ಸೂಕ್ತ ಸಮಯಕ್ಕೆ ನೆರವು ಸಿಗದೇ ಹೋಗಿದ್ದರೆ, ತಂದೆ-ಮಗ ತಮ್ಮ ಹುಚ್ಚು ಸಾಹಸಕ್ಕೆ ಭಾರಿ ಬೆಲೆ ತೆರಬೇಕಾಗುತಿತ್ತು!

ಅವರ ಅದೃಷ್ಟ ಚೆನ್ನಾಗಿತ್ತು ಅನಿಸುತ್ತದೆ. ಆ ಸ್ಥಳದಲ್ಲಿದ್ದ ಕೆಲವು ಜನ ಅದನ್ನು ನೋಡಿದ್ದಾರೆ. ಪುಣ್ಯಕ್ಕೆ ಅವರ ಬಳಿ ಹಗ್ಗವೂ ಇತ್ತು.

ಮಾನವ ಸಾಹಸಮಯಿ ಆಗಿರೋದ್ರಲ್ಲಿ ತಪ್ಪೇನೂ ಇಲ್ಲ ಆದರೆ ಹುಚ್ಚು ಸಾಹಸಗಳಿಗೆ ಕೈ ಹಾಕುವವರನ್ನು ಸಾಹಸಮಯಿ ಅನ್ನಲಾಗದು. ಯಾಕೆಂದರೆ ಅದು ಮೂರ್ಖತನ. ಆದರಲ್ಲೂ ಪ್ರಕೃತಿ ಅಂದರೆ ನಿಸರ್ಗಕ್ಕೆ ವಿರುದ್ಧವಾಗಿ ಸಾಹಸಕ್ಕಿಳಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿರಲಾರದು. ಈ ವಿಡಿಯೋ ನೋಡಿದರೆ ನಿಮಗೆ ನಾವು ಹೇಳುತ್ತಿರುವ ಮಾತಿನ ಅರ್ಥ ಆಗುತ್ತದೆ. ಅಂದಹಾಗೆ, ಈ ವಿಡಿಯೋವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ-ಚೇಳೂರು ರಸ್ತೆಯಲ್ಲಿರುವ ಹೊಸಹುಡ್ಯ ಹೆಸರಿನ ಗ್ರಾಮದ ಬಳಿ ಶೂಟ್ ಮಾಡಲಾಗಿದೆ. ಅಸಲಿಗೆ, ಆಗಿದ್ದೇನೆಂದರೆ ರಭಸದಿಂದ ಹರಿಯುತ್ತಿರುವ ಕುಶಾವತಿ ನದಿಯಲ್ಲಿ ಹಗ್ಗ ಹಿಡಿದು ನಿಂತಿರೋದು ತಂದೆ ಮಗನ ಜೋಡಿ. ಮಗನಿಗೆ ಹುಡುಗು ಬುದ್ಧಿ ಅಂದರೆ ಅದನ್ನು ಅರ್ಥಮಾಡಿಕೊಳ್ಳಬಹುದು ಆದರೆ, ಅವನಪ್ಪನೂ ಹಾಗೇಯೇ ಅಂತಾದರೆ ಇಂಥ ಪ್ರಾಣಾಪಯಕಾರಿ ಅನಾಹುತಗಳು ಸಂಭವಿಸುತ್ತವೆ.

ರಸ್ತೆಯ ಮೇಲೆ ಹೆಚ್ಚಿನ ರಭಸದಿಂದ ಧಾರಾಕಾರ ಮಳೆಯಿಂದಾಗಿ ಕುಶಾವತಿ ನದಿ ಉಕ್ಕಿ ಹರಿಯುತ್ತಿದ್ದರೂ ಬೈಕ್ ಮೇಲಿದ್ದ ತಂದೆ-ಮಗ ರಸ್ತೆಯನ್ನು ದಾಟುವ ಪ್ರಯತ್ನ ಮಾಡಿದ್ದಾರೆ. ನೀರಿನ ಸೆಳೆತ ಜೋರಾಗಿದ್ದರಿಂದ ಗಾಡಿ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ.

ಅವರ ಅದೃಷ್ಟ ಚೆನ್ನಾಗಿತ್ತು ಅನಿಸುತ್ತದೆ. ಆ ಸ್ಥಳದಲ್ಲಿದ್ದ ಕೆಲವು ಜನ ಅದನ್ನು ನೋಡಿದ್ದಾರೆ. ಪುಣ್ಯಕ್ಕೆ ಅವರ ಬಳಿ ಹಗ್ಗವೂ ಇತ್ತು. ಕೂಡಲೇ ಅವರು ಹಗ್ಗವನ್ನು ಎಸೆದು ತಂದೆ ಮತ್ತು ಮಗನನ್ನು ಸುರಕ್ಷಿತ ಸ್ಥಳಕ್ಕೆ ಎಳೆದಿದ್ದಾರಲ್ಲದೆ, ದ್ವಿಚಕ್ರ ವಾಹನವನ್ನೂ ಮೇಲಕ್ಕೆತ್ತಿದ್ದಾರೆ.

ಅದಕ್ಕೇ ಹೇಳಿದ್ದು, ನಿಸರ್ಗದ ವಿರುದ್ಧ ಹುಚ್ಚು ಸಾಹಸಗಳಿಗೆ ಕೈಹಾಕಬಾರದು.

ಇದನ್ನೂ ಓದಿ:  Shaheen Afridi: ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

Click on your DTH Provider to Add TV9 Kannada