ತಾಲಿಬಾನೇತರ ಅಫಘಾನಿಸ್ತಾನದಲ್ಲಿ ಮಹಿಳೆಯರಿಗೆ ಮುಕ್ತವಾಗಿ ಓಡಾಡುವ, ಓದುವ ವಾತಾವರಣವಿತ್ತು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 21, 2021 | 4:13 PM

1996-2001 ತಾಲಿಬಾನ್ ಆಡಳಿತಕ್ಕೆ ಮೊದಲು ಅಫಘಾನಿಸ್ತಾನದ ಮಹಿಳೆಯರು ಬೇರೆ ದೇಶಗಳಲ್ಲಿನ ಹಾಗೆ ಮುಕ್ತವಾಗಿ ಓಡಾಡಿಕೊಂಡಿದ್ದರು. ಸ್ವದೇಶ ಮತ್ತು ವಿದೇಶದ ಮಹಿಳೆಯರಿಗೆ ಅವರ ಉಡುಗೆ ತೊಡುಗೆ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ.

ಅಫಘಾನಿಸ್ತಾನದಲ್ಲಿ ಬೇರೂರಿದ್ದ ರಷ್ಯನ್ ಸೇನೆಯನ್ನು ಅಲ್ಲಿಂದ ಹೊರಗಟ್ಟಲು ಅಮೆರಿಕಾಗೆ ಒಂದು ಸಂಘಟನೆ ಅಥವಾ ನುರಿತ ಸೈನಿಕರಂತೆ ಹೋರಾಡಬಲ್ಲ ಹಾಗೂ ಸಾವಿಗೆ ಹೆದರದ ಬಂಡುಕೋರರ ಗುಂಪು ಬೇಕಿತ್ತು. 80 ಮತ್ತು 90 ರ ದಶಕಗಳಲ್ಲಿ ತಾಲಿಬಾನ್ ಏನೆಂದರೆ ಏನೂ ಆಗಿರಲಿಲ್ಲ. 1994ರಲ್ಲಿ ಮುಜಾಹಿದೀನ್ ಗಳ ನೆರವಿನಿಂದ ಅದು ಕಂದಾಹಾರ್ನಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಆದರ ನಾಯಕರ ಧೋರಣೆಗಳಿಂದ ಪ್ರಭಾವಕ್ಕೊಳಗಾದ ಅಮೇರಿಕ ಹಣಕಾಸು ಮತ್ತು ಆಯುಧಗಳನ್ನು ಪೂರೈಸಿ ಅದನ್ನು ಬೆಳಸಿದ್ದರಿಂದಲೇ ಈ ಮಟ್ಟಕ್ಕೆ ಬೆಳೆದು ನಿಂತಿದೆ. 90ರ ದಶಕದ ದ್ವಿತೀಯಾರ್ಧದಲ್ಲಿ ತಾಲಿಬಾನ್ ನಿಸ್ಸಂದೇಹವಾಗಿ ಒಂದು ಶಕ್ತಿಯಾಗಿ ಬೆಳೆದು ಅಫಘಾನಿಸ್ತಾನ ಹಲವಾರು ಭಾಗಗಳಲ್ಲಿ ತನ್ನ ಪ್ರಾಬಲ್ಯತೆ ಮೆರೆಯಿತು. ಇಸ್ಲಾಮಿಕ್ ಕಾನೂನು ಅಥವಾ ಷರಿಯತ್ ಜಾರಿಗೊಳಿಸಿ ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕಿತು. ಹೆಣ್ಣು ಮಕ್ಕಳು ಮನೆಯಿಂದ ಆಚೆ ಬಂದು ಕೆಲಸ ಮಾಡುವುದು ಹಾಗಿರಲಿ, ಅವರು ಓದುವುದು ಸಹ ಪಾಪ ಅನ್ನುವ ವಾತಾವರಣನ್ನು ತಾಲಿಬಾನಿಗಳು ಸೃಷ್ಟಿಸಿದರು.

ತಾನೇ ಬೆಳೆಸಿದ ಒಸಮಾ ಬಿನ್ ಲಾದೆನ್ನ ಅಲ್-ಖೈದಾ ಅಮೇರಿಕದ ಮೇಲೆ ದಾಳಿ ನಡೆಸಿ (9/11) ಸಾವಿರಾರು ನಾಗರಿಕರನ್ನು ಕೊಂದ ನಂತರವೇ ಅದು ತಾಲಿಬಾನಿಗಳ ಹುಟ್ಟಡಗಿಸುವ ಕೆಲಸ ಆರಂಭಿಸಿತು.

1996-2001 ತಾಲಿಬಾನ್ ಆಡಳಿತಕ್ಕೆ ಮೊದಲು ಅಫಘಾನಿಸ್ತಾನದ ಮಹಿಳೆಯರು ಬೇರೆ ದೇಶಗಳಲ್ಲಿನ ಹಾಗೆ ಮುಕ್ತವಾಗಿ ಓಡಾಡಿಕೊಂಡಿದ್ದರು. ಸ್ವದೇಶ ಮತ್ತು ವಿದೇಶದ ಮಹಿಳೆಯರಿಗೆ ಅವರ ಉಡುಗೆ ತೊಡುಗೆ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ.

ಮಹಿಳೆಯರು ತಮಗಿಷ್ಟವಾಗುವ ಶಾಲೆ-ಕಾಲೇಜುಗಳಲ್ಲಿ ಓದಬಹುದಿತ್ತು, ಅವರಿಗೆಂದೇ ಪ್ರತ್ಯೇಕ ಕಾಲೇಜು ಅಂತ ಇರಲಿಲ್ಲ. ಸಹ- ಶಿಕ್ಷಣ (ಕೋ-ಎಡ್) ಪದ್ದತಿ ಅಲ್ಲಿತ್ತು. ಬಸ್ಸುಗಳಲ್ಲಿ ಅವರು ಪುರುಷರೊಂದಿಗೆ ಪ್ರಯಾಣ ಮಾಡಬಹುದಿತ್ತು. ಇದನ್ನೆಲ್ಲ ಹೇಳುವ ತಾತ್ಪರ್ಯವೆಂದರೆ ಅಫಘಾನಿಸ್ತಾನದಲ್ಲಿ ಮಹಿಳೆಯರನ್ನು ಯಾವುದೇ ಸಂಕೋಲೆಗಳಿಂದ ಕಟ್ಟಿ ಹಾಕಿರಲಿಲ್ಲ. ಅಫಘಾನಿಸ್ತಾನದ ಪುರುಷರಂತೆ ಮಹಿಳೆಯರು ಸಹ ನೆಮ್ಮದಿ ಮತ್ತು ಸ್ವತಂತ್ರ ಬದುಕು ನಡೆಸಬಹುದಿತ್ತು.

ಇದನ್ನೂ ಓದಿ: ಅಫಘಾನಿಸ್ತಾನದ ಮುಂದಿನ ಅಧ್ಯಕ್ಷ ಮುಲ್ಲಾ ಅಬ್ದುಲ್ ಘನಿ ಬರಾದರ್ ಅಂತ ತಾಲಿಬಾನಿಗಳು ಹೇಳುತ್ತಿದ್ದಾರೆ!