ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ದ್ರೌಪದಿ ಮುರ್ಮು ಜೆಡಿ(ಎಸ್) ಪಕ್ಷದ ಬೆಂಬಲ ಯಾಚಿಸಿ ಆಶೀರ್ವಾದ ಪಡೆದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2022 | 10:37 AM

ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ನಿಯೋಗವೊಂದು ಮುರ್ಮು ಅವರೊಂದಿಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಕಿಶನ್ ರೆಡ್ಡಿ ಮತ್ತು ಸಿಟಿ ರವಿ ನಿಯೋಗದ ಭಾಗವಾಗಿದ್ದರು.

ಬೆಂಗಳೂರು: ಇದನ್ನು ನಿರೀಕ್ಷಿಸಲಾಗಿತ್ತು. ರಾಷ್ಟ್ರಪತಿ ಹುದ್ದೆಗೆ ಎನ್ ಡಿ ಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು (Draupadi Murmu) ಅವರು ರವಿವಾರ ರಾತ್ರಿ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಮತ್ತು ಜೆಡಿ(ಎಸ್) ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ನಿವಾಸಕ್ಕೆ ಭೇಟಿ ನೀಡಿ ಅವರ ಪಕ್ಷದ ಬೆಂಬಲ ಯಾಚಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ನಿಯೋಗವೊಂದು ಮುರ್ಮು ಅವರೊಂದಿಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಕಿಶನ್ ರೆಡ್ಡಿ (Kishan Reddy) ಮತ್ತು ಸಿಟಿ ರವಿ ನಿಯೋಗದ ಭಾಗವಾಗಿದ್ದರು. ಹೆಚ್ ಡಿ ಕುಮಾರಸ್ವಾಮಿ, ಮತ್ತು ಹೆಚ್ ಡಿ ರೇವಣ್ಣ ಕೂಡ ಗೌಡರ ನಿವಾಸದಲ್ಲಿದ್ದರು.

ಇದನ್ನೂ ಓದಿ:   Viral Video: ಹಠಾತ್ ಆಗಿ ನೀರಿನಿಂದ ಮೇಲೆ ಬಂದು ದಾಳಿ ನಡೆಸಿದ ಅನಕೊಂಡ! ಮೈ ಜುಮ್ಮೆನ್ನುವ ವಿಡಿಯೋ ಇಲ್ಲಿದೆ

Follow us on