ಕೊಪ್ಪಳ: ಬರದ ನಡುವೆಯೂ ಅದ್ದೂರಿಯಾಗಿ ನಡೆದ ರೈತರ ಎಳ್ಳ ಅಮಾವಾಸ್ಯೆ ಹಬ್ಬ

Yellu Amavasya: ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಯ ಜನರು ಇಂದು ಭೂತಾಯಿಗೆ ಸಂಭ್ರಮದಿಂದ ನಮಿಸಿದ್ದಾರೆ. ನಮ್ಮಲ್ಲೆರ ಮೇಲಿನ ಮುನಿಸನ್ನು ಕಡಿಮೆ ಮಾಡಿಕೊಳ್ಳು ತಾಯಿ ಅಂತ ಬೇಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಅಂದರೆ ರೈತರಿಗೆ ಸಂಭ್ರಮದ ದಿನವಾಗಿದೆ. ರಾಜ್ಯದ ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಗದಗ ಸೇರಿದಂತೆ ಉತ್ತರಕರ್ನಾಟಕದ ಜಿಲ್ಲೆಗಳ ಜನರು ಎಳ್ಳ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಕೊಪ್ಪಳ: ಬರದ ನಡುವೆಯೂ ಅದ್ದೂರಿಯಾಗಿ ನಡೆದ ರೈತರ ಎಳ್ಳ ಅಮಾವಾಸ್ಯೆ ಹಬ್ಬ
ಎಳ್ಳ ಅಮವಾಸ್ಯೆ ಹಬ್ಬ ಆಚರಿಸಿದ ರೈತರು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 11, 2024 | 9:07 PM

ಕೊಪ್ಪಳ, ಜನವರಿ 11: ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿರಲಿ, ಬರವಿರಲಿ, ಆ ಜನರ ಮೇಲೆ ಪ್ರಕೃತಿ ಮುನಿಸಿಕೊಂಡರು ಕೂಡ ಪ್ರಕೃತಿ ಮೇಲಿನ ಪ್ರೇಮವನ್ನು ಮಾತ್ರ ರೈತರು ಕಡಿಮೆ ಮಾಡಿಕೊಂಡಿಲ್ಲ. ಹೌದು ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಯ ಜನರು ಇಂದು ಭೂತಾಯಿಗೆ ಸಂಭ್ರಮದಿಂದ ನಮಿಸಿದ್ದಾರೆ. ನಮ್ಮಲ್ಲೆರ ಮೇಲಿನ ಮುನಿಸನ್ನು ಕಡಿಮೆ ಮಾಡಿಕೊಳ್ಳು ತಾಯಿ ಅಂತ ಬೇಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ (Yellu Amavasya) ಅಂದರೆ ರೈತರಿಗೆ ಸಂಭ್ರಮದ ದಿನವಾಗಿದೆ.

ಬೇರೆಲ್ಲಾ ಅಮಾವಾಸ್ಯೆಗಿಂತ ರಾಜ್ಯದ ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಗದಗ ಸೇರಿದಂತೆ ಉತ್ತರಕರ್ನಾಟಕದ ಜಿಲ್ಲೆಗಳ ಜನರಿಗೆ ಎಳ್ಳ ಅಮವಾಸೆ ಸಂಭ್ರಮದ ಅಮವಾಸ್ಯೆ. ಅದರಲ್ಲೂ ರೈತರಂತು ಎಳ್ಳ ಅಮಾವಾಸ್ಯೆಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಬೇರೆಡೆ ದೀಪಾವಳಿ, ಯುಗಾದಿ ಹಬ್ಬವನ್ನು ಎಷ್ಟು ಸಂಭ್ರಮದಿಂದ ಆಚರಿಸುತ್ತಾರೋ, ಅದೇ ರೀತಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇಂದು ಎಳ್ಳ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳ ಅಮಾವಾಸ್ಯೆಯ ದಿನದಂದು ಉತ್ತರ ಕರ್ನಾಟದ ರೈತರು ತಮ್ಮ ತಮ್ಮ ಜಮೀನಿಗೆ ಪರಿವಾರ ಸಮೇತ ಹೋಗ್ತಾರೆ. ತಮ್ಮ ಹೊಲದಲ್ಲಿ ಹಸಿರಿನಿಂದ ಕಂಗೊಳಿಸುವ ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಾರೆ. ಜೋಳದ ಕಡಬು, ರೊಟ್ಟಿಯ ಮಿಶ್ರಣದಿಂದ ಮಾಡಿದ ಚರಗವನ್ನು ಹೊಲದ ತುಂಬೆಲ್ಲಾ ಚೆಲ್ಲುವ ಮೂಲಕ ಈ ಸುಗ್ಗಿ ಸಮೃದ್ದಿಯಾಗುವಂತೆ ಮಾಡು ತಾಯಿ ಅಂತ ಭೂತಾಯಿಗೆ ಬೇಡಿಕೊಳ್ಳುತ್ತಾರೆ ರೈತ ಬಾಂದವರು.

ಇದನ್ನೂ ಓದಿ: Yellu Amavasya 2024: ದಟ್ಟ ಕಾಡಿನಲ್ಲಿ ಜೋಮ್ಲು ತೀರ್ಥದಲ್ಲಿ ಎಳ್ಳು ಅಮವಾಸ್ಯೆ ದಿನ ಸಾವಿರಾರು ಭಕ್ತರಿಂದ ತೀರ್ಥಸ್ನಾನ

ಹಿಂಗಾರು ಹಂಗಾಮಿ ಜೋಳ ಸೇರಿದಂತೆ ಇನ್ನಿತರೆ ಬೆಳೆಗಳು ಹುಲುಸಾಗಿ ಬೆಳೆಯಲಿ, ಎಳ್ಳಿನಷ್ಟಾದ್ರು ಕೂಡ ಭಕ್ತಿ ಭೂರಮೆಯ ಮೇಲಿರಲಿ ಅನ್ನೋ ಉದ್ದೇಶದಿಂದ ಎಳ್ಳ ಅಮಾವಾಸ್ಯೆಯನ್ನು ಆಚರಿಸಲಾಗುತ್ತೆ.

ಹೊಲದಲ್ಲಿ ನಡೆಯುತ್ತೆ ಪಾಂಡವರ ಪೂಜೆ

ಹಬ್ಬದ ಅಂಗವಾಗಿ ಹೊಲದಲ್ಲಿ ಪಾಂಡವರು ಅಂತ ತಿಳಿದು ಐದು ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ಇಂತಹ ವಿಶಿಷ್ಟವಾದ ಸಂಪ್ರದಾಯ ಇಂದಿಗೂ ಉತ್ತರ ಕರ್ನಾಟಕದಾದ್ಯಂತ ಕಂಡು ಬರುತ್ತದೆ.

ಎಳ್ಳ ಅಮವಾಸ್ಯೆ ವಿಶೇಷ ಭರ್ಜರಿ ಭೋಜನ

ಎಳ್ಳ ಅಮಾವಾಸ್ಯೆಯ ದಿನದ ಮತ್ತೊಂದು ವಿಶೇಷವೆಂದರೆ ಭರ್ಜರಿ ಮತ್ತು ಸಾಮೂಹಿಕ ಭೋಜನ. ರೈತ ಮಹಿಳೆಯರು ಜಮೀನಿಗೆ ತೆರಳುವ ಮುನ್ನ ಮನೆಯಲ್ಲಿ ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿಕೊಂಡು ಹೋಗ್ತಾರೆ. ಅದರಲ್ಲೂ ಶೇಂಗಾ ಹೋಳಿಗೆ, ಕಡಕ ರೊಟ್ಟಿ, ಶೇಂಗಾ ಚಟ್ನಿ, ಪುಂಡಿಪಲ್ಯ, ಬಜ್ಜಿ, ಕಡುಬು, ಸೇರಿದಂತೆ ಹತ್ತಾರು ರೀತಿಯ ಅಡುಗಡೆಯನ್ನು ಮಾಡಿಕೊಂಡು ಜಮೀನಿಗೆ ಹೋಗುತ್ತಾರೆ. ನಂತರ ಹಸಿರುನುಟ್ಟು ಕಂಗೋಳಿಸುತ್ತಿರುವ ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕುಟುಂಬದ ಎಲ್ಲಾ ಜನರು ಸೇರಿ ಭರ್ಜರಿ ಭೋಜನವನ್ನು ಸವಿಯುತ್ತಾರೆ. ಜೊತೆಗೆ ಬಂದುಬಾಂಧವರನ್ನು, ಸ್ನೇಹಿತರನ್ನು ಈ ಹಬ್ಬಕ್ಕೆ ಆಮಂತ್ರಿಸಿ ಎಲ್ಲರಿಗೂ ರುಚಿರುಚಿಯಾದ ಊಟವನ್ನು ಬಡಿಸುತ್ತಾರೆ.

ಇದನ್ನೂ ಓದಿ: ಬೆಳಗಾವಿ: ಸುರೇಬಾನ ಗ್ರಾಮದ ಹೊರ ವಲಯದ ಬೆಟ್ಟದಾರಣ್ಯದಲ್ಲೇ ಶಬರಿಗೆ ಶ್ರೀರಾಮನ ದರ್ಶನ

ನಗರದ ಜನರು ಕೂಡ ಇಂದು ಜಂಜಾಟಗಳನ್ನು ಮರೆತು, ಹಳ್ಳಿಗಳಿಗೆ ಹೋಗಿ, ಅಲ್ಲಿ ಸಂಭ್ರಮದಿಂದ ಹಬ್ಬ ಮಾಡಿ, ಭರ್ಜರಿ ಭೋಜನ ಸವಿಯುತ್ತಾರೆ. ವಿಶೇಷವೆಂದರೆ ವರ್ಷದ ಯಾವ ದಿನವು ರೈತರು ಇಷ್ಟೊಂದು ಸಂಭ್ರಮದಿಂದ ಇರುವದಾಗಲಿ, ಇಷ್ಟೊಂದು ಭಕ್ಷ್ಯ ಭೋಜನಗಳನ್ನು ಈ ಭಾಗದಲ್ಲಿ ತಯಾರಿಸುವದಿಲ್ಲ. ಆದರೆ ಎಳ್ಳ ಅಮಾವಾಸ್ಯೆಯ ದಿನದಂದು ಮಾತ್ರ ಭರ್ಜರಿ ಭೋಜನವನ್ನು ಮಾಡ್ತಾರೆ.

ರೈತರು ಪ್ರತಿನಿತ್ಯದ ಕೃಷಿ ಕೆಲಸಕ್ಕೆ ವಿರಾಮ ನೀಡಿ ತಮ್ಮ ಮನೆಯವರ ಜೊತೆ ಹಬ್ಬವನ್ನು ಮಾಡುತ್ತಾರೆ. ಎಳ್ಳ ಅಮಾವಾಸ್ಯೆಗಾಗಿ ರೈತರು ಕಾಯುತ್ತಾರೆ. ಬರ ಬರಲಿ, ನೆರೆ ಬರಲಿ, ರೈತರಿಗೆ ಭೂಮಿ ತಾಯಿಯ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಲ್ಲ. ಸಾಲ ಮಾಡಿಯಾದ್ರು ಸಂಭ್ರಮದಿಂದ ರೈತರು ಹಬ್ಬ ಆಚರಿಸುತ್ತೇವೆ ಎಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದ ರೈತ ಶರಣಬಸಪ್ಪ ಹೇಳುತ್ತಾರೆ.

ರೈತರ ಹಬ್ಬವೆಂದೆ ಪ್ರಸಿದ್ದವಾಗಿರುವ ಎಳ್ಳ ಅಮಾವಾಸ್ಯೆ ಇಂದಿಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಆಚರಣೆಯಲ್ಲಿರುವ ಹಬ್ಬ. ರೈತರು ತಮ್ಮ ದೈನಂದಿನ ಜಂಜಡಗಳನ್ನು ಮರೆತು ಖುಷಿಯಿಂದ ಈ ಹಬ್ಬವನ್ನು ಆಚರಿಸ್ತಾರೆ. ಆ ಮೂಲಕ ತಮಗೆ ಅನ್ನ ನೀಡುವ ಭೂತಾಯಿಗೆ ಸ್ಮರಿಸುತ್ತಾರೆ. ಬರದ ಮಧ್ಯೆಯೂ ಜನರು ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಖುಷಿ ಪಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:03 pm, Thu, 11 January 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ