ಸ್ಯಾಮ್ಸಂಗ್ ಗೆಲಾಕ್ಸಿ A03s ಮಾಡೆಲ್ ಲಾಂಚ್ ಆಗಿದೆ, ಇದು ಬಜೆಟ್ ಸ್ಪಾರ್ಟ್ ಪೋನ್ ಎಂದು ಕಂಪನಿ ಹೇಳುತ್ತಿದೆ LCD
ಇದು ಬಜೆಟ್ ಪೋನ್ ಎಂದು ಕಂಪನಿ ಕ್ಲೇಮ್ ಮಾಡುತ್ತಿದೆ. ಒಂದು ದಿನದ ಹಿಂದೆ ಲಾಂಚ್ ಆಗಿರುವ ಗೆಲಾಕ್ಸಿ A03s ಆರೂವರೆ ಇಂಚಿನ ಎಲ್ಸಿಡಿ, ಹೆಲಿಯೊ P35 ಚಿಪ್ಸೆಟ್, 5,000 ಎಮ್ಎಎಚ್ ಬ್ಯಾಟರಿ, ಮತ್ತು 15W ಚಾರ್ಜಿಂಗ್ ನೊಂದಿಗೆ ಬರುತ್ತದೆ.
ಇದು ಸ್ಮಾರ್ಟ್ ಫೋನ್ಗಳ ಜಮಾನಾ ಮಾರಾಯ್ರೇ. ಹೊರಗೆ ಹೋಗುವಾಗ ನಿಮ್ಮ ಜೇಬಲ್ಲಿ ಪರ್ಸ್ ಅಥವಾ ಹಣ ಇಲ್ಲದಿದ್ದರೂ ನಡೆಯುತ್ತೆ, ಆದರೆ ಕೈಯಲ್ಲಿ ಒಂದು ಸ್ಮಾರ್ಟ್ ಪೋನ್ ಇಲ್ಲದಿದ್ದರೆ ಸರ್ವಥಾ ನಡೆಯದು. ನೀವು ಕಾಲು ಕಿತ್ತಿ ಮುಂದೆ ಹೆಜ್ಚೆ ಇಡುವುದು ಸಾಧ್ಯವೇ ಇಲ್ಲ. ಪೋನ್ಗಳ ಮಾರ್ಕೆಟ್ನಲ್ಲಿ ಲಭ್ಯವಿರುವ ಸ್ಪಾರ್ಟ್ ಪೋನ್ಗಳ ವೆರೈಟಿ, ವಿನ್ಯಾಸ, ಬಣ್ಣಗಳು ದಿಗಿಲು ಹುಟ್ಟಿಸುತ್ತವೆ. ಕಳೆದ ಕೆಲ ತಿಂಗಳುಗಳಿಂದ ಫೋನ್ ಉತ್ಪಾದಕ ಕಂಪನಿಗಳಲ್ಲಿ ದೈತ್ಯನೆನಿಸಿರುನ ದಕ್ಷಿಣ ಕೊರಿಯದ ಸ್ಯಾಮ್ಸಂಗ್ ಜಾಸ್ತಿ ಸುದ್ದಿಯಲ್ಲಿರಲಿಲ್ಲ. ಆದರೆ ಈಗ ಅದು ಹೊಸ ತನ್ನ ಗೆಲಾಕ್ಸಿ ಶ್ರೇಣಿಯ ಗೆಲಾಕ್ಸಿ A03s ಮಾಡೆಲ್ ಲಾಂಚ್ ಮಾಡಿದೆ.
ಇದು ಬಜೆಟ್ ಪೋನ್ ಎಂದು ಕಂಪನಿ ಕ್ಲೇಮ್ ಮಾಡುತ್ತಿದೆ. ಒಂದು ದಿನದ ಹಿಂದೆ ಲಾಂಚ್ ಆಗಿರುವ ಗೆಲಾಕ್ಸಿ A03s ಆರೂವರೆ ಇಂಚಿನ ಎಲ್ಸಿಡಿ, ಹೆಲಿಯೊ P35 ಚಿಪ್ಸೆಟ್, 5,000 ಎಮ್ಎಎಚ್ ಬ್ಯಾಟರಿ, ಮತ್ತು 15W ಚಾರ್ಜಿಂಗ್ ನೊಂದಿಗೆ ಬರುತ್ತದೆ.
ಪೋನಿನ ಹಿಂಬದಿಯಲ್ಲಿ 13 ಮೆಗಾ ಪಿಕ್ಸೆಲ್ ಕೆಮೆರಾ ಅಳವಡಿಸಲಾಗಿದ್ದು ಶೂಟರ್ ಮತ್ತು ಮ್ಯಾಕ್ರೋ ಮತ್ತು ಡೆಪ್ತ್ ಡೇಟಾಕ್ಕಾಗಿ ಎರಡು 2MP ಮಾಡ್ಯೂಲ್‌ಗಳನ್ನು ನೀಡುತ್ತದೆ. ವಾಟರ್‌ಡ್ರಾಪ್ ನಾಚ್‌ನಲ್ಲಿ 5MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ 11 ರೊಂದಿಗೆ ಟ್ರಿಮ್ ಮಾಡಿದ ಡೌನ್ ಒನ್ ಯುಐ 3.1 ಕೋರ್ ಸಾಫ್ಟ್ ವೇರ್ ಸೈಡ್ ಅನ್ನು ಈ ಫೋನ್ ಒಳಗೊಂಡಿದೆ.
ಕಪ್ಪು, ನೀಲಿ ಮತ್ತು ಬಿಳಿ ರೂಪಾಂತರಗಳೊಂದಿಗೆ ನಿಮ್ಮ ನೆಚ್ಚಿನ ಬಣ್ಣ ಆಯ್ಕೆ ಮಾಡಲು ಮೂರು ಕಲರ್ ಆಪ್ಶನ್ಗಳಿವೆ. RAM 3GB ಮತ್ತು 4GB ನಡುವೆ ಬದಲಾಗುತ್ತದೆ ಆದರೆ ಶೇಖರಣಾ ಆಯ್ಕೆಗಳು 32GB ಮತ್ತು 64GB. 3/32GB ಟ್ರಿಮ್‌ನ ಬೆಲೆ ರೂ. 11,499, ಆದರೆ 4/64GB ಮಾದರಿಯು ರೂ. 12,499 ಬೆಲೆಗೆ ಲಭ್ಯವಾಗುತ್ತದೆ. ಎಲ್ಲರಿಗಿಂತ ಮೊದಲು ಆರ್ಡರ್ ಮಾಡುವ ಗ್ರಾಹಕರಿಗೆ ರೂ. 2,000 ರಿಯಾಯಿತಿ ಪಡೆಯಲು ಸೀಮಿತ ಸಮಯದ ಆಫರ್ ಇದೆ.
ಇದನ್ನೂ ಓದಿ: ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಟಿವಿ9 ನೆಟ್ವರ್ಕ್ಗೆ ಮುಕುಟ ಪ್ರಾಯ ಸ್ಥಾನ; ಯೂಟ್ಯೂಬ್ ವಿಡಿಯೋ ವೀಕ್ಷಣೆಯಲ್ಲಿ ನಂ. 1