Viral Video: ಹಠಾತ್ ಆಗಿ ನೀರಿನಿಂದ ಮೇಲೆ ಬಂದು ದಾಳಿ ನಡೆಸಿದ ಅನಕೊಂಡ! ಮೈ ಜುಮ್ಮೆನ್ನುವ ವಿಡಿಯೋ ಇಲ್ಲಿದೆ

ಅನಕೊಂಡದ ಬಾಯಿಯಿಂದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೈ ಜುಮ್ಮೆನ್ನುವ ವಿಡಿಯೋ ಇಲ್ಲಿದೆ ನೋಡಿ.

Viral Video: ಹಠಾತ್ ಆಗಿ ನೀರಿನಿಂದ ಮೇಲೆ ಬಂದು ದಾಳಿ ನಡೆಸಿದ ಅನಕೊಂಡ! ಮೈ ಜುಮ್ಮೆನ್ನುವ ವಿಡಿಯೋ ಇಲ್ಲಿದೆ
ದಾಳಿ ನಡೆಸಿದ ಅನಕೊಂಡ
Follow us
| Updated By: Rakesh Nayak Manchi

Updated on:Jul 10, 2022 | 3:58 PM

ಅಮೆಜಾನ್ ಜಲಾನಯನ ಪ್ರದೇಶದ ಉಷ್ಣವಲಯದ ಮಳೆಕಾಡುಗಳಲ್ಲಿಅನಕೊಂಡ(Anaconda)ಗಳು ಸಾಮಾನ್ಯವಾಗಿ  ಮುಖ್ಯವಾಗಿ ಜೌಗು ಪ್ರದೇಶಗಳು, ಜವುಗು ಮತ್ತು ನಿಧಾನವಾಗಿ ಚಲಿಸುವ ತೊರೆಗಳಲ್ಲಿ ಹೆಚ್ಚಾಗಿ ಕಾಣಸಿಗುವ ಅನಕೊಂಡಗಳು, ನೀರಿನಲ್ಲಿ ಅಡಗಿಕುಳಿತಿರುತ್ತದೆ. ಇವುಗಳು ಕಾಡು ಹಂದಿಗಳು, ಜಿಂಕೆಗಳು, ಪಕ್ಷಿಗಳು, ಆಮೆಗಳು ಮತ್ತು ಜಾಗ್ವಾರ್‌ಗಳನ್ನು ಬೇಟೆಯಾಡುತ್ತವೆ. ತಮ್ಮ ಸ್ನಾಯುವಿನ ದೇಹಗಳನ್ನು ಬೇಟೆಯ ಸುತ್ತಲೂ ಸುತ್ತಿಕೊಂಡು ಉಸಿರುಗಟ್ಟಿಸಿ ನಂತರ ನುಂಗುತ್ತವೆ. ಇಂತಹ ಅನಕೊಂಡದ ಬಾಯಿಯಿಂದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral Video: “ನ್ಯಾಚುರಲ್ ವಾಟರ್ ಸ್ಪ್ರೇಯರ್”, ಬಾಯಿಂದ ನೀರನ್ನು ಸ್ಪ್ರೇ ಮಾಡುತ್ತಾ ಬಟ್ಟೆಗಳಿಗೆ ಇಸ್ತ್ರಿ ಹಾಕುವ ಅಂಕಲ್

ಬ್ರೆಜಿಲಿಯನ್ ಮೀನುಗಾರಿಕಾ ಮಾರ್ಗದರ್ಶಿ ಅನಕೊಂಡ ಹಾವಿನಿಂದ ದಾಳಿಗೊಳಗಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. 38 ವರ್ಷದ ಜೊವೊ ಸೆವೆರಿನೊ ಎಂಬವರು ಸೆರೆಹಿಡಿದಿರುವ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ವೈರಲ್ ವಿಡಿಯೋ, ಅನಕೊಂಡವು ಕ್ಷಣಾರ್ಧದಲ್ಲೇ ನೀರಿನಿಂದ ಮೇಲಕ್ಕೆ ಬಂದು ಜೊವೊ ಅವರನ್ನು ಕಚ್ಚುವುದನ್ನು ತೋರಿಸುತ್ತದೆ.

ಜೂನ್ 30 ರಂದು ಮಧ್ಯ ಬ್ರೆಜಿಲಿಯನ್ ರಾಜ್ಯವಾದ ಗೋಯಾಸ್‌ನಲ್ಲಿ ಅರಗುವಾಯಾ ನದಿಯ ಉದ್ದಕ್ಕೂ ದೋಣಿಯಲ್ಲಿ ಪ್ರವಾಸಿಗರ ಗುಂಪನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಅನಕೊಂಡ ನೀರಿನಲ್ಲಿ ಪತ್ತೆಯಾಗಿದೆ. ನೀರಿನ ಕೆಳಗೆ ಎರಡು ಮರದ ದಿಮ್ಮಿಗಳ ನಡುವೆ ಸುರುಳಿಯಾಗಿರುವ ಅನಕೊಂಡವನ್ನು ವಿಡಿಯೋ ಕ್ಲಿಪ್ ತೋರಿಸುತ್ತದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಅನಕೊಂಡದ ದೃಶ್ಯಾವಳಿಯನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲು ಮುಂದಾಗಿ ಅನಕೊಂಡಾದ ಮೇಲೆ ಕ್ಯಾಮರಾವನ್ನು ಕೇಂದ್ರೀಕರಿಸಿದ್ದಾರೆ. ಈ ವೇಳೆ ಹಠಾತ್ ಆಗಿ ಮೇಲೆ ಬಂದ ಅನಕೊಂಡ ದಾಳಿ ನಡೆಸಿದೆ. ಈ ವೇಳೆ ಭಯಬೀತರಾಗಿರುವ ಸೆವೆರಿನೊ ಅವರು ನಗುತ್ತಿರುವುದನ್ನು ವಿಡಿಯೋದಲ್ಲಿ ಕೇಳಿಸಬಹುದು. ಅಲ್ಲದೆ, ”ನಾನು ಒಂದು ಸ್ಟಂಪ್​ನಲ್ಲಿ ಹಾವನ್ನು ನೋಡಿದ್ದೇನೆ. ಅಲ್ಲಿ ಅನಕೊಂಡ ಇದೆ, ಅದನ್ನು ನಾನು ನಿಮಗೆ ತೋರಿಸಲು ಚಿತ್ರೀಕರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾವಿನ ದಾಳಿಯಿಂದ ಸೆವೆರಿನೊ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: Viral Pic: 1 ತಿಂಗಳ ಮೇಕೆ ಮರಿಗೆ 56 ಸೆ.ಮೀ. ಉದ್ದದ ಕಿವಿಗಳು! ವೈರಲ್ ಆಗುತ್ತಿರುವ ಮೇಕೆಯ ಫೋಟೋ ಇಲ್ಲಿದೆ

ಇದನ್ನೂ  ಓದಿ: Viral Video: ಕೇರಳದ ಲುಲು ಮಾಲ್​ನಲ್ಲಿ ಖರೀದಿಗಾಗಿ ಮಧ್ಯರಾತ್ರಿಯಲ್ಲಿ ಹರಿದು ಬಂದ ಜನಸಾಗರ

Published On - 3:58 pm, Sun, 10 July 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್