ಸೋಮವಾರ ಮಳೆರಹಿತ ಬೆಂಗಳೂರಿನಲ್ಲಿ ವಿಧಾನ ಸೌಧದ ಬಳಿ ರಸ್ತೆ ವಿಭಜಕಕ್ಕೆ ಕಾರನ್ನು ಗುದ್ದಿದ ಚಾಲಕ
ಕೆಂಪು ಕಾರನ್ನು ಓಡಿಸಿಕೊಂಡು ಬಂದ ಚಾಲಕ ವಿಧಾನ ಸೌಧ ಎದುರು ಅದನ್ನು ಡಿವೈಡರ್ಗೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದೆ.
ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮಳೆ ನಿಂತು ಹೋಗಿತ್ತು. ಜನ ಖುಷಿಯಿಂದ ತಮ್ಮ ವಾಹನಗಳನ್ನು ತೆಗೆದುಕೊಂಡು ರಸ್ತೆಗಿಳಿದ್ದಿದ್ದರು. ಕನಕದಾಸ ಜಯಂತಿ ಪ್ರಯುಕ್ತ ರಾಜ್ಯದಲ್ಲಿ ರಜಾ ದಿನವಾಗಿದ್ದರಿಂದ ಜನರಿಗೆ ಆಫೀಸುಗಳಿಗೆ, ಮಕ್ಕಳನ್ನು ಶಾಲೆಗಳಿಗೆ ಬಿಡಲು ಹೋಗುವಂಥ ಧಾವಂತ ಇಲ್ಲದಿದ್ದರೂ ಆಗಸದಲ್ಲಿ ಮಳೆಯಾಗುವ ಲಕ್ಷಣಗಳು ಕಾಣದೆ ಹೋಗಿದ್ದರಿಂದ ಖುಷಿಯಿಂದ ತಮ್ಮ ವಾಹನಗಳನ್ನು ತೆಗೆದುಕೊಂಡು ರೋಡಿಗೆ ಬಂದರು. ಮಳೆಯಿಲ್ಲದ ಬೆಂಗಳೂರಲ್ಲಿ ಒಂದು ಸುತ್ತು ಹಾಕಿಕೊಂಡು ಬರೋಣ ಅನ್ನುವ ಉಮೇದಿ ಅಷ್ಟೇ. ಆದರೆ ಬೆಂಗಳೂರಿನಲ್ಲಿ ವಾಹನಗಳನ್ನು ಓಡಿಸುವಾಗ ಸ್ಪಲ್ಪವೇ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದಲ್ಲ.
ಇಲ್ಲೊಂದು ವಿಡಿಯೋ ಇದೆ. ಏನಾಗಿದೆ ಅಂತ ನಿಮಗೆ ಕಾಣಿಸುತ್ತಿದೆ. ಈ ಕೆಂಪು ಕಾರನ್ನು ಓಡಿಸಿಕೊಂಡು ಬಂದ ಚಾಲಕ ವಿಧಾನ ಸೌಧ ಎದುರು ಅದನ್ನು ಡಿವೈಡರ್ಗೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾನೆ.
ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ಕಾಣುತ್ತಿರುವ ಹಾಗೆ ಠಾಣೆಯ ಪೊಲೀಸರು ಮಹಜರ್ ನಡೆಸುತ್ತಿದ್ದಾರೆ. ನಾವು ಆಗಲೇ ಹೇಳಿದ ಹಾಗೆ ಸೋಮವಾರ ಮಳೆ ಇಲ್ಲದ ಕಾರಣ ಈ ಕಾರಿನ ಚಾಲಕನೂ ವಾಹನ ತೆಗೆದುಕೊಂಡು ಬಂದಿರಬಹುದು. ಅಥವಾ ರವಿವಾರ ರಾತ್ರಿಯ ಹ್ಯಾಂಗೋವರ್ ನಲ್ಲಿ ಕಾರು ಓಡಿಸುತ್ತಿದ್ದರಬೇಕು.
ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್ ಕೊಡುತ್ತಿದ್ದ ಯುವಕನ ದುರಂತ ಸಾವು; ಸರಕು ರೈಲು ಡಿಕ್ಕಿ