Viral: ಸಂಬಳದ ಸಮಾಲೋಚನೆಗಾಗಿ ತಾಯಿಯನ್ನು ಕರೆಯಲ್ಲಿ ಮಾತನಾಡಿಸಬಹುದೇ? ಟಿಕ್ಕಿಯ ಪ್ರಶ್ನೆಗೆ ನೆಟ್ಟಿಗರ ಕಾಮೆಂಟ್ ಹೇಗಿತ್ತು ಗೊತ್ತಾ?

ಸಂಬಳದ ಸಮಾಲೋಚನೆಯನ್ನು ತಾಯಿಯೊಂದಿಗೆ ನಡೆಸಬಹುದೇ? ಟೆಕ್ಕಿಯ ಪೋಸ್ಟ್​ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಸ್ಯವಾಗಿ ಕಾಮೆಂಟ್ ಮಾಡಿದ್ದಾರೆ.

Viral: ಸಂಬಳದ ಸಮಾಲೋಚನೆಗಾಗಿ ತಾಯಿಯನ್ನು ಕರೆಯಲ್ಲಿ ಮಾತನಾಡಿಸಬಹುದೇ? ಟಿಕ್ಕಿಯ ಪ್ರಶ್ನೆಗೆ ನೆಟ್ಟಿಗರ ಕಾಮೆಂಟ್ ಹೇಗಿತ್ತು ಗೊತ್ತಾ?
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jul 10, 2022 | 10:56 AM

ಗೊಂದಲ್ಲಿ ಸಿಕ್ಕಿಹಾಕಿಕೊಂಡಾಗ ತಾಯಿಯೊಂದಿಗೆ ಮಾತುಕತೆ ನಡೆಸಿದರೆ ಅದು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಅದರಂತೆ ಟೆಕ್ಕಿಯೊಬ್ಬರು ತನ್ನ ಸಂಬಳದ ವಿಚಾರದಲ್ಲಿ ಗೊಂದಲಕ್ಕೀಡಾದಾಗ ತನ್ನ ತಾಯಿಯನ್ನು ಕರೆತರುವ ಬಗ್ಗೆ ಮನವಿ ಮಾಡಿದ್ದಾರೆ. ತಮ್ಮ ತಾಯಿಯನ್ನು ಸಂಬಳದ ಮಾತುಕತೆಯ ಕರೆಗೆ ಕರೆತರಬಹುದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಟಿಕ್ಕಿ ಕೇಳಿರುವ ಪ್ರಶ್ನೆ ಇದೀಗ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: Viral Video: 50ನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿ ಸೌರವ್ ಗಂಗೂಲಿ ಮಾಡಿದ ಡಾನ್ಸ್ ವಿಡಿಯೋ ವೈರಲ್

ಕಂಪನಿಯ ಮಾನವ ಸಂಪನ್ಮೂಲ (HR) ಅವರೊಂದಿಗೆ ದೂರವಾಣಿ ಕರೆ ಮೂಲಕ ವೇತನದ ಮಾತುಕತೆ ನಡೆಸುವಾಗ ಆತಂಕ, ಭಯ ಇದ್ದೇ ಇರುತ್ತದೆ. ಟೆಕ್ಕಿ ನಿತೇಶ್ ಅವರು ಇದಕ್ಕಾಗಿ ಅದ್ಭುತ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಉದ್ಯೋಗಕ್ಕೆ ಸಂಬಂಧಿಸಿದ ಲಿಂಕ್ಡ್‌ಇನ್‌ ಆ್ಯಪ್​ನಲ್ಲಿ ನಿತೇಶ್ ಅವರು ಪೋಸ್ಟ್ ಒಂದನ್ನು ಹಾಕಿದ್ದು, ಅವರು ”ನಾನು ಸಂಬಳದ ಸಮಾಲೋಚನೆಗಾಗಿ ನನ್ನ ತಾಯಿಯನ್ನು ಕರೆಯಲ್ಲಿ ಮಾತನಾಡಿಸಬಹುದೇ? ಏಕೆಂದರೆ ಅವರು ಖಂಡಿತವಾಗಿಯೂ ಉತ್ತಮ ವ್ಯವಹಾರವನ್ನು ಮಾಡಬಹುದು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಕೇರಳದ ಲುಲು ಮಾಲ್​ನಲ್ಲಿ ಖರೀದಿಗಾಗಿ ಮಧ್ಯರಾತ್ರಿಯಲ್ಲಿ ಹರಿದು ಬಂದ ಜನಸಾಗರ

No alternative text description for this image

ಸದ್ಯ ನಿತೇಶ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಈ ಪೋಸ್ಟ್​ಗೆ ಸಾಕಷ್ಟು ಕಾಮೆಂಟ್​ಗಳನ್ನು ಮಾಡಿದ್ದಾರೆ. ಕೆಲವು ಜನರು ಅದನ್ನು ಸಾಪೇಕ್ಷವಾಗಿ ಕಂಡುಕೊಂಡರೆ, ಕೆಲವರು ಅದನ್ನು ಸರಳವಾಗಿ ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಪೋಸ್ಟ್​ಗೆ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು, “ನನ್ನ ತಾಯಿ ಮಾತುಕತೆ ನಡೆಸಲು ಪ್ರಾರಂಭಿಸಿದರೆ ಎಚ್​ಆರ್​ ಖಂಡಿತವಾಗಿಯೂ ಮೂರ್ಛೆ ಹೋಗುತ್ತಾನೆ” ಎಂದು ಹಾಸ್ಯವಾಗಿ ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರರು, “ಪ್ರತಿಯೊಂದು ಸನ್ನಿವೇಶದಲ್ಲೂ ಅಮ್ಮ ಖಂಡಿತವಾಗಿ ಅತ್ಯುತ್ತಮ ಚೌಕಾಸಿದಾರರು” ಎಂದು ಕಾಮೆಂಟ್ ಮಾಡಿದ್ದಾರೆ. ಮಗದೊಬ್ಬರು ಪ್ರತಿಕ್ರಿಯಿಸಿ, “1-1 ಮೌಲ್ಯಮಾಪನ ಚರ್ಚೆಗಾಗಿ ನಿಮ್ಮ ತಂದೆಯನ್ನು ಕರೆಯಲು ನಿಮ್ಮ ಮ್ಯಾನೇಜರ್ ನಿಮ್ಮನ್ನು ವಿನಂತಿಸುವುದನ್ನು ಕಲ್ಪಿಸಿಕೊಳ್ಳಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral: 72ನೇ ವಯಸ್ಸಿನಲ್ಲಿ ಅಮೆರಿಕವನ್ನು ದಾಟಿ ವಿಶ್ವ ಗಿನ್ನಿಸ್ ದಾಖಲೆ ಮುರಿದ ವೃದ್ಧೆ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು