Viral Video: “ನ್ಯಾಚುರಲ್ ವಾಟರ್ ಸ್ಪ್ರೇಯರ್”, ಬಾಯಿಂದ ನೀರನ್ನು ಸ್ಪ್ರೇ ಮಾಡುತ್ತಾ ಬಟ್ಟೆಗಳಿಗೆ ಇಸ್ತ್ರಿ ಹಾಕುವ ಅಂಕಲ್
ವಯಸ್ಸಾಗಿರುವ ವ್ಯಕ್ತಿಯೊಬ್ಬರು ಬಾಯಿಯಿಂದ ನೀರನ್ನು ಬಟ್ಟೆಗೆ ಉಗುಳುತ್ತಾ ಇಸ್ತ್ರಿ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ನೀವು ಅಂಗಡಿಗಳಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡುವುದನ್ನು ನೋಡಿರಬಹುದು. ಬಟ್ಟೆಗಳನ್ನು ಸಾಮಾನ್ಯವಾಗಿ ಇಸ್ತ್ರಿ ಮಾಡುವಾಗ ಸ್ವಲ್ಪ ನೀರನ್ನು ಸಿಂಪಡಿಸಲಾಗುತ್ತದೆ. ಇದು ಕಬ್ಬಿಣದಂತಹ ವಸ್ತುವನ್ನು ಬಟ್ಟೆ ಮೇಲೆ ಇಡುವಾಗ ಬಟ್ಟೆ ಸರಿಯಾಗಿ ನಿಲ್ಲುವಂತೆ ಮಾಡಲು ನೀರನ್ನು ಸಿಂಪಡಿಸಲಾಗುತ್ತದೆ. ಅದಾಗ್ಯೂ ವಯಸ್ಸಾಗಿರುವ ವ್ಯಕ್ತಿಯೊಬ್ಬರು ಇದಕ್ಕೆ ವಿಭಿನ್ನವಾಗಿ ಚಿಂತಸಿ ಬಾಯಿಯಿಂದಲೇ ನೀರನ್ನು ಸ್ಪ್ರೇ ಮಾಡಲು ಮುಂದಾಗಿದ್ದಾರೆ. ಸದ್ಯ ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. THE ADULT SOCIETY ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಟ್ಟೆಗಳನ್ನು ಐರನ್ ಮಾಡುವ ಅಂಕಲ್ನ ವಿಡಿಯೋವನ್ನು ಹಂಚಿಕೊಂಡಿದ್ದು, ನೈಸರ್ಗಿಕ ನೀರಿನ ಸಿಂಪಡಿಸುವ ಯಂತ್ರ (Natural water sprayer) ಎಂದು ಶೀರ್ಷಿಕೆ ಬರೆದುಕೊಂಡಿದೆ. ಈ ವಿಡಿಯೋ ಈವರೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 1.26 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ.
ಇದನ್ನೂ ಓದಿ: Viral Pic: 1 ತಿಂಗಳ ಮೇಕೆ ಮರಿಗೆ 56 ಸೆ.ಮೀ. ಉದ್ದದ ಕಿವಿಗಳು! ವೈರಲ್ ಆಗುತ್ತಿರುವ ಮೇಕೆಯ ಫೋಟೋ ಇಲ್ಲಿದೆ
ವೈರಲ್ ವಿಡಿಯೋದಲ್ಲಿ ಇರುವಂತೆ, ವಯಸ್ಸಾಗಿರುವ ವ್ಯಕ್ತಿಯೊಬ್ಬರು ಅಂಗಡಿಯಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕುವಾಗ ಬಾಯಿಯಿಂದ ನೀರನ್ನು ಸಿಂಪಡಿಸುವುದನ್ನು ಕಾಣಬಹುದು. ಸಣ್ಣ ಪಾತ್ರೆಯಲ್ಲಿ ನೀರನ್ನು ತುಂಬಿರುವ ಅಂಕಲ್, ಬಟ್ಟೆಗೆ ಇಸ್ತ್ರಿ ಹಾಕುವಾಗ ಪಾತ್ರೆಯಲ್ಲಿರುವ ನೀರನ್ನು ಬಾಯಿಗೆ ತುಂಬಿಸಿ ನಂತರ ಬಟ್ಟೆಗೆ ಸ್ಪ್ರೇ (ಉಗುಳುವುದು) ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ವೈರಲ್ ವಿಡಿಯೋದಲ್ಲಿರುವ ವ್ಯಕ್ತಿಯ ಗುರುತು ಹಾಗೂ ಆ ಊರಿನ ಹೆಸರು ಯಾವುದು ಎಂದು ತಿಳಿದುಬಂದಿಲ್ಲ.
View this post on Instagram
ವೈರಲ್ ವಿಡಿಯೋವನ್ನು ನೋಡಿದ ನೆಟ್ಟಿಗರು, ಅಂಕಲ್ ನಡೆಯನ್ನು ಖಂಡಿಸಿದ್ದು, ಕಾಮೆಂಟ್ ಬಾಕ್ಸ್ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರೊಬ್ಬರು, ”ಬಟ್ಟೆಗಳನ್ನು ಹಾಳುಮಾಡಲು ಕೆಟ್ಟ ಮಾರ್ಗ” ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ಅವರು ಶಾಂತಿಯುತ ಸಮುದಾಯದಿಂದ ಬಂದವರು” ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಈ ಹಿಂದೆ ತಿನ್ನುವ ಆಹಾರಗಳಿಗೆ ಎಂಜಲು ಉಗಿಯುತ್ತಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಇಂತಹ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Viral Video: 50ನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿ ಸೌರವ್ ಗಂಗೂಲಿ ಮಾಡಿದ ಡಾನ್ಸ್ ವಿಡಿಯೋ ವೈರಲ್
Published On - 3:22 pm, Sun, 10 July 22