ರೈಲ್ವೆ ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್​ ಕೊಡುತ್ತಿದ್ದ ಯುವಕನ ದುರಂತ ಸಾವು; ಸರಕು ರೈಲು ಡಿಕ್ಕಿ

ಸಂಜು ಚೌರೆ ಹಳಿಯ ಮೇಲೆ ನಿಂತಿದ್ದ..ಆತನ ಗೆಳೆಯ ವಿಡಿಯೋ ಮಾಡಿದ್ದಾನೆ. ಅದೇ ಸಮಯದಲ್ಲಿ ಸರಕು ರೈಲೊಂದು ಡಿಕ್ಕಿಹೊಡೆದಿದೆ. ಈ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

ರೈಲ್ವೆ ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್​ ಕೊಡುತ್ತಿದ್ದ ಯುವಕನ ದುರಂತ ಸಾವು; ಸರಕು ರೈಲು ಡಿಕ್ಕಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Nov 22, 2021 | 6:50 PM

ಹೋಶಂಗಾಬಾದ್​: ಇತ್ತೀಚೆಗೆ ಅಪಾಯದ ಸ್ಥಳಗಳಲ್ಲಿ, ಅಂದರೆ ನದಿಗಳ ಅಂಚು, ಪ್ರಪಾತದ ಅಂಚು, ರೈಲ್ವೆ ಹಳಿಗಳ ಮೇಲೆ ನಿಂತು ಸೆಲ್ಫೀ ತೆಗೆಯುವುದು, ಕ್ರೇಜಿ ವಿಡಿಯೋಗಳನ್ನು ಮಾಡಲು ಹೋಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈಗ ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಹೊಶಂಗಾಬಾದ್​ ಜಿಲ್ಲೆಯಲ್ಲಿ ನಡೆದಿದೆ. 22ವರ್ಷದ ಯುವಕನೊಬ್ಬ ರೈಲ್ವೆ ಹಳಿಯ ಮೇಲೆ ನಿಂತು ವಿಡಿಯೋ ಮಾಡಲು ಹೋಗಿ ರೈಲಿಗೆ ಬಲಿಯಾಗಿದ್ದಾನೆ.  

ಇಟಾರಸಿ-ನಾಗಪುರ ರೈಲ್ವೆ ಮಾರ್ಗದ ಹಳಿಯ ಮೇಲೆ ಭಾನುವಾರ ಘಟನೆ ನಡೆದದ್ದು, ಇಂದು ಬೆಳಕಿಗೆ ಬಂದಿದೆ. ಮೃತನನ್ನು ಸಂಜು ಚೌರೆ ಎಂದು ಗುರುತಿಸಲಾಗಿದೆ. ಈತ ಪತ್ರೋಟಾ ಠಾಣೆ ವ್ಯಾಪ್ತಿಯ ಪಂಜರ ಕಲಾ ಗ್ರಾಮದ ನಿವಾಸಿ ಎಂದು ಪೊಲೀಸ್ ಅಧಿಕಾರಿ ನಾಗೇಶ್​ ವರ್ಮಾ ಪಿಟಿಐಗೆ ಮಾಹಿತಿ ನೀಡಿದ್ದಾರೆ.  ಭಾನುವಾರ ಸಂಜೆ 5.30ರ ಹೊತ್ತಿಗೆ ಈ ಯುವಕ ರೈಲ್ವೆ ಹಳಿಯ ಮೇಲೆ ನಿಂತು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.ಆತನ ಗೆಳೆಯನೂ ಒಬ್ಬ ಜೊತೆಗಿದ್ದ, ಆದರೆ ಅವನು ಅಪಾಯದಿಂದ ಪಾರಾಗಿದ್ದಾನೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡುವ ಉದ್ದೇಶ ಅವನದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಚೌರೆ ಹಳಿಯ ಮೇಲೆ ನಿಂತಿದ್ದ..ಆತನ ಗೆಳೆಯ ವಿಡಿಯೋ ಮಾಡಿದ್ದಾನೆ. ಅದೇ ಸಮಯದಲ್ಲಿ ಸರಕು ರೈಲೊಂದು ಡಿಕ್ಕಿಹೊಡೆದಿದೆ. ಅದೂ ಕೂಡ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿಂದ ಹೈದರಾಬಾದ್​ಗೆ ಪ್ರಯಾಣ ಇನ್ನಷ್ಟು ಸುಗಮ; 1 ಕಾರಿಡಾರ್​, 3 ಅಂಡರ್​ಪಾಸ್​ ನಿರ್ಮಾಣ ಮುಕ್ತಾಯ ಹಂತದಲ್ಲಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್