ಲಂಚ ತೆಗೆದುಕೊಳ್ಳೋದು ಮತ್ತು ಕೊಡೋದು ಎರಡೂ ಅಪರಾಧ ಅಂತಾದ್ರೆ ಇಬ್ಬರಿಗೂ ಶಿಕ್ಷೆಯಾಗಬೇಕು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 20, 2021 | 11:28 PM

ಬಸವರಾಜನಿಗೆ ಸರೋಜಾಳನ್ನು ಸಿಕ್ಕಿ ಹಾಕಿಸುವ ಉದ್ದೇಶವಿರುವಂತೆ ಕಾಣುತ್ತಿದೆ. ಹಾಗಾಗೇ, ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಆದರೆ, ಸರೋಜಾ ಭ್ರಷ್ಟಾಚಾರದಲ್ಲಿ ಪಳಗಿದವಳಂತೆ ಕಾಣುತ್ತಿದೆ.

ಭ್ರಷ್ಟಾಚಾರ ನಮ್ಮ ವ್ಯವಸ್ಥೆಯಲ್ಲಿ ಅದ್ಯಾವ ಮಟ್ಟಿಗೆ ಹಾಸುಹೊಕ್ಕಿದೆ ಅನ್ನೋದನ್ನ ಈ ಚಿಕ್ಕ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು. ಸದರಿ ವಿಡಿಯೋನಲ್ಲಿ ನಡೆದಿರುವ ಸಂಭಾಷಣೆಯ ಸಾರಾಂಶ ಇಷ್ಟೇ. ಯಾದಗಿರಿ ತಾಲ್ಲೂಜಿನ ಬೆಳಗುಂದಿ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ (ಈತನ ಹೆಸರು ಬಸವರಾಜ) ರೂ. 1.48 ಲಕ್ಷದ ರಸ್ತೆ ಕಾಮಗಾರಿ ಮಾಡಿಸಿ ಬಿಲ್ ಮಂಜೂರು ಮಾಡಿಸಿಕೊಂಡಿದ್ದಾನೆ. ಬಿಲ್ ಪಾಸ್ ಮಾಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಈಕೆಯ ಹೆಸರು ಸರೋಜಾ) ಬಿಲ್ ಮೊತ್ತದ 5 ಪರ್ಸೆಂಟ್ ಲಂಚ ನೀಡುವ ಪ್ರಾಮಿಸ್ ಮಾಡಿದ್ದಾನೆ. ಪಿಡಿಓ ಈಗ ಹಣ (ಲಂಚ) ಕೇಳಿದರೆ ನೂರೆಂಟು ಸಬೂಬುಗಳನ್ನು ಹೇಳುತ್ತಿದ್ದಾನೆ.

ಇಲ್ಲಿ ಗಮನಿಸಬೇಕಿರುವ ಸಂಗತಿಯೇನೆಂದರೆ ಇಬ್ಬರೂ ಸಾಚಾಗಳಲ್ಲ. ಲಂಚ ಪಡೆಯಲು ಸರೋಜಾ ಕತೆ ಕಟ್ಟುತ್ತಿದ್ದಾಳೆ, ಮೇಲಧಿಕಾರಿಗೆ ಕೊಡಬೇಕು, ಬೇರೆಯವರು ಕೊಟ್ಟಿದ್ದಾರೆ, ನೀನ್ಯಾಕೆ ತಡ ಮಾಡುತ್ತಿರುವೆ ಅಂತ ಹೇಳುತ್ತಾ, ಮುಂಬರುವ ದಿನಗಳಲ್ಲಿ ಈ ಸದಸ್ಯನ ಯಾವುದೇ ಬಿಲ್ ಪಾಸ್ ಮಾಡುವುದಿಲ್ಲ ಅಂತ ಬೆದರಿಕೆಯನ್ನು ಹಾಕುತ್ತಿದ್ದಾಳೆ. ಅತ್ತ ಬಸವರಾಜ ಬಿಲ್ ಪಾಸು ಮಾಡಿಸಿಕೊಳ್ಳುವಾಗ ಲಂಚ ನಿಡುವ ವಾಗ್ದಾನ ಮಾಡಿ, ಅದು ಪಾಸಾದ ಮೇಲೆ ಕೊಡಲಾಗದು ಎನ್ನುತ್ತಿದ್ದಾನೆ.

ಬಸವರಾಜನಿಗೆ ಸರೋಜಾಳನ್ನು ಸಿಕ್ಕಿ ಹಾಕಿಸುವ ಉದ್ದೇಶವಿರುವಂತೆ ಕಾಣುತ್ತಿದೆ. ಹಾಗಾಗೇ, ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಆದರೆ, ಸರೋಜಾ ಭ್ರಷ್ಟಾಚಾರದಲ್ಲಿ ಪಳಗಿದವಳಂತೆ ಕಾಣುತ್ತಿದೆ. ಸಂಬಂಧಪಟ್ಟವರು ಈ ವಿಡಿಯೋ ಕೇಳಿಸಿಕೊಂಡು ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಅನ್ನೋದು ಈಕೆಗೆ ಚೆನ್ನಾಗಿ ಗೊತ್ತಿದೆ ಮತ್ತು ಅದರಿಂದ ಪಾರಾಗುವ ಕಲೆಯೂ ತಿಳಿದಿದೆ
ವಿಚಾರಣೆ ನಡೆದರೆ ಬಸವರಾಜನಿಗೆ ಸಮಸ್ಯೆಯಾಗಲಿದೆ. ಯಾಕೆಂದರೆ ಲಂಚ ತೆಗೆದುಕೊಳ್ಳುವುದು ಅಪರಾಧವಾಗಿರುವಂತೆ ಕೊಡೋದು ಸಹ ಅಪರಾಧವೇ.

ಇದು ನಮ್ಮ ಭ್ರಷ್ಟ ವ್ಯವಸ್ಥೆಯ ಒಂದು ಝಲಕ್ ಮಾತ್ರ.

ಇದನ್ನೂ ಓದಿ: ಇದು ಅಳಿಲು ಸೇವೆಯಲ್ಲ ಅಳಿಲಿಗೆ ಸೇವೆ! ಅಳಿಲು ಸ್ಟೂಲ್ ಮೇಲೆ ಕೂತು ಅಕ್ರೋಟ್ ತಿನ್ನುವ ವಿಡಿಯೋ ವೈರಲ್!

Follow us on