕರು ಶೂಟ್ ಮಾಡಿರುವ ವಿಡಿಯೋಗಳಲ್ಲಿ ನೀರಿ ಪ್ಲಾಟ್ಫಾರ್ಮ್ ಗಳ ಮೇಲೆ ಹರಿದು ಹಲವಾರು ಕಡೆಗಳಲ್ಲಿ ಪವರ್ ಲೈನ್ ಹಾಳುಮಾಡಿರುವುದು ಕಾಣುತ್ತಿದೆ.
ಜನ ಶೇರ್ ಮಾಡಿರುವ ವಿಡಿಯೋಗಳು ಕೆಳಗಿನಂತಿವೆ.

ಈ ವಿಡಿಯೋವನ್ನು ನೋಡಿ

ಇದನ್ನೂ ಓದಿ: Kichcha Sudeepa: ಕಿಚ್ಚನಿಗೆ ವಿಶೇಷ ಉಡುಗೊರೆ ಕಳುಹಿಸಿದ ರಾಜಸ್ಥಾನ್ ರಾಯಲ್ಸ್; ವಿಡಿಯೊ ನೋಡಿ

Click on your DTH Provider to Add TV9 Kannada