Viral Pic: 1 ತಿಂಗಳ ಮೇಕೆ ಮರಿಗೆ 56 ಸೆ.ಮೀ. ಉದ್ದದ ಕಿವಿಗಳು! ವೈರಲ್ ಆಗುತ್ತಿರುವ ಮೇಕೆಯ ಫೋಟೋ ಇಲ್ಲಿದೆ
Viral Photo: ಅತ್ಯಂತ ಉದ್ದನೆಯ ಕಿವಿಗಳೊಂದಿಗೆ ಮೇಕೆ ಮರಿಯೊಂದು ಜನಿಸಿದ ಅಪರೂಪದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಸದ್ಯ ಮೇಕೆಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಇದರ ಫೋಟೋ ಇಲ್ಲಿದೆ ನೋಡಿ.
ಈ ಜಗತ್ತಿನಲ್ಲಿ ಒಂದಲ್ಲಾ ಒಂದು ಪವಾಡ, ವಿಸ್ಮಯ, ಅಚ್ಚರಿಗಳು ನಡೆಯುತ್ತಲೇ ಇರುತ್ತದೆ. ಇಂತಹ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಪಾಕಿಸ್ತಾನದಲ್ಲಿ 1ತಿಂಗಳ ಹಿಂದೆ ಹುಟ್ಟಿದ ಮೇಕೆ ಮರಿ ಅತ್ಯಂತ ಉದ್ದನೆಯ ಕಿವಿಗಳನ್ನು ಹೊಂದುವ ಮೂಲಕ ವೈರಲ್ ಆಗುತ್ತಿದೆ. ಜೂನ್ 4 ರಂದು ದಕ್ಷಿಣ ನಗರದ ಕರಾಚಿಯಲ್ಲಿ ಬ್ರೀಡರ್ ಮೊಹಮ್ಮದ್ ಹಸನ್ ನರೇಜೋ ಅವರಿಗೆ ಸೇರಿದ ಮೇಕೆಯೊಂದು ಅತ್ಯಂತ ಉದ್ದನೆಯ ಕಿವಿ ಇರುವ ಮರಿಗೆ ಜನ್ಮ ನೀಡಿದೆ. ಇದಕ್ಕೆ ಹಸನ್ ನರೇಜೋ ಅವರು ಸಿಂಬಾ ಎಂದು ಹೆಸರಿಟ್ಟಿದ್ದಾರೆ. ಫೋಟೋ ವೈರಲ್ ಆಗುತ್ತಿದ್ದ ಬೆನ್ನಲ್ಲೆ ಮೇಕೆಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನುಬಿಯನ್ ತಳಿಗೆ ಸೇರಿದ ಮೇಕೆ ಇದಾಗಿದೆ. ನುಬಿಯನ್ ಆಡುಗಳು ಉತ್ತಮ ಗುಣಮಟ್ಟದ ಬೆಣ್ಣೆಯ ಹಾಲನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ, ಈ ಹಾಲನ್ನು ಕುಡಿಯಬಹುದಾಗಿದ್ದು, ಐಸ್ ಕ್ರೀಮ್, ಮೊಸರು, ಚೀಸ್ ಮತ್ತು ಬೆಣ್ಣೆಯನ್ನು ತಯಾರಿಸಲು ಬಳಸುತ್ತಾರೆ.
ಸಿಂಬಾ 46 ಸೆಂಟಿಮೀಟರ್ (18.11 ಇಂಚು) ಉದ್ದದ ಕಿವಿಯೊಂದಿಗೆ ಜನಿಸಿದ್ದು, ಸದ್ಯ ಕಿವಿಯ ಉದ್ದ 50 ಸೆ.ಮೀ.ಗೂ ಅಧಿಕವಾಗಿದೆ. ಸಿಂಬಾದ ಬಗ್ಗೆ ಕರಾಚಿಯಿಂದ ಫೋನ್ ಮೂಲಕ ಡಾಯ್ಚ ಪ್ರೆಸ್-ಅಜೆಂಟೂರ್ (ಡಿಪಿಎ) ಜೊತೆ ಮಾತನಾಡಿದ ಬ್ರೀಡರ್ ಮೊಹಮ್ಮದ್ ಹಸನ್ ನರೇಜೋ, “ನನ್ನ ಕುಟುಂಬ ಮತ್ತು ನಾನು ಮೇಕೆ ಮರಿಯನ್ನು ನೋಡಿದಾಗ ನಮ್ಮ ಕಣ್ಣುಗಳಿಂದ ನಂಬಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಸಿಂಬಾ ಹುಟ್ಟಿದ ಒಂದು ತಿಂಗಳ ನಂತರ ಅದರ ಕಿವಿಗಳು ಈಗ 56 ಸೆಂಟಿಮೀಟರ್‌ಗಳಷ್ಟು ಉದ್ದವಾಗಿದೆ, ಅದರ ದೇಹದ ಎತ್ತರಕ್ಕಿಂತಲೂ ಉದ್ದವಾದ ಕಿವಿಗಳನ್ನು ಹೊಂದಿದೆ. ಸಿಂಬಾ ನಡೆಯುವಾಗ ಕಿವಿಗಳು ನೆಲಕ್ಕೆ ತಾಗುತ್ತವೆ. ತನ್ನ ಕಿವಿಗಳನ್ನು ನೆಲದಲ್ಲಿ ಎಳೆದುಕೊಂಡು ಹೋಗುತ್ತದೆ ಎಂದು ನರೇಜೋ ಹೇಳಿದ್ದಾರೆ.
ಕಿವಿಗಳನ್ನು ನೆಲದಲ್ಲಿ ಎಳೆದುಕೊಂಡು ಹೋಗುವುದನ್ನು ತಪ್ಪಿಸಲು ಮಾಲೀಕರು ಪರಿಹಾರವನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ನರೇಜೋ, “ನಾನು ಸಿಂಬಾದ ಕಿವಿಗೆ ಗೋಣಿಚೀಲವನ್ನು ಹೊಲಿಯಿದ್ದೇನೆ. ಅದರ ಕಿವಿಗಳನ್ನು ಚೀಲದ ಒಳಗೆ ಹಾಕಿ ಚೀಲವನ್ನು ಅದರ ಕುತ್ತಿಗೆಗೆ ಸುತ್ತುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: Viral Video: 50ನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿ ಸೌರವ್ ಗಂಗೂಲಿ ಮಾಡಿದ ಡಾನ್ಸ್ ವಿಡಿಯೋ ವೈರಲ್
ಸಿಂಬಾ ಹುಟ್ಟಿದ ನಂತರ ಇಡೀ ನರೇಜೋ ಕುಟುಂಬದ ಜೀವನ ಬದಲಾಗಿದೆ. “ಕಳೆದ ತಿಂಗಳು ನನ್ನ ಮನೆಯು ಕರಾಚಿಯಲ್ಲಿ ಹೆಚ್ಚು ಬೇಡಿಕೆಯಿರುವ ಸ್ಥಳವಾಗಿ ಮಾರ್ಪಟ್ಟಿದೆ. ನಾನು ಟಿವಿಯಲ್ಲಿ ಕನಿಷ್ಠ ಹನ್ನೆರಡು ಕಾರ್ಯಕ್ರಮಗಳಿಗೆ ಹೋಗಿದ್ದೇನೆ ಮತ್ತು ಪ್ರತಿದಿನ ಪತ್ರಿಕೆಗಳು ಮತ್ತು ದೂರದರ್ಶನ ವರದಿಗಾರರಿಗೆ ಹಲವಾರು ಸಂದರ್ಶನಗಳನ್ನು ನೀಡುತ್ತೇನೆ. ಇದಲ್ಲದೆ ಅವರು ಸಿಂಬಾವನ್ನು ಖರೀದಿಸಲು ಸೌದಿ ಅರೇಬಿಯಾ, ಓಮನ್ ಮತ್ತು ಬಹ್ರೇನ್‌ಗಳಲ್ಲಿನ ತಳಿಗಾರರಿಂದ ಲಕ್ಷಾಂತರ ರೂಪಾಯಿಗಳ ಆಫರ್ಗಳು ಬಂದಿವೆ. ಆದರೆ ನಾನು ನನ್ನ ಸಿಂಬಾವನ್ನು ಮಾರಲು ಬಯಸುವುದಿಲ್ಲ ಎಂದಿದ್ದಾರೆ.
Baby goat "Simba" in Karachi, Pakistan has made a world record with its ears as long as 48 centimeters, very much longer than the normal size of ears.https://t.co/YM9lJZDNtw
?: Yousuf Khan pic.twitter.com/z6kZnrbpwl
— Anadolu Images (@anadoluimages) June 17, 2022
ಸಿಂಬಾ ಅಂತ ಹೆಸರಿಡಲು ಕಾರಣ ಏನು ಗೊತ್ತಾ?
ಸಿಂಬಾದ ಮೈ ಬಣ್ಣ ನೋಡಲು ಸಿಂಹದಂತೆ, ಸಿಂಹವನ್ನು ಹೋಲುವ ಕಂದು ಬಣ್ಣದ ಚರ್ಮದ ಬಣ್ಣದಿಂದ ಕೂಡಿದ್ದು, ಇದೇ ಕಾರಣಕ್ಕೆ ನರೇಜೋ ಅವರು ಮೇಕೆ ಮರಿಗೆ ಸಿಂಬಾ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮಾಲೀಕ, “ನನ್ನ ಕಿರಿಯ ಸಹೋದರ ಮತ್ತು ನಾನು ಸಿಂಬಾ ಸಿಂಹದ ಅನಿಮೇಟೆಡ್ ಪಾತ್ರದ ಅಭಿಮಾನಿಗಳು” ಎಂದು ಹೇಳಿಕೊಂಡಿದ್ದಾರೆ.
ಕೃತಕ ಗರ್ಭಧಾರಣೆಗಾಗಿ ಸಿಂಬಾದ ವೀರ್ಯ ಬಳಕೆ
ಸಿಂಬಾವನ್ನು ಕೃತಕ ಗರ್ಭಧಾರಣೆಗಾಗಿ ಬಳಕೆ ಮಾಡುವುದಾಗಿ ಮಾಲೀಕರು ಹೇಳಿದ್ದಾರೆ. “ಸಿಂಬಾದ ವೀರ್ಯವನ್ನು ಕೃತಕ ಗರ್ಭಧಾರಣೆಗಾಗಿ ಸಂರಕ್ಷಿಸಲು ನಾನು ಯೋಜಿಸುತ್ತೇನೆ ಎಂದಿದ್ದಾರೆ. ದುಷ್ಟ ಕಣ್ಣಿನಿಂದ ದೂರವಿರಲು ಮೇಕೆಯ ಕುತ್ತಿಗೆಗೆ ಕಪ್ಪು ದಾರ ಕಟ್ಟಲಾಗಿದೆ.
ಇದನ್ನೂ ಓದಿ: Viral Video: ಕೇರಳದ ಲುಲು ಮಾಲ್ನಲ್ಲಿ ಖರೀದಿಗಾಗಿ ಮಧ್ಯರಾತ್ರಿಯಲ್ಲಿ ಹರಿದು ಬಂದ ಜನಸಾಗರ