ನಾಗರಬಾವಿಯಲ್ಲಿ ನವರಾತ್ರಿ: ಮೈಸೂರು ದಸರಾ ರೀತಿಯಲ್ಲಿ ತೆರಿಗೆ ಅಧಿಕಾರಿ ಮನೆಯಲ್ಲಿ ಗೊಂಬೆಗಳ ಕಲರವ, ನೀವೂ ನೋಡ ಬನ್ನಿ

| Updated By: ಸಾಧು ಶ್ರೀನಾಥ್​

Updated on: Oct 18, 2023 | 11:05 AM

ಬೆಂಗಳೂರು ಗ್ರಾಮಾಂತರದ ಕೆಲವು ಮನೆಗಳಲ್ಲಿ ಹಲವಾರು ವರ್ಷಗಳಿಂದ ಬೊಂಬೆ ಪ್ರದರ್ಶನ ಮಾಡುವವರು ಸುಮಾರು 50 ರಿಂದ 60 ವರ್ಷಗಳ ಹಳೆಯ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ಬೊಂಬೆಗಳನ್ನು ಪ್ರದರ್ಶನಕ್ಕೆ ಕೂಡಿಸುವುದು ಒಂದು ಕಲೆ.ಈ ನವರಾತ್ರಿ ಬೊಂಬೆ ಪ್ರದರ್ಶನ ಮಾಡುವ ಕಲೆ ಆಚರಣೆಗೆ ಬಂದಿರುವುದು ರಾಜಮನೆಗಳಿಂದ. ಮೊದಲು ಮಕ್ಕಳ ಮನರಂಜನೆಗಾಗಿ ಪ್ರಾರಂಭವಾದ ಈ ಬೊಂಬೆ ಪ್ರದರ್ಶನ ನಂತರದ ದಿನಗಳಲ್ಲಿ ಸಾಂಪ್ರದಾಯಕ ಆಚರಣೆ ಆಗಿದೆ.

ಮೈಸೂರಿನಲ್ಲಿ ನಡೆಯುವ ನವರಾತ್ರಿ ಮತ್ತು ದಸರಾ ಉತ್ಸವದ (Mysore Dasara) ಸಂದರ್ಭದಲ್ಲೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ನವರಾತ್ರಿ ಬೊಂಬೆಗಳ ಸಂಭ್ರಮ ಪ್ರಾರಂಭವಾಗುತ್ತದೆ. ಈ ಭಾಗದಲ್ಲಿ ನವರಾತ್ರಿ ಸಮೀಪವಾಗುತ್ತಿದಂತೆ ಮನೆಗಳಲ್ಲಿರುವ ಬೊಂಬೆಗಳನ್ನು ಶುಭ್ರಗೊಳಿಸುವ, ಸಾಕಷ್ಟು ಹೊಸ ಬೊಂಬೆಗಳನ್ನು ಅಂಗಡಿಗಳಿಂದ ತರುವ ಕಾರ್ಯ ನಡೆಯುತ್ತದೆ. ಅದರೊಂದಿಗೆ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿಯ (Navratri) ಒಂಬತ್ತು ದಿನಗಳ ಕಾಲ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಮತ್ತು ಆರಾಧನೆ ನಡೆಯುತ್ತದೆ. ಇನ್ನು ಕೆಲ ಮನೆಗಳಲ್ಲಿ ಕೆಲವರು ದೇವಿ ಕೂಡಿಸುತ್ತಾರೆ. ಹಾಗೆ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ. ಗೊಂಬೆಗಳನ್ನು ಕೂಡಿಸುವ ಆಚರಣೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಸರಾದಲ್ಲಿ ದೇವಿಯ ಆರಾಧಾನೆಗೆ ಮಾತ್ರ ಸೀಮಿತವಾಗದೆ ನಮ್ಮ ನಾಡಿನ ಗತವೈಭವ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸಲಾಗುತ್ತದೆ. ಹಾಗಾಗಿ ಬೆಂಗಳೂರಿನ ಕಾವೇರಿ ಲೇಔಟ್ ನಾಗರಬಾವಿಯಲ್ಲಿರುವ (Nagarbavi) ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುವ ಪ್ರಭಾವತಿ ಅವರ ಮನೆಯಲ್ಲಿ ದಸರಾ ಬೊಂಬೆ ಈ ಬಾರಿ ವಿಶೇಷವಾಗಿದ್ದು, ಮೈಸೂರು ದಸರಾ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ.

ಬೊಂಬೆಗಳ ಪ್ರದರ್ಶನದಲ್ಲಿ ಪುರಾಣದ ವ್ಯಕ್ತಿಗಳಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಬೊಂಬೆಗಳನ್ನು ನವರಾತ್ರಿ ಹಬ್ಬದಲ್ಲಿ ಪ್ರದರ್ಶನಗೊಳಿಸುತ್ತಾರೆ. ಮಹಾಲಯ ಅಮಾವಾಸ್ಯೆ ದಿನದಿಂದ ವಿಜಯದಶಮಿ ತನಕ ನಡೆಯುವ ನವರಾತ್ರಿ ಬೊಂಬೆ ಪ್ರದರ್ಶನಕ್ಕೆ ನಡುಮನೆಯಲ್ಲಿ ಉತ್ತಮ ವೇದಿಕೆಯನ್ನು ಸಿದ್ದಪಡಿಸಲಾಗಿರುತ್ತದೆ. ಯಾವ ಯಾವ ಬೊಂಬೆಗಳನ್ನು ಎಲ್ಲಿ ಕೂಡಿಸಬೇಕು ಎಂಬುದನ್ನು ಮನೆಯ ಸದಸ್ಯರು ಚರ್ಚಿಸಿ ನಿರ್ಧರಿಸುತ್ತಾರೆ.

ನವರಾತ್ರಿ ಬೊಂಬೆ ಹಬ್ಬದಲ್ಲಿ ಮಹಿಳೆಯರ ಪಾತ್ರ ಪ್ರಧಾನವಾಗಿರುತ್ತದೆ. ಮಕ್ಕಳು ಮನೆ ಮನೆಗಳಿಗೆ ತೆರಳಿ ನವರಾತ್ರಿ ಬೊಂಬೆಗಳ ನೋಡುವುದೇ ಸಂಭ್ರಮವಾಗಿರುತ್ತದೆ. ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ ಕಳಸ ಸ್ಥಾಪನೆಯೊಂದಿಗೆ ಚಾಲನೆಗೊಳ್ಳುತ್ತದೆ.

ನಂತರ ಪ್ರತಿನಿತ್ಯ ಒಂದೊಂದು ದೇವತೆಗಳನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಪೂಜೆ ನೈವೇದ್ಯದ ನಂತರ ಮಹಿಳೆಯರಿಗೆ ಬಾಗಿನ ಮತ್ತು ಮಕ್ಕಳಿಗೆ ಸಿಹಿ ಹಂಚಲಾಗುತ್ತದೆ. ನೂರಾರು ಬೊಂಬೆಗಳನ್ನಿಟ್ಟು ದಸರಾ ನೋಡಲು ಮೈಸೂರಿಗೆ ಹೋಗಿ, ಬೊಂಬೆ ನೋಡಲು ನಮ್ಮ ಮನೆಗೆ ತಪ್ಪದೇ ಬನ್ನಿ ಎಂದು ದೊಡ್ಡಬಳ್ಳಾಪುರದ ಹಲವಾರು ಕುಟುಂಬಗಳು ಬಂಧುಗಳಿಗೆ ಮತ್ತು ಸ್ನೇಹಿತರನ್ನು ಆಹ್ವಾನಿಸುತ್ತಾರೆ.

ನವರಾತ್ರಿ ಹಬ್ಬದಲ್ಲಿ ಬೊಂಬೆಗಳನಿಟ್ಟು ಪೂಜಿಸುವ ಆಚರಣೆಗೆ ಹಲವಾರು ದಶಕಗಳಿಂದ ತಮ್ಮ ಮನೆಯಲ್ಲಿ ಈ ರೀತಿಯಲ್ಲಿ ನಡೆಯುತ್ತಿದೆ.50 ವರ್ಷಗಳಿಗೂ ಹಳೆಯದಾದ ಬೊಂಬೆಗಳನ್ನು ಈ ಹಬ್ಬದಲ್ಲಿಟ್ಟು ಪೂಜಿಸುತ್ತಾರೆ. ನವರಾತ್ರಿ ದಿನಗಳಲ್ಲಿ ನಡೆಯುವ ಈ ದಸರಾ ಬೊಂಬೆಗಳ ಸಂಭ್ರಮದಲ್ಲಿ ಮನೆಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸುತ್ತಾರೆ.

ನವರಾತ್ರಿ ಬೊಂಬೆಯ ಹಬ್ಬಕ್ಕೆ ಕುಟುಂಬದ ಸದಸ್ಯರು ಬೇರೆ ಬೇರೆ ಊರುಗಳಿಗೆ, ಧಾರ್ಮಿಕ ಸ್ಥಳಗಳಿಗೆ ಹೋದಾಗ ಹೊಸ ಹೊಸ ಬೊಂಬೆಗಳನ್ನು ತರುತ್ತಾರೆ. ವಿಶಿಷ್ಠ ವಿನ್ಯಾಸದ ವಿವಿಧ ಮಾದರಿಯ ಬೊಂಬೆಗಳು, ಕುಸುರಿ ಮಾಡಿರುವ ಬೊಂಬೆಗಳು ಗಮನ ಸೆಳೆಯುತ್ತವೆ.

ಕೈಲಾಸ ಪರ್ವತದಲ್ಲಿ ಶಿವ,ಪಾರ್ವತಿ ಮತ್ತು ಗಣಪತಿ ಕುಳಿತಿರುವುದು.ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ಒಂದೆಡೆ ಇರುವಂತೆ ಮಾಡಿರುತ್ತಾರೆ. ಇದಲ್ಲದೆ ವಿಷ್ಣುವಿನ ದಶಾವತಾರ, ಮದುವೆ ದಿಬ್ಬಣ, ಪ್ರಾಣಿ ಪಕ್ಷಿಗಳು, ಉದ್ಯಾನವನ, ಮೃಗಾಲಯ, ದಶಾವತಾರ, ಮದುವೆ ದಿಬ್ಬಣ,ಗ್ರಾಮೀಣ ಚಿತ್ರಣ ಕೊರವಂಜಿ ಗೊಂಬೆಗಳನ್ನು ಕ್ರಮಬದ್ಧವಾಗಿ ಕೂಡಿಸಲಾಗುತ್ತದೆ.

ಇವಕ್ಕೆ ಮೆರುಗು ನೀಡುವಂತೆ ಉದ್ಯಾನವನ, ಮೃಗಾಲಯ, ಕಾಡು, ಪರ್ವತ, ಅರಮನೆ, ಬೆಟ್ಟ ಗುಡ್ಡ, ವಿಶೇಷ ಮಣ್ಣಿನ ಹಾಗೂ ಮರದ ಬೊಂಬೆಗಳು, ಚೈನಾ ಅಟಿಕೆಗಳು,ಪ್ಲಾಸ್ಟರ್ ಆಫ್ ಪ್ಯಾರೀಸ್, ಫೈಬರ್ ಬೊಂಬೆಗಳು, ಮಕ್ಕಳ ಆಧುನಿಕ ಆಟಿಕೆಗಳಲ್ಲದೆ ಗ್ರಾಮೀಣ ಬದುಕಿನ ದೃಶ್ಯಯವನ್ನು ಬೊಂಬೆಗಳಿಂದ ತಯಾರಿಸಿ ನವರಾತ್ರಿ ಹಬ್ಬದಲ್ಲಿ ಪ್ರದರ್ಶನ ಮಾಡುತ್ತಾರೆ.

ಬೊಂಬೆ ಪ್ರದರ್ಶನ ನೋಡಲು ಬಂದ ನೆರೆಹೊರೆಯವರಿಗೆ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಬೊಂಬೆಗಳನ್ನು ಪರಿಚಯಿಸುತ್ತಾ, ಈ ಬೊಂಬೆ ಇಂತಹ ಊರಿನಿಂದ ಮತ್ತು ಯಾವ ಸಂದರ್ಭದಲ್ಲಿ ತರಲಾಯಿತು ಎಂಬುದನ್ನು ಹೇಳುವುದು ಮಾತ್ರ ಮರೆಯುವುದಿಲ್ಲ ಅಧೀಕಾರಿ ಪ್ರಭಾವತಿ

ಬೊಂಬೆಗಳ ಪ್ರದರ್ಶನದಲ್ಲಿ ಪುರಾಣದ ವ್ಯಕ್ತಿಗಳಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಬೊಂಬೆಗಳನ್ನು ಕಾಣಬಹುದಾಗಿದೆ. ಒಂದೊಂದು ಮನೆಯಲ್ಲಿ ನೂರರಿಂದ ಐದು ನೂರು ಬೊಂಬೆಗಳ ತನಕ ಸಂಗ್ರಹಿಸಿ ಪ್ರತಿವರ್ಷ ಪ್ರದರ್ಶನಗೊಳಿಸುತ್ತಾರೆ.

ಬೆಂಗಳೂರು ಗ್ರಾಮಾಂತರದ ಕೆಲವು ಮನೆಗಳಲ್ಲಿ ಹಲವಾರು ವರ್ಷಗಳಿಂದ ಬೊಂಬೆ ಪ್ರದರ್ಶನ ಮಾಡುವವರು ಸುಮಾರು 50 ರಿಂದ 60 ವರ್ಷಗಳ ಹಳೆಯ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ಇದರ ಜೊತೆಗೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬೊಂಬೆಗಳನ್ನು ಹೊಸದಾಗಿ ಖರೀದಿ ಮಾಡುತ್ತಾರೆ.ವಿಜಯದಶಮಿ ದಿನ ನಂತರ ಬೊಂಬೆಗಳನ್ನು ಜೋಪಾನವಾಗಿ ಮುಂದಿನ ವರ್ಷದ ಹಬ್ಬಕ್ಕೆ ಇಟ್ಟಿರುತ್ತಾರೆ.

ಬೊಂಬೆಗಳನ್ನು ಪ್ರದರ್ಶನಕ್ಕೆ ಕೂಡಿಸುವುದು ಒಂದು ಕಲೆ.ಈ ನವರಾತ್ರಿ ಬೊಂಬೆ ಪ್ರದರ್ಶನ ಮಾಡುವ ಕಲೆ ಆಚರಣೆಗೆ ಬಂದಿರುವುದು ರಾಜಮನೆಗಳಿಂದ. ಮೊದಲು ಮಕ್ಕಳ ಮನರಂಜನೆಗಾಗಿ ಪ್ರಾರಂಭವಾದ ಈ ಬೊಂಬೆ ಪ್ರದರ್ಶನ ನಂತರದ ದಿನಗಳಲ್ಲಿ ಸಂಪ್ರದಾಯಕ ಆಚರಣೆ ಆಗಿದೆ.

ಬೊಂಬೆ ಉತ್ಸವವು ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ. ಬಹುಶಃ ಇದಕ್ಕೆ ತಂಜಾವೂರು ಕಲೆಯ ಪ್ರಭಾವವಿದ್ದು ವೈಷ್ಣವರು ಹೆಚ್ಚಾಗಿ ಆಚರಿಸುತ್ತಾರೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Follow us on