ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರಿಂದ ಕೌಟುಂಬಿಕ ಕಾರಣಗಳಿಂದಾಗಿ ಹೊರಗೆ ಹೋದ ಗೋಲ್ಡ್ ಸುರೇಶ್ ಅವರು, ಮನೆಯಲ್ಲಿದ್ದಾಗ, ಧನರಾಜ್ಗೆ ಪ್ರಾಮಿಸ್ ಮಾಡಿದ್ದರಂತೆ. ಅವರ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದಾಗಿ. ಇದೀಗ ಮನೆಯಿಂದ ಹೊರಗೆ ಬಂದ ಮೇಲೆ ಧನರಾಜ್ ಮನೆಗೆ ಭೇಟಿ ನೀಡಿರುವ ಸುರೇಶ್ ತೊಟ್ಟಿಲು ಉಡುಗೊರೆ ನೀಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಚಾಲ್ತಿಯಲ್ಲಿದೆ. ಕೆಲವರು ಅಚ್ಚರಿಯ ಪ್ರದರ್ಶನ ಹೆಚ್ಚು ವಾರಗಳ ಕಾಲ ಉಳಿದುಕೊಂಡಿದ್ದಾರೆ. ಅವರಲ್ಲಿ ಧನರಾಜ್ ಸಹ ಒಬ್ಬರು. ಧನರಾಜ್, ಬಿಗ್ಬಾಸ್ಗೆ ಬಂದ ಆರಂಭದಲ್ಲಿ ಇವರು ಬೇಗನೆ ಎಲಿಮಿನೇಟ್ ಆಗುತ್ತಾರೆ ಎಂದು ಬಹಳ ಮಂದಿ ಅಂದುಕೊಂಡಿದ್ದರು, ಆದರೆ ಎಲ್ಲರೊಡನೆ ಸ್ನೇಹ ಉಳಿಸಿಕೊಂಡು ಧನರಾಜ್ ಹಲವು ವಾರಗಳ ಕಾಲ ಉಳಿದುಕೊಂಡು ಬಂದಿದ್ದಾರೆ. ಬಿಗ್ಬಾಸ್ ಮನೆಯಿಂದ ಅನಿವಾರ್ಯ ಕಾರಣದಿಂದ ಹೊರಗೆ ಹೋದ ಸುರೇಶ್ ಅವರೊಟ್ಟಿಗೆ ಧನರಾಜ್ಗೆ ಒಳ್ಳೆಯ ಗೆಳೆತನ ಇತ್ತು. ಮನೆಯಲ್ಲಿದ್ದಾಗ, ಧನರಾಜ್ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದಾಗಿ ಸುರೇಶ್ ಹೇಳಿದ್ದರು. ಇದೀಗ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿರುವ ಸುರೇಶ್, ಧನರಾಜ್ ಮನೆಗೆ ಭೇಟಿ ನೀಡಿ ಮಗಳಿಗೆ ಉಡುಗೊರೆ ಕೊಟ್ಟಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 04, 2025 08:34 PM
Latest Videos