‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಪ್ರೇಕ್ಷಕರಿಗಿದ್ದ ಅನುಮಾನ ಪರಿಹರಿಸಿದ ರಾಜ್​ ಬಿ. ಶೆಟ್ಟಿ

‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಪ್ರೇಕ್ಷಕರಿಗಿದ್ದ ಅನುಮಾನ ಪರಿಹರಿಸಿದ ರಾಜ್​ ಬಿ. ಶೆಟ್ಟಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 22, 2021 | 7:18 PM

ರಾಜ್​ ಬಿ. ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ರಾಜ್​ ಬಿ. ಶೆಟ್ಟಿ ಜೊತೆ ರಿಷಬ್​ ಶೆಟ್ಟಿ  ಕೂಡ ಪ್ರಮುಖ ಪಾತ್ರವನ್ನು ಮಾಡಿದ್ದಾರೆ.

ರಾಜ್​ ಬಿ. ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಪಕ್ಕಾ ಮಂಗಳೂರು ಸೊಗಡಿನಲ್ಲಿ ಮೂಡಿ ಬಂದಿದೆ. ಅಲ್ಲಿನ ಸಂಸ್ಕೃತಿಯ ಜತೆಗೆ ಕೆಲವೊಂದು ಕಡೆ ಸಿನಿಮಾದಲ್ಲಿ ತುಳು ಭಾಷೆಯನ್ನೂ ಬಳಕೆ ಮಾಡಲಾಗಿದೆ. ಮಂಗಳೂರು ಭಾಗದ ಜನರಿಗೆ ಬಿಟ್ಟು ಉಳಿದವರಿಗೆ ಈ ಭಾಷೆ ಅಷ್ಟೇನು ಅರ್ಥವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಸಬ್​ಟೈಟಲ್ ಬಳಕೆ ಮಾಡಲಾಗುತ್ತದೆ. ತುಳುವಿನಲ್ಲಿ ಹೇಳಿದ್ದೇನು ಎನ್ನುವುದನ್ನು ಕನ್ನಡದಲ್ಲಿ ನೀಡಲಾಗುತ್ತದೆ. ಆದರೆ, ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಹಾಗಲ್ಲ. ಅಲ್ಲಿ ಯಾವುದೇ ಸಬ್​ಟೈಟಲ್​ ಬಳಕೆ ಮಾಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆಗೆ ರಾಜ್​ ಬಿ. ಶೆಟ್ಟಿ ಉತ್ತರಿಸಿದ್ದಾರೆ.

ರಾಜ್​ ಬಿ. ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ರಾಜ್​ ಬಿ. ಶೆಟ್ಟಿ ಜೊತೆ ರಿಷಬ್​ ಶೆಟ್ಟಿ  ಕೂಡ ಪ್ರಮುಖ ಪಾತ್ರವನ್ನು ಮಾಡಿದ್ದಾರೆ.

ಇದನ್ನೂ ಓದಿ:GGVV Trailer: ರಾಜ್​ ಬಿ ಶೆಟ್ಟಿ ಇನ್ನೊಂದು ಮುಖ ಅನಾವರಣ; ಸಾಥ್​ ನೀಡಿದ ರಿಷಬ್​ ಶೆಟ್ಟಿ

Published on: Nov 22, 2021 06:59 PM