Padahastasana: ನರವ್ಯೂಹವನ್ನು ಬಲಪಡಿಸುವ ಪಾದಹಸ್ತಾಸನ ಮಾಡುವುದು ಹೇಗೆ? ಮೋದಿ ವಿಡಿಯೋ ಇಲ್ಲಿದೆ

|

Updated on: Jun 16, 2024 | 1:34 PM

International Yoga Day 2024: ಯೋಗ ದಿನ ಸನ್ನಿಹಿತವಾಗಿದೆ. ಪ್ರತಿ ವರ್ಷವೂ ಜೂನ್​ 21ರಂದು ವಿಶ್ವ ಯೋಗದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ತಿಳಿಸುವ ಹಾಗೂ ಅದರ ಪ್ರಯೋಜನಗಳನ್ನು ವಿವರಿಸುವ ವಿಡಿಯೋಗಳನ್ನು ಪ್ರಧಾನಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಪಾದಹಸ್ತಾಸನ.

ಯೋಗ ದಿನ ಸನ್ನಿಹಿತವಾಗಿದೆ. ಪ್ರತಿ ವರ್ಷವೂ ಜೂನ್​ 21ರಂದು ಅಂತಾರಾಷ್ಟ್ರೀಯ ಯೋಗ  ದಿನ(International Yoga Day)ವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ತಿಳಿಸುವ ಹಾಗೂ ಅದರ ಪ್ರಯೋಜನಗಳನ್ನು ವಿವರಿಸುವ ವಿಡಿಯೋಗಳನ್ನು ಪ್ರಧಾನಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಪಾದಹಸ್ತಾಸನ.

ಈ ಆಸನದಲ್ಲಿ ಕಾಲಬೆರಳು ಮತ್ತು ಕಾಲುಗಂಟುಗಳನ್ನು ಸ್ಪರ್ಷಿಸಲಾಗುತ್ತದೆ. ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಕರೆಯಲಾಗುತ್ತದೆ.

ವಿಧಾನ: ಮೊದಲು ಕಾಲುಗಳನ್ನು ಹತ್ತಿರವಾಗಿಸಿ ನೇರವಾಗಿ ನಿಂತುಕೊಳ್ಳಿ, ಉಸಿರನ್ನು ಒಳತೆಗೆದುಕೊಂಡು ಎರಡೂ ಕೈಗಳನ್ನು ಮೇಲಕ್ಕೆತ್ತಿ, ಕೈಗಳು ನೇರವಾಗಿದ್ದು, ಕಿವಿಗೆ ತಾಗುವಂತಿರಬೇಕು.

ಉಸಿರನ್ನು ಹೊರಗೆ ಬಿಡುತ್ತಾ, ಸೊಂಟದಿಂದ ಕೆಳಗೆ ಬಾಗಿ ನಿಮ್ಮ ಕೈಗಳಿಂದ ಕಾಲನ್ನು ಮುಟ್ಟಿರಿ. ಈ ಭಂಗಿಯಲ್ಲಿ ಕಾಲನ್ನು ನೇರವಾಗಿಸಿ ತಲೆಯನ್ನು ಮೊಣಗಂಟಿನ ಸಮೀಪದವರೆಗೆ ಬಾಗಿಸಿ. ಇದೇ ಭಂಗಿಯಲ್ಲಿ ಸುಮಾರು 30-40 ಸೆಕೆಂಡುಗಳ ಕಾಲ ನಿಲ್ಲಿ, ಈ ಭಂಗಿ ಸೂರ್ಯ ನಮಸ್ಕಾರದ ಮೂರನೇ ಹಂತವೂ ಆಗಿದೆ. ಈ ಭಂಗಿಯಿಂದ ಮರಳಲು, ಉಸಿರನ್ನು ಒಳತೆಗೆದುಕೊಂಡು ಕೈಗಳನ್ನು ಸಡಿಲಗೊಳಿಸಿ ಬಳಿಕ ದೇಹವನ್ನು ಮೇಲಕ್ಕೆತ್ತಿ.
ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಈ ಆಸನಗಳನ್ನು ಮಾಡುವುದು ಸೂಕ್ತವಲ್ಲ.

ಪ್ರಯೋಜನಗಳೇನು?
ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.
ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.
ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.
ನರವ್ಯೂಹವನ್ನು ಬಲಗೊಳಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:41 am, Sun, 16 June 24

Follow us on