ಕೆರೂರು ಘರ್ಷಣೆ: ಗಾಯಾಳು ಗೋಪಾಲ ಕುಟುಂಬಕ್ಕೆ ಸಿದ್ದರಾಮಯ್ಯ ಒತ್ತಾಯದಿಂದ ಹಣ ನೀಡಿದರು
ಸಿದ್ದರಾಮಯ್ಯ ಬಾಗಲಕೋಟೆಯ ಮಿರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಪಾಲ ಅವರ ಕುಟುಂಬಕ್ಕೆ ಒತ್ತಾಯದಿಂದ ಹಣ ನೀಡಿದರು.
ಬಾಗಲಕೋಟೆಯ ಕೆರೂರಲ್ಲಿ ಜುಲೈ 6 ರಂದು ನಡೆದ ಕೋಮುಗಭೆಯಲ್ಲಿ ಗಾಯಗೊಂಡು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡೂ ಕೋಮುಗಳ ಜನ ಮತ್ತು ಅವರ ಕುಟುಂಬದ ಸದಸ್ಯರನ್ನು ಬಾದಾಮಿ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ (Siddaramaiah) ಶುಕ್ರವಾರ ಭೇಟಿಯಾದರು. ಗಮನಿಸಬೇಕಾದ ಸಂಗತಿಯೇನೆಂದರೆ ಎರಡು ಪಂಗಡಗಳ ಜನ ಸಿದ್ದರಾಮಯ್ಯನವರು ವೈಯಕ್ತಿವಾಗಿ ನೀಡಿದ ಪರಿಹಾರ (compensation) ಹಣವನ್ನು ಪಡೆಯಲು ನಿರಾಕರಿಸಿದ್ದು. ಆದರೆ, ಈ ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ಸಿದ್ದರಾಮಯ್ಯ ಬಾಗಲಕೋಟೆಯ ಮಿರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಪಾಲ ಅವರ ಕುಟುಂಬಕ್ಕೆ ಒತ್ತಾಯದಿಂದ ಹಣ ನೀಡಿದರು.