Shocking News: ಪುರುಷನಿಗೂ ಪಿರಿಯಡ್ಸ್!; ಹೊಟ್ಟೆ ನೋವೆಂದು ಡಾಕ್ಟರ್ ಬಳಿ ಹೋದವನಿಗೆ ಶಾಕ್
ಚೆನ್ ಲಿ ಎಂಬ 33 ವರ್ಷದ ವ್ಯಕ್ತಿಗೆ ಆರಂಭದಲ್ಲಿ ಕಿಬ್ಬೊಟ್ಟೆ ನೋವು ಕಾಣಿಸಿಕೊಂಡಿತ್ತು. ಅಲ್ಲದೆ, ಮೂತ್ರ ವಿಸರ್ಜನೆ ಮಾಡುವಾಗ ಸ್ವಲ್ಪ ರಕ್ತವೂ ಹೋಗುತ್ತಿತ್ತು. ಆಗಾಗ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತಿತ್ತು.
ಜಗತ್ತಿನಲ್ಲಿ ನಾನಾ ರೀತಿಯ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಗಂಡಾಗಿ ಹುಟ್ಟಿದವರು ಹೆಣ್ಣಾಗಿ ಬದಲಾಗಿದ್ದು, ಹೆಣ್ಣಾಗಿ ಹುಟ್ಟಿದವರು ಕೊನೆಗೆ ಗಂಡಾಗಿ ಬದಲಾಗಿದ್ದು ಇಂತಹ ಘಟನೆಗಳೆಲ್ಲ ಈಗೀಗ ಹೆಚ್ಚು ಬೆಳಕಿಗೆ ಬರುತ್ತಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ನೋಡಲು ಸೇಮ್ ಟು ಟೇಮ್ ಪುರುಷನಂತೆಯೇ ಇದ್ದರೂ, ಆತನಿಗೆ ಪುರುಷ ಜನನಾಂಗವೇ ಇದ್ದರೂ ಕಳೆದ 20 ವರ್ಷಗಳಿಂದ ಆತನಿಗೂ ಋತುಚಕ್ರವಾಗುತ್ತಿರುವ ಅಚ್ಚರಿಯ ಸಂಗತಿ ವೈದ್ಯಕೀಯ ತಪಾಸಣೆ ವೇಳೆ ಬಯಲಾಗಿದೆ. ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆ ಹಾಗೂ ಆಗಾಗ ಹೊಟ್ಟೆನೋವು (Stomach Pain) ಬರುತ್ತಿದೆ ಎಂಬ ಕಾರಣಕ್ಕೆ ಚೀನಾದ (China) ಪುರುಷನೊಬ್ಬರು ವೈದ್ಯರ ಬಳಿ ಚೆಕಪ್ಗೆಂದು ಹೋದಾಗ ಈ ವಿಷಯ ಬೆಳಕಿಗೆ ಬಂದಿದೆ. 20 ವರ್ಷಗಳಿಂದ ತನಗೆ ಪಿರಿಯಡ್ಸ್ (menstruating) ಆಗುತ್ತಿದೆ, ತನ್ನೊಳಗೂ ಅಂಡಾಶಯವಿದೆ ಎಂಬ ವಿಷಯ ತಿಳಿದು ಆ ವ್ಯಕ್ತಿ ಶಾಕ್ ಆಗಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಚೆನ್ ಲಿ ಎಂಬ 33 ವರ್ಷದ ವ್ಯಕ್ತಿಗೆ ಆರಂಭದಲ್ಲಿ ಕಿಬ್ಬೊಟ್ಟೆ ನೋವು ಕಾಣಿಸಿಕೊಂಡಿತ್ತು. ಅಲ್ಲದೆ, ಮೂತ್ರ ವಿಸರ್ಜನೆ ಮಾಡುವಾಗ ಸ್ವಲ್ಪ ರಕ್ತವೂ ಹೋಗುತ್ತಿತ್ತು. ಆಗಾಗ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ, ತನಗೆ ಯಾವ ಸಮಸ್ಯೆಯಿದೆ ಎಂದು ತಿಳಿಯಲು ಅವರು ವೈದ್ಯರ ಬಳಿ ಹೋದರು.
ಅವರನ್ನು ಪರೀಕ್ಷಿಸಿದ ವೈದ್ಯರು ಮೊದಲು ಅವರಿಗೆ ಅಪೆಂಡಿಸೈಟಿಸ್ ಎಂಬ ರೋಗವಿದೆ ಎಂಬ ನಿರ್ಧಾರಕ್ಕೆ ಬಂದರು. ಮತ್ತೊಮ್ಮೆ ಪರೀಕ್ಷಿಸಿದಾಗ ಸ್ಕ್ಯಾನಿಂಗ್ನಲ್ಲಿ ಆ ವ್ಯಕ್ತಿಗೆ ಅಂಡಾಶಯ ಇರುವುದು ಗೊತ್ತಾಯಿತು. ಪ್ರತಿ ತಿಂಗಳು ಮಹಿಳೆಯರಿಗೆ ಋತುಚಕ್ರವಾಗುವಂತೆ ಆತನಿಗೂ ಪ್ರತಿ ತಿಂಗಳು ಹೊಟ್ಟೆನೋವು ಮತ್ತು ಮೂತ್ರದಲ್ಲಿ ರಕ್ತಸ್ರಾವವಾಗುತ್ತಿತ್ತು. ಆಗ ಅವರು ಕಳೆದ 20 ವರ್ಷಗಳಿಂದ ಇದೇ ರೀತಿ ಪಿರಿಯಡ್ಸ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಬಯಲಾಯಿತು.
ಇದನ್ನೂ ಓದಿ: Shocking News: ರೆಸ್ಟೋರೆಂಟ್ನಲ್ಲಿ ಮೋಮೋಸ್ ತಿನ್ನುವಾಗ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!
ಮೊದಲು ಅಪೆಂಡಿಸೈಟಿಸ್‌ಗೆ ಚಿಕಿತ್ಸೆ ನೀಡಲಾಗಿದ್ದರೂ, ಚೆನ್‌ನ ರೋಗಲಕ್ಷಣಗಳು ಮುಂದುವರಿದವು. ಹೀಗೆ 1 ವರ್ಷ ಚಿಕಿತ್ಸೆ ಮುಂದುವರೆಸಿದರೂ ಏನೂ ಉಪಯೋಗವಾಗದ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಲಾಯಿತು. ಆಗ ಅನುಮಾನಗೊಂಡ ಆ ವೈದ್ಯರು ಜನನಾಂಗದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಭೇಟಿ ನೀಡಲು ಸಿಚುವಾನ್ ಪ್ರಾಂತ್ಯದಿಂದ ಗುವಾಂಗ್‌ಝೌಗೆ ತೆರಳಲು ಸೂಚಿಸಿದರು. ಆಗ ಅಲ್ಲಿ ವೈದ್ಯಕೀಯ ಪರೀಕ್ಷೆಯ ಮೂಲಕ ಚೆನ್ ಅವರು ಗರ್ಭಾಶಯ ಮತ್ತು ಅಂಡಾಶಯದಂತಹ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿದ್ದಾರೆಂದು ಬಯಲಾಗಿದೆ.
ಇದನ್ನೂ ಓದಿ: Shocking News: ಮಿಸ್ ಆಗಿ 43 ಸಾವಿರದ ಬದಲು 1.43 ಕೋಟಿ ರೂ. ಸಂಬಳ ನೀಡಿದ ಕಂಪನಿ; ಶಾಕ್ ಆದ ಉದ್ಯೋಗಿ ಮಾಡಿದ್ದೇನು?
ಹೆಚ್ಚಿನ ವೈದ್ಯಕೀಯ ಪರೀಕ್ಷೆಯು ಅವನ ಪುರುಷ ಹಾರ್ಮೋನ್ ಆಂಡ್ರೊಜೆನ್ ಸರಾಸರಿಗಿಂತ ಕಡಿಮೆ ಮಟ್ಟವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಚೆನ್‌ನ ಸ್ತ್ರೀ ಹಾರ್ಮೋನುಗಳು ಮತ್ತು ಅಂಡಾಶಯಗಳು ಸಕ್ರಿಯವಾಗಿವೆ. ಆರೋಗ್ಯವಂತ ವಯಸ್ಕ ಮಹಿಳೆಯ ಅಂಡಾಶಯದ ರೀತಿಯಲ್ಲೇ ಚೆನ್‌ನ ಅಂಡಾಶಯವೂ ಇದೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಬಯಲಾಗಿದೆ. ಹೀಗಾಗಿ, ಆ ವ್ಯಕ್ತಿಯನ್ನು ದ್ವಿಲಿಂಗಿ ಎಂದು ಘೋಷಿಸಲಾಯಿತು.
Published On - 9:29 am, Mon, 11 July 22