ಬ್ಯಾಂಕ್ಗಳಲ್ಲಿ ಹೂಡುವ ಹಣ ಅತ್ಯಂತ ಸೇಫ್ ಅಂತಾದ್ರೆ ಹಣದ ಒಂದು ಭಾಗಕ್ಕೆ ವಿಮೆ ಯಾಕೆ ಮಾಡಿಸಲಾಗುತ್ತದೆ? ಡಾ ಬಾಲಾಜಿ ರಾವ್
ವಿಜಯ ಮಲ್ಯ, ನೀರವ ಮೋದಿ, ಮೆಹುಲ್ ಚೋಕ್ಸಿ ಮುಂತಾದವರು ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಅದನ್ನು ತೀರಿಸದೆ ಬೇರೆ ದೇಶಗಳಿಗೆ ಓಡಿಹೋದರೆ, ಬ್ಯಾಂಕ್ಗಳು ಮುಚ್ಚಿಹೋಗುವ ಪ್ರಮೇಯ ಎದುರಾಗುತ್ತದೆ ಎಂದು ಡಾ ರಾವ್ ಹೇಳುತ್ತಾರೆ.
ಬ್ಯಾಂಕ್ಗಳಲ್ಲಿ ಹಣ ಹೂಡುವವರು ಯಾರಿಲ್ಲ ಹೇಳಿ. ನಾವೆಲ್ಲರೂ ಬ್ಯಾಂಕ್ ನಮಗೆ ಒದಗಿಸುವ ಬೇರೆ ಬೇರೆ ಆಕೌಂಟ್ಗಳಲ್ಲಿ ಹಣ ಹೂಡುತ್ತೇವೆ. ನಾವು ಬ್ಯಾಂಕ್ಗಳಲ್ಲಿ ಹಣ ಹೂಡಲು ನಾಲ್ಕು ಖಾತೆಗಳಿವೆ ಅಂತ ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಹೇಳುತ್ತಾರೆ. ಸೇವಿಂಗ್ಸ್ ಖಾತೆ, ಕರೆಂಟ್ ಅಕೌಂಟ್, ನಿಶ್ವಿತ ಠೇವಣಿ (ಎಫ್ ಡಿ) ಮತ್ತು ರಿಕರಿಂಗ್ ಡಿಪಾಸಿಟ್-ಇವೆಲ್ಲ ಹೂಡಿಕೆ ಖಾತೆಗಳೇ ಅಂತ ಅವರು ಹೇಳುತ್ತಾರೆ. ಬ್ಯಾಂಕ್ಗಳು ಅತ್ಯಂತ ಸುರಕ್ಷಿತ ಅನ್ನೋ ಭಾವನೆ ನಮ್ಮಲ್ಲಿ ಇರೋದ್ರಿಂದಲೇ ನಾವು ಅಲ್ಲಿ ಹಣ ಹೂಡುತ್ತೇವೆ ಎಂದು ಅವರು ಹೇಳುತ್ತಾರೆ. ನಮ್ಮ ಅಸಲು ಬಡ್ಡಿ ಸಮೇತವಾಗಿ ವಾಪಸ್ಸು ಸಿಗುತ್ತದೆ ಅನ್ನುವ ಭರವಸೆಗೆ ನಾವು ಹೂಡಿಕೆ ಮಾಡೋದು. ಅದರೆ ಇತ್ತಿಚಿನ ವರ್ಷಗಳಲ್ಲಿ ನಾವು ಹಣ ಹೂಡಿಕೆ ಮಾಡಿದಾಗ ಅದರ ಒಂದು ಭಾಗಕ್ಕೆ ಬ್ಯಾಂಕ್ನವರು ಡಿಪಾಸಿಟ್ ಇನ್ಶೂರನ್ಸ್ ಕಂಪನಿಯಲ್ಲಿ ವಿಮೆ ಮಾಡಿಸುತ್ತಾರೆ.
ಒಂದು ಪಕ್ಷ ನಾವು ಹಣ ಹೂಡಿಕೆ ಮಾಡಿದ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿ, ಅದು ಮುಚ್ಚಿಹೋಗುವಂಥ ಪರಿಸ್ಥಿತಿ ಎದುರಾದರೆ, ವಿಮೆ ಹಣ ನಮಗೆ ಸಿಗುತ್ತದೆ. ಒಬ್ಬ ವ್ಯಕ್ತಿ ಒಂದು ರೂ. ಕೋಟಿ ವಿಮೆ ಮಾಡಿಸಿದ್ದರೆ, ವಿಮೆ ರೂಪದಲ್ಲಿ ಅವನಿಗೆ ಇದುವರೆಗೆ ಒಂದು ಲಕ್ಷ ರೂ. ಸಿಗುತಿತ್ತು, ಆದರೆ ಈಗ ಅದನ್ನು ರೂ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ರಾವ್ ಹೇಳುತ್ತಾರೆ.
ಭಾರತ ಸರ್ಕಾರದ ಅಧೀನದಲ್ಲಿರುವ ಯಾವುದೇ ಬ್ಯಾಂಕ್ನಲ್ಲಿ ಹಣ ಹೂಡುವುದು ಅತ್ಯಂತ ಸುರಕ್ಷಿತ ಅನ್ನುವುದಾದರೆ ವಿಮೆಯ ಪ್ರಶ್ನೆ ಯಾಕೆ ಉದ್ಭವಿಸಬೇಕು? ಅಂತ ಡಾ ಬಾಲಾಜಿ ಕೇಳುತ್ತಾರೆ. ಅದರರ್ಥ ರಾಷ್ಟ್ರೀಕೃತ ಬ್ಯಾಂಕಗಳೂ ಸೇಫಲ್ಲ. ನಮ್ಮ ಹಳೆಯ ವಿಚಾರಧಾರೆಗಳನ್ನು ಬದಲಿಸಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.
ವಿಜಯ ಮಲ್ಯ, ನೀರವ ಮೋದಿ, ಮೆಹುಲ್ ಚೋಕ್ಸಿ ಮುಂತಾದವರು ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಅದನ್ನು ತೀರಿಸದೆ ಬೇರೆ ದೇಶಗಳಿಗೆ ಓಡಿಹೋದರೆ, ಬ್ಯಾಂಕ್ಗಳು ಮುಚ್ಚಿಹೋಗುವ ಪ್ರಮೇಯ ಎದುರಾಗುತ್ತದೆ ಎಂದು ಡಾ ರಾವ್ ಹೇಳುತ್ತಾರೆ.
ಬ್ಯಾಂಕ್ಗಳು ನಮ್ಮಿಂದ ಠೇವಣಿ ರೂಪದಲ್ಲಿ ಸ್ವೀಕರಿಸಿದ ಹಣವನ್ನೇ ಬೇರೆಯವರಿಗೆ ಸಾಲವಾಗಿ ಕೊಡುತ್ತವೆ. ಇದರ ಬಗ್ಗೆ ನಮ್ಮ ಸಂವಿಧಾನಲ್ಲೂ ಉಲ್ಲೇಖವಿದೆ. ಠೇವಣಿ ರೂಪದಲ್ಲಿ ಪಡೆಯುವ ಹಣವನ್ನು ಬ್ಯಾಂಕ್ ಗಳು ಪ್ರಗತಿಶೀಲ ಉದ್ದಿಮೆ/ಉದ್ದಿಮೆದಾರರಿಗೆ ಸಾಲದ ರೂಪದಲ್ಲಿ ಕೊಡಬಹುದು ಎಂದು ಅದರಲ್ಲಿ ಹೇಳಲಾಗಿದೆ. ಅಂಥ ಉದ್ದಿಮೆಗಳನ್ನು ಪ್ರೊಡಕ್ಟಿವ್ ವೆಂಚರ್ಸ್ ಅನ್ನುತ್ತಾರೆ. ಡಾ ರಾವ್ ಹೇಳುವ ಹಾಗೆ ಠೇವಣಿ ಹೂಡುವ ಮತ್ತು ಸಾಲಗಾರರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ.
ಭಾರತದ ಬ್ಯಾಂಕ್ಗಳಲ್ಲಿ ರೂ 10 ಲಕ್ಷ ಕೋಟಿಗೂ ಹೆಚ್ಚು ಸಾಲದ ಹಣ ವಸೂಲಾಗದೆ ಉಳಿದುಕೊಂಡಿದೆ, ಆದರೆ, ಠೇವಣಿ ರೂಪದಲ್ಲಿ ಬ್ಯಾಂಕ್ಗಳಲ್ಲಿ ರೂ 150 ಲಕ್ಷ ಕೋಟಿಗೂ ಹೆಚ್ಚ ಹಣ ಜಮೆಯಾಗಿರುವುದರಿಂದ ವಸೂಲಾಗದ ಮೊತ್ತ ಹೊರೆಯೆನಿಸದು ಅಂಥ ಡಾ ಬಾಲಾಜಿ ರಾವ್ ಹೇಳುತ್ತಾರೆ.
ಇದನ್ನೂ ಓದಿ: Shimoga: ಹೆಂಡತಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುವಾಗಲೇ ನೇಣಿಗೆ ಶರಣಾದ ಶಿವಮೊಗ್ಗ ಜೈಲಿನ ವಾರ್ಡರ್