ಸಂಗಾತಿಗಳ ನಡುವಿನ ಅನ್ಯೋನ್ಯ ಸಂಬಂಧಕ್ಕೆ ಮನಶಾಸ್ತ್ರಜ್ಞೆ ಸೌಜನ್ಯ ವಶಿಷ್ಠ ನೀಡಿದ್ದಾರೆ ಕೆಲ ಸಲಹೆಗಳು
ದಂಪತಿಗಳ ನಡುವೆ ನಡೆವ ಜಗಳ ಆರೋಗ್ಯಕರ ಎಂದು ಸೌಜನ್ಯ ಹೇಳುತ್ತಾರೆ. ಆದರೆ ಜಗಳಗಳಲ್ಲಿ ದೈಹಿಕ ಹಲ್ಲೆ, ಮನಸ್ಸಿಗೆ ಬಂದಂತೆ ಬೈದಾಡುವುದು ಸಲ್ಲದು. ಸಂಗಾತಿಗಳ ನಡುವೆ ಪ್ರೀತಿ ಮತ್ತು ಗೌರವಗಳಿದ್ದರೆ, ಜಗಳಗಳಿಗೆ ಆಸ್ಪದವಿರೋದಿಲ್ಲ
ಸಂಗಾತಿಗಳ ನಡುವೆ ಸಬಂಧಗಳು ಹೇಗಿರಬೇಕು, ಇಬ್ಬರ ವರ್ತನೆ ಹೇಗಿದ್ದರೆ ಅವರ ನಡುವೆ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತದೆ, ಸಂಬಂಧಗಳಲ್ಲಿ ಪೋನ್ ಮತ್ತು ಸೋಶಿಯಲ್ ಮೀಡಿಯಾಗಳು ಯಾವ ಪಾತ್ರವನ್ನು ನಿರ್ವಹಿಸುತ್ತಿವೆ ಎಂಬಿತ್ಯಾದಿ ಅಂಶಗಳನ್ನು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ದಂಪತಿ, ಪ್ರೇಮಿಗಳು ಅಥವಾ ಲಿವ್-ಇನ್ ರಿಲೇಶನ್ ಶಿಪ್ನಲ್ಲಿರುವ ಗಂಡು-ಹೆಣ್ಣು ನಡುವಿನ ಸಂಬಂಧ ಅನ್ಯೋನ್ಯವಾಗಿರಬೇಕಾದರೆ, ಸೋಶಿಯಲ್ ಮೀಡಿಯಾಗಳಲ್ಲಿ ಬೇರೆಯವರು ಹಾಕುವ ಚಿತ್ರಗಳನ್ನು ನೋಡಿ ಕರುಬಬಾರದು ಅಂತ ಸೌಜನ್ಯ ಹೇಳುತ್ತಾರೆ. ಪ್ರವಾಸ-ಪಿಕ್ನಿಕ್ ಹೋದಾಗ, ಹೊಸ ಬಟ್ಟೆ-ಒಡವೆ ಧರಿಸಿದ ಫೋಟೋಗಳನ್ನು ನೋಡಿದಾಗ ಅವರೆಲ್ಲ ಎಷ್ಷು ಸುಖವಾಗಿದ್ದಾರೆ ಅಂತ ಒಂದು ಕೀಳರಿಮೆ ಅನುಭವಿಸುವುದು ಸಹಜವೇ. ಆದರೆ, ಜನ ಕೇವಲ ಸಂತೋಷದಲ್ಲಿರುವ ಫೋಟೋ, ವಿಡಿಯೋಗಳನ್ನು ಮಾತ್ರ ಶೇರ್ ಮಾಡುತ್ತಾರೆ, ಅವರ ನಡುವೆ ನಡೆಯುವ ಜಗಳಗಳ ಇಮೇಜ್ಗಳನ್ನು ಯಾರೂ ಪೋಸ್ಟ್ ಮಾಡೋದಿಲ್ಲ. ಎಲ್ಲರ ಮನೆ ದೋಸೆಗಳಲ್ಲಿ ತೂತು, ಹಾಗಾಗಿ ಅಂಥ ಫೋಟೊಗಳಿಗೆ ನಿಮ್ಮ ಸ್ಥಿತಿಯನ್ನು ಹೋಲಿಸಿಕೊಂಡರೆ ಮೂಡ್ ಹಾಳಾಗುತ್ತೆ, ಸಂತೋಷ ಮಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ದಂಪತಿಗಳ ನಡುವೆ ನಡೆವ ಜಗಳ ಆರೋಗ್ಯಕರ ಎಂದು ಸೌಜನ್ಯ ಹೇಳುತ್ತಾರೆ. ಆದರೆ ಜಗಳಗಳಲ್ಲಿ ದೈಹಿಕ ಹಲ್ಲೆ, ಮನಸ್ಸಿಗೆ ಬಂದಂತೆ ಬೈದಾಡುವುದು ಸಲ್ಲದು. ಸಂಗಾತಿಗಳ ನಡುವೆ ಪ್ರೀತಿ ಮತ್ತು ಗೌರವಗಳಿದ್ದರೆ, ಜಗಳಗಳಿಗೆ ಆಸ್ಪದವಿರೋದಿಲ್ಲ. ಕೋಪ ನಿರ್ವಹಣೆಯು ಒಂದು ಉತ್ತಮ ಸಂಬಂಧ ಪ್ರಮುಖ ಭಾಗವಾಗಿದೆ ಅಂತ ಅವರು ಹೇಳುತ್ತಾರೆ.
ಪ್ರೀತಿ ಮತ್ತು ಗೌರವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸೌಜನ್ಯ ಹೇಳುತ್ತಾರೆ. ದಂಪತಿಗಳು ಪರಸ್ಪರ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡರೆ ಸಂಬಂಧ ಸೌಹಾರ್ದಯುತವಾಗಲಾರದು. ಸಂಗಾತಿಗಳ ವ್ಯಕ್ತಿತ್ವವೂ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಕೆಟ್ಟ ಹವ್ಯಾಸಗಳು ಸಂಬಂಧದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದ್ದರೆ ಅಂಥವುಗಳನ್ನು ಬದಲಾಯಿಸಿ ಉತ್ತಮ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕೆಂದು ಸೌಜನ್ಯ ಹೇಳುತ್ತಾರೆ.
ವಯಸ್ಸಾಗುತ್ತಿರುವ ಅಂಶ ಯಾರಿಗೂ ಇಷ್ಟವಾಗದು. ಅದರೆ ಅದು ಬದುಕಿನ ಅವಿಭಾಜ್ಯ ಭಾಗ. ಈ ಆಯಾಮವನ್ನು ಸಂತೋಷದಿಂದ ಸ್ವೀಕರಿಸಬೇಕು. ಎಲ್ಲರಿಗೂ ವಯಸ್ಸಾಗುತ್ತದೆ, ಅದನ್ನು ನಮ್ಮ ಬದುಕಿನಿಂದ ಪ್ರತ್ಯೇಕಿಸಿಸುವುದು ಸಾಧ್ಯವಿಲ್ಲ, ಸೋ ಏಜ್ ಗ್ರೇಸ್ಪುಲ್ಲಿ ಎಂದು ಡಾ ಸೌಜನ್ಯ ಹೇಳುತ್ತಾರೆ.
ಇದನ್ನೂ ಓದಿ: Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್