ಬೆಂಗಳೂರಿಂದ ಹೈದರಾಬಾದ್​ಗೆ ಪ್ರಯಾಣ ಇನ್ನಷ್ಟು ಸುಗಮ; 1 ಕಾರಿಡಾರ್​, 3 ಅಂಡರ್​ಪಾಸ್​ ನಿರ್ಮಾಣ ಮುಕ್ತಾಯ ಹಂತದಲ್ಲಿ

ವಾಹನಗಳು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುವಂತೆ  ಈ ಕಾರಿಡಾರ್​​ನ್ನು ವಿನ್ಯಾಸಗೊಳಿಸಲಾಗಿದೆ. ವಾಹನ ಸವಾರರ ಸುರಕ್ಷತೆಗಾಗಿ ಮೇಲ್ಸೇತುವೆ ಮೇಲೆ ಕ್ರ್ಯಾಶ್​ ಬ್ಯಾರಿಯರ್ ನಿರ್ಮಿಸಲಾಗಿದೆ.

ಬೆಂಗಳೂರಿಂದ ಹೈದರಾಬಾದ್​ಗೆ ಪ್ರಯಾಣ ಇನ್ನಷ್ಟು ಸುಗಮ; 1 ಕಾರಿಡಾರ್​, 3 ಅಂಡರ್​ಪಾಸ್​ ನಿರ್ಮಾಣ ಮುಕ್ತಾಯ ಹಂತದಲ್ಲಿ
ಹೈದರಾಬಾದ್-ಬೆಂಗಳೂರು ಹೈವೇ
Follow us
TV9 Web
| Updated By: Lakshmi Hegde

Updated on:Nov 22, 2021 | 6:19 PM

ಬೆಂಗಳೂರಿನಿಂದ ಹೈದರಾಬಾದ್​​ಗೆ ರಾಷ್ಟ್ರೀಯ ಹೆದ್ದಾರಿ 44(ಎನ್​ಎಚ್​ 44)ಮೂಲಕ  ಪ್ರಯಾಣ ಇನ್ನಷ್ಟು ಸುಗಮ ಮತ್ತು ವೇಗಗೊಳ್ಳಲಿದೆ. ಶಂಶಾಬಾದ್​ ಮಾರ್ಗದಲ್ಲಿ ಈ ರಸ್ತೆ ಸುಧಾರಣೆಯಾಗುತ್ತಿದ್ದು, ಸುಮಾರು 280 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಕಾರಿಡಾರ್​ ಮತ್ತು ಮೂರು ಅಂಡರ್​ಪಾಸ್​​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.​ ಶಂಶಾಬಾದ್​​ ಮಾರ್ಗದಲ್ಲಿ 1.6 ಕಿಮೀ ದೂರದವರೆಗೆ ಎವೆಲೇಟೆಡ್​ ಕಾರಿಡಾರ್​ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ರಸ್ತೆಗಳು ಮತ್ತು ಕಟ್ಟಡಗಳ ಡಿಪಾರ್ಟ್​ಮೆಂಟ್​ ಅಧಿಕಾರಿಗಳು ತಿಳಿಸಿದ್ದಾರೆ.  ಅಂದಹಾಗೆ ಇದು 6 ಲೇನ್​​ಗಳ, ನಗರದಲ್ಲೇ ಅತ್ಯಂತ ಉದ್ದವಾದ ಮೇಲ್ಸೇತುವೆ ಎನಿಸಿದೆ. 150 ಮೀಟರ್​ಗಳಷ್ಟು ಕಾರ್ಯ ಮಾತ್ರ ಬಾಕಿ ಇದೆ ಎಂದೂ ಹೇಳಲಾಗಿದೆ.   

ವಾಹನಗಳು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುವಂತೆ  ಈ ಕಾರಿಡಾರ್​​ನ್ನು ವಿನ್ಯಾಸಗೊಳಿಸಲಾಗಿದೆ. ವಾಹನ ಸವಾರರ ಸುರಕ್ಷತೆಗಾಗಿ ಮೇಲ್ಸೇತುವೆ ಮೇಲೆ ಕ್ರ್ಯಾಶ್​ ಬ್ಯಾರಿಯರ್​ (ಅಪಘಾತ ತಡೆ ಬೇಲಿಗಳು) ನಿರ್ಮಿಸಲಾಗಿದೆ. ಈ ಯೋಜನೆ 2020ರಲ್ಲಿಯೇ ಮುಗಿಯಬೇಕಾಗಿತ್ತು. ಆದರೆ ಭೂ ಸ್ವಾಧೀನ, ಮಾರ್ಗದುದ್ದಕ್ಕೂ ಇರುವ ವಿದ್ಯುತ್​ ಕಂಬಗಳ ತೆರವಿಗೆ ಒಪ್ಪಿಗೆ ವಿಳಂಬ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ತಡವಾಯಿತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಎರಡು ವರ್ಷದ ಮಗಳ ಚಿಕಿತ್ಸೆಗಾಗಿ ತಮ್ಮ ಉದ್ಯೋಗಿಗೆ ₹16 ಕೋಟಿ ಸಹಾಯ ನೀಡಿದ ಕೋಲ್ ಇಂಡಿಯಾ

Published On - 6:18 pm, Mon, 22 November 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್