‘ದಯವಿಟ್ಟು ಈ ಮಾತನ್ನು ನಡೆಸಿಕೊಡಿ’; ಅಭಿಮಾನಿಗಳ ಬಳಿ ಡಾಲಿ ಧನಂಜಯ ವಿಶೇಷ ಮನವಿ
ಆಗಸ್ಟ್ 23 ಧನಂಜಯ ಜನ್ಮದಿನ. ಕೊವಿಡ್ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈ ಕಾರಣಕ್ಕೆ ಅವರು ಬರ್ತ್ಡೇ ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ.
ನಟ ಧನಂಜಯ ಅವರ ಖ್ಯಾತಿ ಬೇರೆ ಭಾಷೆಗೂ ಹಬ್ಬಿದೆ. ತೆಲುಗಿನ ‘ಪುಷ್ಪ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಲೇ ಇದೆ. ಈಗ ಧನಂಜಯ ಅವರು ಅಭಿಮಾನಿಗಳ ಬಳಿ ವಿಶೇಷ ಮನವಿ ಒಂದನ್ನು ಮಾಡಿದ್ದಾರೆ. ಅಲ್ಲದೆ ಅದನ್ನು ನಡೆಸಿಕೊಡುವಂತೆ ಅವರು ಕೋರಿದ್ದಾರೆ.
ಆಗಸ್ಟ್ 23 ಧನಂಜಯ ಜನ್ಮದಿನ. ಕೊವಿಡ್ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈ ಕಾರಣಕ್ಕೆ ಅವರು ಬರ್ತ್ಡೇ ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ. ಇದಲ್ಲದೆ, ಈ ಸಂದರ್ಭದಲ್ಲಿ ಅವರು ಚೆನ್ನೈನಲ್ಲಿ ಶೂಟಿಂಗ್ನಲ್ಲಿ ಬ್ಯುಸಿ ಇರಲಿದ್ದಾರೆ. ಹೀಗಾಗಿ, ಎಲ್ಲರೂ ಇರುವ ಕಡೆಯಿಂದಲೇ ಶುಭ ಹಾರೈಸುವಂತೆ ಅವರು ಮನವಿ ಮಾಡಿದ್ದಾರೆ. ಅಲ್ಲದೆ, ಮುಂದಿನ ವರ್ಷ ಎಲ್ಲವೂ ಸರಿಯಾದರೆ ಅಭಿಮಾನಿಗಳ ಜತೆ ಕೇಕ್ ಕತ್ತರಿಸುವ ಭರವಸೆಯನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ: Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್ ತೋರಿಸಿದ ಧನಂಜಯ್
Published on: Aug 22, 2021 08:38 AM
Latest Videos