ಕಲ್ಲಿದ್ದಲಿನ ಸಮಸ್ಯೆಯನ್ನು ಕೇಂದ್ರ ಕೂಡಲೇ ಸರಿಪಡಿಸದಿದ್ದರೆ ಅನೇಕ ವಿದ್ಯುತ್ ಸ್ಥಾವರಗಳನ್ನು ಮುಚ್ಚಬೇಕಾಗುತ್ತದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 12, 2021 | 4:23 PM

ಕೋಲ್ ಇಂಡಿಯಾ, ಫೆಬ್ರುವರಿ ತಿಂಗಳಲ್ಲೇ ಕೇಂದ್ರ ಇಂಧನ ಸಚಿವಾಲಯಕ್ಕೆ ಕಲ್ಲಿದ್ದಲು ಕೊರತೆ ತಲೆದೋರುವ ಬಗ್ಗೆ ಎಚ್ಚರಿಸಿತ್ತಂತೆ. ಕಲ್ಲಿದ್ದಲು-ಆಧಾರಿತ ವಿದ್ಯುತ್ ಬೇಡಿಕೆ ಹೆಚ್ಚಾಗಿ ಅದಕ್ಕನುಗುಣವಾಗಿ ಉತ್ಪಾದನೆಯೂ ಹೆಚ್ಚಿದ್ದರಿಂದ ತೀವ್ರ ಬಿಕ್ಕಟ್ಟು ಎದುರಾಗಿದೆ.

ಈ ಸಂಗತಿ ಜೀರ್ಣಿಸಿಕೊಳ್ಳವುದು ಕಷ್ಟವಾದರೂ ಅದೇ ಕಟು ವಾಸ್ತವ. ಭಾರತ ಕಲ್ಲಿದ್ದಲಿನ ಘೋರ ಕೊರತೆಯನ್ನು ಅನಭವಿಸುತ್ತಿದ್ದು ಇದೇ ಸ್ಥಿತಿ ಮುಂದುವರಿದರೆ, ಕಲ್ಲಿದ್ದಲು-ಆಧಾರಿತ ವಿದ್ಯುಚ್ಛಕ್ತಿ ಉತ್ಪಾದನಾ ಘಟಕಗಳು ತೀರ ಸಂಕಷ್ಟಕ್ಕೆ ಬೀಳಲಿವೆ ಇಲ್ಲವೇ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಿವೆ. ಹಿಂದೆ ಯಾವತ್ತೂ ಕಾಣದಷ್ಟು ಕಲ್ಲಿದ್ದಲಿನ ಕೊರತೆ ಭಾರತ ಪ್ರಸ್ತುತವಾಗಿ ಎದುರಿಸುತ್ತಿದೆ. ಆದರೆ, ರಾಜ್ಯ ಸರ್ಕಾರಗಳ ನಿರಂತರ ಆಗ್ರಹಗಳ ಹೊರತಾಗಿಯೂ ಕೇಂದ್ರ ಕಲ್ಲಿದ್ದಿಲಿನ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಕಲ್ಲಿದ್ದಲು-ಆಧಾರಿತ ಥರ್ಮಲ್ ಪವರ್ ಪ್ಲ್ಯಾಂಟ್​ಗಳಲ್ಲಿ ಕಲ್ಲಿದ್ದಲಿನ ಕೆಂಡಗಳಿಂದ ಉತ್ಪನ್ನವಾಗುವ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ.

ಭಾರತದ ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರ ಒದಗಿಸಿರುವ ಮಾಹಿತಿ ಪ್ರಕಾರ, ಕಲ್ಲಿದ್ದಲು-ಆಧಾರಿತ ಪವರ್ ಪ್ಲಾಂಟ್​​​​ಗಳ ಪೈಕಿ ಶೇಕಡಾ 80ರಷ್ಟು ‘ಚಿಂತಾಜನಕ’ ಸ್ಥಿತಿಯಲ್ಲಿವೆ. ಕೆಲವು ವಿದ್ಯುತ್ ಸ್ಥಾವರಗಳು ‘ತೀರಾ ಚಿಂತಾಜನಕ’ ಸ್ಥಿತಿಯಲ್ಲಿದ್ದು ಅವುಗಳಲ್ಲಿ ಕಲ್ಲಿದ್ದಲಿನ ದಾಸ್ತಾನು 5 ದಿನಗಳಲ್ಲಿ ಕೊನೆಗೊಳ್ಳಲಿದೆ.

ಗಮನಿಸಬೇಕಿರುವ ಸಂಗತಿಯೇನೆಂದರೆ, ಕೋಲ್ ಇಂಡಿಯಾ, ಫೆಬ್ರುವರಿ ತಿಂಗಳಲ್ಲೇ ಕೇಂದ್ರ ಇಂಧನ ಸಚಿವಾಲಯಕ್ಕೆ ಕಲ್ಲಿದ್ದಲು ಕೊರತೆ ತಲೆದೋರುವ ಬಗ್ಗೆ ಎಚ್ಚರಿಸಿತ್ತಂತೆ. ಕಲ್ಲಿದ್ದಲು-ಆಧಾರಿತ ವಿದ್ಯುತ್ ಬೇಡಿಕೆ ಹೆಚ್ಚಾಗಿ ಅದಕ್ಕನುಗುಣವಾಗಿ ಉತ್ಪಾದನೆಯೂ ಹೆಚ್ಚಿದ್ದರಿಂದ ತೀವ್ರ ಬಿಕ್ಕಟ್ಟು ಎದುರಾಗಿದೆ.

ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಕಲ್ಲಿದ್ದಲು ಸಂಪನ್ಮೂಲ ಹೊಂದಿರುವ ಭಾರತದ ಗಣಿ ಪ್ರದೇಶಗಳಲ್ಲಿ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ. ಕೇಂದ್ರ ಸರ್ಕಾರವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಕೂಡಲೇ ಅರಂಭಿಸದಿದ್ದರೆ ಸ್ಥಾವರಗಳನ್ನು ಮುಚ್ಚದೆ ವಿಧಿಯಿರುವುದಿಲ್ಲ.

2021ರ ಮೊದಲ 8 ತಿಂಗಳುಗಳ ಅವಧಿಯಲ್ಲಿ ಕಲ್ಲಿದ್ದಲು-ಆಧಾರಿತ ವಿದ್ಯುತ್ ಉತ್ಪಾದನೆ ಒಂದನೇ ಐದು ಭಾಗದಷ್ಟು ಹೆಚ್ಚಾಗಿದ್ದು ಇದು ವಿದ್ಯುತ್ ಉತ್ಪಾದನೆಯ ಶೇಕಡಾ 13.2 ಒಟ್ಟಾರೆ ಹೆಚ್ಚಳವನ್ನು ಹಿಂದಿಕ್ಕಿದೆ. ಭಾರತದಲ್ಲಿ ಉತ್ಪಾದನೆಯಾಗುವ ವಿದ್ಯುತ್ ನ ಶೇಕಡಾ 70 ಕಲ್ಲಿದ್ದಲು-ಆಧಾರಿತವಾಗಿವೆ. ಕಲ್ಲಿದ್ದಲು-ಆಧಾರಿತ 135 ವಿದ್ಯುತ್ ಸ್ಥಾವರಗಳ ಪೈಕಿ, ಸುಮಾರು 100 ಪ್ಲಾಂಟ್​ಗಳಲ್ಲಿ ಕಲ್ಲಿದ್ದಲಿನ ದಾಸ್ತಾನು ಹೆಚ್ಚು ಕಡಿಮೆ ಮುಗಿಯಲು ಬಂದಿದೆ.

ಒಕ್ಕೂಟದ ಮಾರ್ಗಸೂಚಿಗಳ ಪ್ರಕಾರ ಸ್ಥಾವರಗಳಲ್ಲಿ ಕನಿಷ್ಠ ಎರಡು ವಾರಗಳಿಗೆ ಸಾಕಾಗುವಷ್ಟು ಕಲ್ಲಿದ್ದಲಿನ ದಾಸ್ತಾನು ಇರಬೇಕು.

ಇದನ್ನೂ ಓದಿ:  ‘ಕಾಶ್ಮೀರ ನಮ್ಮದು..’-ಅಲೈ-ಖೈದಾ ಹೆಸರಲ್ಲಿ ಫೇಕ್​ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಪಾಕ್​ ಉಗ್ರರು !