ಮುಧೋಳ ಸಮೀಪ ಕಬ್ಬಿನಗದ್ದೆಗೆ ಬಿದ್ದ ಬೆಂಕಿ ಆರಿಸಲು ಅಗ್ನಿ ಶಾಮಕದಳ ಹರಸಾಹಸ ಪಡಬೇಕಾಯಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 29, 2022 | 12:37 AM

ಮುಧೋಳದಿಂದ ಅಗ್ನಿಶಾಮಕ ದಳ ಮಿರ್ಜಿಗೆ ಬರಬೇಕೆಂದರೆ ಕನಿಷ್ಟ ಅರ್ಧಗಂಟೆಯಾದರೂ ಬೇಕು. ಫೈರ್ ಎಂಜಿನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ನಂತರವೂ ಬೆಂಕ ಬಿದ್ದ ಗದ್ದೆ ತಲುಪುವುದು ತಡವಾಗಿದೆ. ಭೀಮಪ್ಪನವರ ಗದ್ದೆ ಒಳಭಾಗದಲ್ಲಿರುವುದರಿಂದ ಅಲ್ಲಿವರೆಗೆ ಫೈರ್ ಎಂಜಿನ್ ತೆಗೆದುಕೊಂಡು ಹೋಗಲು ಕಸರತ್ತು ಮಾಡಬೇಕಾಗಿದೆ.

ಬೇಸಿಗೆ ಕಾಲ ಶುರುವಾಗಿಬಿಟ್ಟಿದೆ. ಬೆಂಕಿ ಅವಘಡಗಳು ಬೇಸಿಗೆಯಲ್ಲಿ ಹೆಚ್ಚು ಸಂಭವಿಸುತ್ತವೆ. ಬಣವೆಗಳಿಗೆ, ಉತ್ತರ ಕರ್ನಾಟಕದಲ್ಲಿ (North Karnataka) ಪೈರು ಬೆಳೆದು ನಿಂತ ಹೊಲಗಳಲ್ಲಿ ಬೆಂಕಿ ಬೀಳೋದು ಸಾಮಾನ್ಯ ಸಂಗತಿ. ಆ ಭಾಗದ ಜನರಿಗೆ ಇದು ಚೆನ್ನಾಗಿ ಗೊತ್ತಿರುತ್ತದೆ. ಸಂಕ್ರಾಂತಿ ಹಬ್ಬದಿಂದಲೇ ಅಲ್ಲಿ ಬಿಸಿಲಿನ ತಾಪ ಹೆಚ್ಚಲಾರಂಭಿಸುತ್ತದೆ. ಮೇ ಬರುವಷ್ಟರಲ್ಲಿ ಅದು 43 ಡಿಗ್ರಿ ಸೆಲ್ಸಿಯಸ್ ನಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೆ ಹೋಗುತ್ತದೆ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ ಶುಕ್ರವಾರ ಬಾಗಲಕೋಟೆ ಜಿಲ್ಲೆ ಮುಧೋಳ್ (Mudhol) ತಾಲೂಕಿನ ಮಿರ್ಜಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ (sugarcane field) ಬೆಂಕಿ ಅನಾಹುತ ಸಂಭವಿಸಿದೆ. 20-ಎಕರೆ ಗದ್ದೆ ಭೀಮಪ್ಪ ಮಿರ್ಜಿ (Bhimappa Mirji) ಹೆಸರಿನ ರೈತನಿಗೆ ಸೇರಿದ್ದು. ಗದ್ದೆಗೆ ಬೆಂಕಿ ಬಿದ್ದಾಗ ಭೀಮಪ್ಪ ಹೊಲದಲ್ಲಿಯೇ ಇದ್ದರೋ ಅಥವಾ ಮನೆಯಲ್ಲಿದ್ದಾಗ ವಿಷಯ ಗೊತ್ತಾಯಿತೋ ಅನ್ನೋದು ನಮಗೆ ಗೊತ್ತಾಗಿಲ್ಲ. ಅವರು ಹತಾಷರಾಗಿ ಬೆಂಕಿ ಆರಿಸುತ್ತಿರುವುದು ಮಾತ್ರ ವಿಡಿಯೋನಲ್ಲಿ ಕಾಣುತ್ತಿದೆ.

ಮಿರ್ಜಿ ಗ್ರಾಮದಿಂದ ತಾಲ್ಲೂಕು ಕೇಂದ್ರ ಮುಧೋಳ ಸುಮಾರು 17 ಕಿಮೀ ದೂರದಲ್ಲಿದೆ. ಅಲ್ಲಿಂದ ಅಗ್ನಿಶಾಮಕ ದಳ ಮಿರ್ಜಿಗೆ ಬರಬೇಕೆಂದರೆ ಕನಿಷ್ಟ ಅರ್ಧಗಂಟೆಯಾದರೂ ಬೇಕು. ಫೈರ್ ಎಂಜಿನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ನಂತರವೂ ಬೆಂಕ ಬಿದ್ದ ಗದ್ದೆ ತಲುಪುವುದು ತಡವಾಗಿದೆ. ಭೀಮಪ್ಪನವರ ಗದ್ದೆ ಒಳಭಾಗದಲ್ಲಿರುವುದರಿಂದ ಅಲ್ಲಿವರೆಗೆ ಫೈರ್ ಎಂಜಿನ್ ತೆಗೆದುಕೊಂಡು ಹೋಗಲು ಕಸರತ್ತು ಮಾಡಬೇಕಾಗಿದೆ.

ಅಗ್ನಿ ಶಾಮಕದಳದ ಸಿಬ್ಬಂದಿ ಅಂತಿಮವಾಗಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗುವಷ್ಟರಲ್ಲಿ ಬೆಳೆದು ನಿಂತ ಕಬ್ಬು ಸಾಕಷ್ಟು ಪ್ರಮಾಣದಲ್ಲಿ ಬೆಂಕಿಗಾಹುತಿ ಆಗಿದೆ. ಬಯಲು ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ಕಾಳ್ಗಿಚ್ಚಿನಂತೆ ಅದು ಹರಡಲಾರಂಭಿಸುತ್ತದೆ.

ಇದನ್ನೂ ಓದಿ: ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರೀ ಅನಾಹುತ