ಹಣಕಾಸು ಸಂಸ್ಥೆ ಇಲ್ಲವೇ ಬ್ಯಾಂಕ್ಗಳಲ್ಲಿ ಹಣ ಹೂಡುವ ಮೊದಲು ಒಂದಷ್ಟು ಅಂಶಗಳನ್ನು ಗಣನೆಗೆ ತಂದುಕೊಳ್ಳಬೇಕು: ಡಾ ಬಾಲಾಜಿ ರಾವ್
ಎಲ್ಲ ಹಣಕಾಸು ಸಂಸ್ಥೆಗಳು ನಂಬಿಕೆ ಅರ್ಹವಲ್ಲ ಅಂತ ಡಾ ರಾವ್ ಹೇಳುವುದಿಲ್ಲವಾದರೂ, ಐ ಎಮ್ ಎ, ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್, ವಶಿಷ್ಟ ಮತ್ತು ಕಣ್ವ ಮೊದಲಾದ ಸಂಸ್ಥೆಗಳನ್ನು ಉಲ್ಲೇಖಿಸುತ್ತಾರೆ.
ಬ್ಯಾಂಕ್ಗಳಲ್ಲಿ ಹಣ ಹೂಡುವ ಮೊದಲು ನಮ್ಮಲ್ಲಿ ಇರೋ ಆಲೋಚನೆ ಒಂದೇ ಆಗಿರುತ್ತದೆ. ಯಾವ ಖಾತೆಯಲ್ಲಿ ಹಣ ಹೂಡಿದರೆ ಹೆಚ್ಚು ಬಡ್ಡಿ ಸಿಗುತ್ತದೆ, ಯಾವ ಬ್ಯಾಂಕ್ ನಮಗೆ ಹೆಚ್ಚು ಬಡ್ಡಿ ನೀಡುತ್ತದೆ. ನಮ್ಮ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ, ಖಾಸಗಿ ವಲಯದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚು ಬಡ್ಡಿ ನೀಡುತ್ತಿದ್ದರೆ ನಾವು ಹೂಡಿಕೆ ಮಾಡಲು ಅವುಗಳ ಬೆನ್ನಟ್ಟುತ್ತೇವೆ. ಈ ಹಿನ್ನೆಲೆಯಲ್ಲಿ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಹೂಡಿಕೆ ಬಗ್ಗೆ ನಮ್ಮಲ್ಲಿರುವ ನಂಬಿಕೆ ಮತ್ತು ಅಪನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ಹೂಡಿಕೆ ಕುರಿತ ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಎಂದು ಆಗ್ರಹಿಸುತ್ತಾರೆ.
ಸಾಮಾನ್ಯವಾಗಿ ದೇಶದ ದೊಡ್ಡ ದೊಡ್ಡ ಬ್ಯಾಂಕ್ಗಳು ಉಳಿತಾಯ ಖಾತೆಯಲ್ಲಿ ಹೂಡಿದ ಹಣಕ್ಕೆ ವಾರ್ಷಿಕ ಶೇಕಡಾ 3 ಮತ್ತು ನಿಶ್ಚಿತ ಠೇವಣಿ (ಎಫ್ ಡಿ) ಮೇಲೆ ಶೇ. 5 ರಷ್ಟು ಬಡ್ಡಿಯನ್ನು ನೀಡುತ್ತವೆ. ಆದರೆ ಖಾಸಗಿ ವಲಯದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಎಫ್ ಡಿ ಗಳ ಮೇಲೆ ಶೇ. 7 ರಿಂದ 12 ರವರೆಗೆ ಬಡ್ಡಿ ನೀಡುತ್ತವೆ. ನಮಗೆ ಸಹಜವಾಗೇ ಹೆಚ್ಚು ಬಡ್ಡಿ ಪಡೆಯುವ ಆಸೆ. ಆದರೆ, ಡಾ ರಾವ್ ಹೇಳುವ ಹಾಗೆ ನಮ್ಮ ಸಮಸ್ಯೆಗಳು ಆರಂಭವಾಗೋದೇ ಇಲ್ಲಿ.
ಇಲ್ಲೇ ನಮ್ಮ ಸಾಮಾನ್ಯ ಜ್ಞಾನವನ್ನು ತರ್ಕಕ್ಕೆ ಹಚ್ಚಬೇಕೆಂದು ಬಾಲಾಜಿ ರಾವ್ ಹೇಳುತ್ತಾರೆ. ಎಲ್ಲಾ ಬ್ಯಾಂಕ್ ಗಳು ನಾವು ಹೂಡಿದ ಹಣವನ್ನೇ ಬೇರೆಯವರಿಗೆ ನಾನಾ ರೂಪದಲ್ಲಿ ನಮಗೆ ನೀಡುವ ಬಡ್ಡಿದರಕ್ಕಿಂತ ಹೆಚ್ಚಿನ ದರದಲ್ಲಿ ಸಾಲವಾಗಿ ನೀಡುತ್ತವೆ. ಖಾಸಗಿ ವಲಯದ ಹಣಕಾಸು ಸಂಸ್ಥೆಗಳು ಯಾಕೆ ನಮ್ಮ ಠೇವಣಿ ಮೇಲೆ ಹೆಚ್ಚು ಬಡ್ಡಿ ನೀಡಲು ಮುಂದಾಗಿವೆ ಅನ್ನೋದನ್ನು ಪರಿಶೀಲಿಸಬೇಕು.
ಎಲ್ಲ ಹಣಕಾಸು ಸಂಸ್ಥೆಗಳು ನಂಬಿಕೆ ಅರ್ಹವಲ್ಲ ಅಂತ ಡಾ ರಾವ್ ಹೇಳುವುದಿಲ್ಲವಾದರೂ, ಐ ಎಮ್ ಎ, ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್, ವಶಿಷ್ಟ ಮತ್ತು ಕಣ್ವ ಮೊದಲಾದ ಸಂಸ್ಥೆಗಳನ್ನು ಉಲ್ಲೇಖಿಸುತ್ತಾರೆ. ನಮ್ಮಲ್ಲಿ ಆಸೆ ಇರಬೇಕೇ ಹೊರತು ದುರಾಸೆ ಇರಬಾರದು. ಈ ಹಿನ್ನೆಲೆಯಲ್ಲೇ ಹೂಡಿಕೆ ಕುರಿತ ನಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಅಂತ ಡಾ ರಾವ್ ಹೇಳುತ್ತಾರೆ.
ಹಾಗೇಯೇ, ದೊಡ್ಡ ಇಲ್ಲವೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಮ್ಮ ಕ್ರೆಡಿಟ್ ವರ್ದಿನೆಸ್ ಕಡಿಮೆಯಾದಾಗಲೇ ನಾವು ಖಾಸಗಿ ವಲಯದ ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಪಡೆಯಲು ಮುಂದಾಗುತ್ತೇವೆ ಅಂತ ಡಾ ಬಾಲಾಜಿ ರಾವ್ ವಿವರಿಸುತ್ತಾರೆ.
ಇದನ್ನೂ ಓದಿ: ಬೆಂಗಳೂರಿಂದ ಹೈದರಾಬಾದ್ಗೆ ಪ್ರಯಾಣ ಇನ್ನಷ್ಟು ಸುಗಮ; 1 ಕಾರಿಡಾರ್, 3 ಅಂಡರ್ಪಾಸ್ ನಿರ್ಮಾಣ ಮುಕ್ತಾಯ ಹಂತದಲ್ಲಿ