ಇದನ್ನೂ ಓದಿ: Viral: 40 ಟ್ವೀಟ್‌ಗಳಲ್ಲಿ 40 ಉಪಯುಕ್ತ ಪರಿಕಲ್ಪನೆಗಳು, ಓದಲು ಏಳು ನಿಮಿಷ, ಜೀವಿತಾವಧಿ ಹೊಂದಿರುವ ಮೌಲ್ಯ
ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಬಿಂಡ್ಕಿ ಕೊಟ್ವಾಲಿ ಪ್ರದೇಶದಲ್ಲಿ ಕೆಲವರು ಆಟೋ ರಿಕ್ಷಾದಲ್ಲಿ ಹೊರಟಿದ್ದರು. ಬಿಂಡ್ಕಿ ಪ್ರದೇಶದ ಲಾಲೌಲಿಯ ಅಡ್ಡದಾರಿಯಲ್ಲಿ ಆಟೋ ಚಾಲಕ ಅತಿ ವೇಗದಲ್ಲಿ ಆಟೋ ಓಡಿಸುತ್ತಿದ್ದುದನ್ನು ಪೊಲೀಸರು ಗಮನಿಸಿದ್ದಾರೆ. ಪೊಲೀಸರು ಓಡಿ ಹೋಗಿ ಆಟೋ ನಿಲ್ಲಿಸಿದರು. ಇದಾದ ನಂತರ ಪೊಲೀಸರು ಮಕ್ಕಳು ಮತ್ತು ಹಿರಿಯರನ್ನು ಒಬ್ಬೊಬ್ಬರನ್ನಾಗಿ ಇಳಿಸಿದ್ದಾರೆ. ಆಟೋದಿಂದ ಜನರು ಇಳಿಯಲು ಆರಂಭಿಸಿದ ಕೂಡಲೇ ಪೊಲೀಸರಿಗೂ ಅಚ್ಚರಿ ಕಾದಿತ್ತು.ಸುಮಾರು 27 ಜನ ಮಕ್ಕಳಿಂದ ಹಿರಿಯರವರೆಗೂ ಆಟೋದಲ್ಲಿ ಇದ್ದರು. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಆಟೋವನ್ನು ವಶಕ್ಕೆ ಪಡೆದಿದ್ದಾರೆ.