ಉತ್ತರ ಕರ್ನಾಟಕದ ಹೊಲಗಳಲ್ಲಿ ಸಿಹಿತೆನೆಗಳ ಜೊತೆ ಆಚರಿಸುವ ಎಳ್ಳು ಅಮವಾಸ್ಯೆ ಹಬ್ಬದ ಬಗ್ಗೆ ಇದೆಲ್ಲ ನಿಮಗೆ ಗೊತ್ತಾ?

|

Updated on: Dec 30, 2024 | 6:58 PM

ದೃಶ್ಯಗಳಲ್ಲಿ ಕಾಣುವ ಹಾಗೆ ಕುಟುಂಬಸ್ಥರು ವಿವಿಧ ಬಗೆಯ ಭಕ್ಷ್ಯಗಳನ್ನು ಮನೆಯಲ್ಲಿ ತಯಾರು ಮಾಡಿಕೊಂಡು ಬಂದಿದ್ದಾರೆ. ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಎಣ್ಣೆಗಾಯ್ ಸೇರಿದಂತೆ ಎರಡು-ಮೂರು ಬಗೆ ಪಲ್ಯಗಳು, ಮೊಸರು ಭಜ್ಜಿ, ಮೆಣಸಿನಕಾಯಿ ಭಜ್ಜಿ, ತುಪ್ಪ, ಹಾಲು, ಮೊಸರು, ಹಪ್ಪಳ-ಸಂಡಿಗೆ, ಅನ್ನ , ಆಂಬ್ರ (ಸಾಂಬಾರು) ಮೊದಲಾದವುಗಳನ್ನು ಒಟ್ಟಿಗೆ ಕೂತು ಸವಿಯಲಾಗುತ್ತಿದೆ.

ಬಾಗಲಕೋಟೆ: ನಗರ ಪ್ರದೇಶಗಳ ನಿವಾಸಿಗಳಿಗೆ ಎಳ್ಳು ಅಮವಾಸ್ಯೆಯ ಬಗ್ಗೆ ಹೆಚ್ಚು ಗೊತ್ತಿರಲಾರದು, ಆದರೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇದೊಂದು ದೊಡ್ಡ ಮತ್ತು ಕುಟುಂಬಸ್ಥರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂಭ್ರಮ ಸಡಗರಗಳೊಂದಿಗೆ ಆಚರಿಸುವ ಹಬ್ಬ. ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ಕುಟುಂಬವೊಂದು ತಮ್ಮ ಹೊಲದಲ್ಲಿ ಆಚರಿಸಿದ ಹಬ್ಬದ ದೃಶ್ಯಗಳಿವು. ಅಂದಹಾಗೆ, ಈ ಹಬ್ಬವನ್ನು ಹೊಲಗಳಲ್ಲೇ ಹೆಚ್ಚು ಆಚರಿಸಲಾಗುತ್ತದೆ. ಇದು ಸಿಹಿತೆನೆಯ ಸಮಯ. ಅಂದರೆ ಬಿಳಿಜೋಳದ ತೆನೆಗಳು ಜೋಳವಾಗಿ ಪರಿವರ್ತನೆಯಾಗುವ ಮೊದಲಿನ ಅವಧಿಯ ಕಾಲ. ಸಿಹಿತೆನೆಗಳು ಹಸುರಾಗಿರುತ್ತವೆ, ಸಕ್ಕರೆಯಂತೆ ಸಿಹಿ, ತಿನ್ನಲು ರುಚಿಕರ ಮತ್ತು ಪೌಷ್ಠಿಕಾಂಶಗಳಿಂದ ಕೂಡಿರುತ್ತವೆ. ಇವತ್ತಿನ ದಿನ ಸಿಹಿತೆನೆ ತಿನ್ನದಿದ್ದರೆ ಹಬ್ಬ ಅಪೂರ್ಣ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೊಪ್ಪಳ: ಬರದ ನಡುವೆಯೂ ಅದ್ದೂರಿಯಾಗಿ ನಡೆದ ರೈತರ ಎಳ್ಳ ಅಮಾವಾಸ್ಯೆ ಹಬ್ಬ