Weekly Horoscope in Kannada: ವಾರ ಭವಿಷ್ಯ: ಜ 05 ರಿಂದ 11 ರವರೆಗೆ ವಾರ ಭವಿಷ್ಯ
ಇದು ಜನವರಿ ತಿಂಗಳ ಎರಡನೇ ವಾರವಿದಾಗಿದೆ. ೦೫-೦೧೨೦೨೫ರಿಂದ ೧೧-೦೧-೨೦೨೫ರವರೆಗೆ ಇರಲಿದೆ. ಗ್ರಹಗಳು ಅನ್ಯಾನ್ಯ ಸ್ಥಾನದಲ್ಲಿ ಇದ್ದರೂ ಅವರು ಮಿತ್ರ ಅಂಶವನ್ನು ಪಡೆದಿದ್ದು ತಮ್ಮ ಶುಭಫಲವನ್ನು ನೀಡುವರು. ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ಶನಿಯಿಂದ ಶುಭ. ಕುಜನ ಅಂಶವನ್ನೂ ಪಡೆದು ಸ್ವರಾಶಿಯಲ್ಲಿ ಇದ್ದು ಉತ್ಸಾಹವನ್ನು ಹೆಚ್ಚಿಸುವನು.
ಇದು ಜನವರಿ ತಿಂಗಳ ಎರಡನೇ ವಾರವಿದಾಗಿದೆ. ೦೫-೦೧೨೦೨೫ರಿಂದ ೧೧-೦೧-೨೦೨೫ರವರೆಗೆ ಇರಲಿದೆ. ಗ್ರಹಗಳು ಅನ್ಯಾನ್ಯ ಸ್ಥಾನದಲ್ಲಿ ಇದ್ದರೂ ಅವರು ಮಿತ್ರ ಅಂಶವನ್ನು ಪಡೆದಿದ್ದು ತಮ್ಮ ಶುಭಫಲವನ್ನು ನೀಡುವರು.
ಮೇಷ ರಾಶಿ: ಜನವರಿ ತಿಂಗಳ ಎರಡನೇ ವಾರದಲ್ಲಿ ರಾಶಿ ಅಧಿಪತಿ ನೀಚಸ್ಥಾನದಲ್ಲಿ ಇದ್ದು ರವಿಯ ಅಂಶವನ್ನು ಪಡೆದಿದ್ದು ತಾಯಿಯಿಂದ ನಿಮಗೆ ಗೃಹನಿರ್ಮಾಣಕ್ಕೆ ಆರ್ಥಿಕಸಹಾಯ ಸಿಗಲಿದೆ. ಸ್ವಂತಿಕೆಯಿಂದ ಆಲೋಚಿಸಿ ಕೆಲಸಮಾಡಿ. ಹೆಚ್ಚಿನ ಲಾಭವು ದೊರೆಯುವುದು. ಸುಟ್ಟ ಬಟ್ಟೆಗಳನ್ನು ಧರಿಸುವಿರಿ. ಉದ್ಯಮಿಗಳಿಗೆ ಹೊಸ ಕೆಲಸವು ಸಿಗಲಿದೆ. ನಿಮ್ಮ ಜೊತೆಗಾರರನ್ನು ಇಷ್ಟಪಡುವಿರಿ. ಅವರ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಅನಿರೀಕ್ಷಿತ ಧನಾಗಮನದ ನಿರೀಕ್ಷೆಯಲ್ಲಿ ಇರಬಹುದು. ವಿದ್ಯಾರ್ಥಿಗಳು ಉನ್ನತಿಯನ್ನು ಸಾಧಿಸಲು ಯೋಜನೆಯನ್ನು ರೂಪಿಸಿಕೊಳ್ಳುವರು. ತಾಳ್ಮೆಯನ್ನು ಕಳೆದುಕೊಳ್ಳದೇ ವ್ಯವಹರಿಸಿ. ವಿವೇಚನೆಯಿಂದ ಕೆಲಸಗಳನ್ನು ಮಾಡಿ.
ವೃಷಭ ರಾಶಿ: ಮೊದಲ ಮಾಸದ ಎರಡನೇ ವಾರದಲ್ಲಿ ರಾಶಿಯ ಅಧಿಪತಿ ಶುಕ್ರನು ಶನಿಯ ಅಂಶವನ್ನು ಪಡೆದು ಔದ್ಯೋಗಿಕ ರಂಗದಲ್ಲಿ ಪ್ರಶಂಸೆ ಇರಲಿದೆ. ಪರಿಶ್ರಮದ ಕಾರ್ಯವನ್ನು ಮಾಡುವವರಿಗೆ ಆದಾಯ ಹೆಚ್ಚು. ನಿಮ್ಮ ಬಗ್ಗೆ ಕಾಳಜಿ ಇರುವವರಿಗೆ ಅಕ್ಕರೆ ತೋರಿಸಿ. ನಿಮ್ಮ ಒಳ್ಳೆತನವು ದುರುಪಯೋಗಬಾಗಬಹುದು. ದೂರದ ಪ್ರಯಾಣವನ್ನು ಕಡಿಮೆ ಮಾಡಿ. ಯಾರ ಮೇಲೂ ದ್ವೇಷವನ್ನು ಸಾಧಿಸಬೇಡಿ. ಹಣವು ಖರ್ಚಾಗಬಹುದು. ವಿಚಾರಿಸಿ ಅಗತ್ಯತೆಗೆ ಅನುಸಾರವಾಗಿ ಖರ್ಚು ಮಾಡಿ. ಆಪ್ತರ ಮಾತುಗಳು ನಿಮಗೆ ನೋವನ್ನು ತಂದೀತು. ಅವುಗಳ ಮುತುವರ್ಜಿ ಮಾಡುವುದು ಬೇಡ. ಸೌಂದರ್ಯಕ್ಕೆ ಹೆಚ್ಚು ಒತ್ತುಕೊಡಲಿದ್ದೀರಿ. ಕಾರಣವಿಲ್ಲದೆ ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿ.
ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯವರಿಗೆ ಎರಡನೇ ವಾರದಲ್ಲಿ ರಾಶಿಯ ಅಧಿಪತಿಯು ಸ್ವ ಅಂಶದಲ್ಲಿ ಇದ್ದು ವಿವಾಹ ಸಂಬಂಧವನ್ನು ಗಟ್ಟಿಗೊಳಿಸುವನು. ಆರ್ಥಿಕಕತೆಯ ವಿಚಾರವಾಗಿ ಮನೆಯ ಕಲಹಗಳು ಆಗಬಹುದು. ಅನಿರೀಕ್ಷಿತ ಬಂಧುಗಳ ಆಗಮನವು ಮನೆಯಲ್ಲಿ ಹಬ್ನದ ವಾತಾವರಣವನ್ನು ತರಲಿದೆ. ಈ ವಾರ ವಿದ್ಯುಪಕರಣದ ವ್ಯಾಪಾರಿಗಳಿಗೆ ನಷ್ಟವಾಗುವ ಸಾಧ್ಯತೆ ಇದೆ. ಇನ್ನೊಬ್ಬರನ್ನು ನೋಡಿ ಅಸೂಯೆ ಪಡುವುದನ್ನು ಬಿಟ್ಟರೆ ಒಳ್ಳೆಯದು. ಸಮಯದ ಸದುಪಯೋಗವನ್ನು ಇಂದು ಮಾಡಿಕೊಳ್ಳಿ. ವೃತ್ತಿಪರರು ಸ್ವಲ್ಪ ಮಟ್ಟಿಗೆ ನಿರಾಳರತೆಯಲ್ಲಿ ಇರುವಿರಿ. ನಿಮ್ಮವರು ನಿಮ್ಮಿಂದ ಸಹಾಯವನ್ನು ನಿರೀಕ್ಷಿಸಬಹುದು.
ಕರ್ಕಾಟಕ ರಾಶಿ; ಜನವರಿಯ ಎರಡನೇ ವಾರದಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಸ್ವಸ್ಥಾನದಲ್ಲಿ ಇದ್ದು ಮನೋಬಲವನ್ನು ಹೆಚ್ಚಿಸುವನು. ಕೃಷಿಕಾರ್ಯಕ್ಕೆ ಹೆಚ್ಚು ಆಸಕ್ತಿ ಇರಲಿದೆ. ಅಲ್ಪವನ್ನು ಉಳಿಸಲು ಹೋಗಿ ಅತಿಯಾದ ವ್ಯಯವನ್ನು ಮಾಡಿಕೊಳ್ಳುವಿರಿ. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸುವರು. ಸಾಧ್ಯವಾದಷ್ಟು ತಾಳ್ಮೆಯನ್ನು ಉಳಿಸಿಕೊಳ್ಳಿ. ಮನೆಯ ಕಡೆಯಿಂದ ಅನಿರೀಕ್ಷಿತ ಅಶುಭವಾರ್ತೆಯು ಬರಬಹುದು. ಸಿಗಲಿರುವ ಸಾಮಾಜಿಕ ಮನ್ನಣೆಯನ್ನು ಸಕಾರಣವಾಗಿ ತಿರಸ್ಕರಿಸುವಿರಿ. ಉದ್ಯೋಗದ ನಿಮಿತ್ತ ಬೇರೆ ಕಡೆಗೆ ಹೋಗುವ ಸಾಧ್ಯತೆ ಇದೆ. ಉತ್ತಮ ಬಾಂಧವ್ಯವು ಕೆಡದಂತೆ ನೋಡಿಕೊಳ್ಳಿ. ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವಿರಿ.
ಸಿಂಹ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರಲ್ಲಿ ರಾಶಿಯ ಅಧಿಪತಿ ರವಿಯು ಗುರುವಿನ ರಾಶಿಯಲ್ಲಿ ಗುರುವಿನ ಅಂಶವನ್ನು ಪಡೆದಿದ್ದು ವಿದ್ಯಾಭ್ಯಾಸ ಅತ್ಯಂತ ಪೂರಕವಾಗಿದೆ. ಸಂತಾನದ ಸಂತೋಷವನ್ನೂ ನೀವು ಅನುಭವಿಸಬಹುದು. ಧನದ ಸಂಪಾದನೆಗೆ ಬೇರೆ ಊರಿಗೆ ಹೋಗಲಿದ್ದೀರಿ. ಪರಸ್ಥಳದಲ್ಲಿ ರಾಜೋಚಿತ ಭೋಜನ ಸಿಗಲಿದೆ. ಸತ್ಯವನ್ನು ಆಡಲು ಹೋಗಿ ನಿಮ್ಮವರಿಗೆ ಬೇಸರ ತರಿಸುವಿರಿ. ಅತಿಯಾದ ಭೋಜನವು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಣದ ಸಮಸ್ಯಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಣವು ನಿಮಗೆ ಸಿಗದೇ ಓಡಾಟವನ್ನು ನಡೆಸುವಿರಿ. ಅತಿಯಾದ ಆಲೋಚನೆಯಿಂದ ಮನಸ್ಸು ಹಾಳಾಗಬಹುದು. ಧೈರ್ಯವನ್ನು ಕಳೆದುಕೊಳ್ಳಬೇಡಿ.
ಕನ್ಯಾ ರಾಶಿ: ಈ ವಾರ ನಿಮಗೆ ಅನುಕೂಲನಾಗಿದ್ದಾನೆ. ಗುರುವಿನ ರಾಶಿಯಲ್ಲಿ ಬುಧನ ಅಂಶವನ್ನೇ ಪಡೆದ ಕಾರಣ ಕೌಟುಂಬಿಕ ವಿಚಾರದಲ್ಲಿ ಸಾಮರಸ್ಯವಾಗಲಿದೆ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಒಳ್ಳೆಯ ವೃತ್ತಿ ಸಿಗಲಿದೆ. ಬೋಧಕವರ್ಗದವರಿಗೆ ಬೋಧನೆಗೆ ಅವಕಾಶ ಸಿಗಲಿದೆ. ವಿನಾಕಾರಣ ದಾಂಪತ್ಯದಲ್ಲಿ ವೈಮನಸ್ಯ, ಕಲಹಗಳು ಆಗಲಿವೆ. ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಯೋಜನೆಗಳು ಸ್ವಲ್ಪ ವ್ಯತ್ಯಾಸವಾಗಬಹುದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಕೆಲಸ ಮಾಡುವುದು ಸೂಕ್ತ. ಆಧಿಕಾರಯುತವಾದ ಮಾತುಗಳಿಂದ ಒಂಟಿಯಾಗುವಿರಿ.
ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿ ಶುಕ್ರನು ಪಂಚಮದಲ್ಲಿ ಶನಿಯ ಅಂಶಕದಿಂದ ಕಲಾವಿದ್ಯಾರ್ಥಿಗಳಿಗೆ ಶುಭ. ನಿಮ್ಮ ಅಲಕ್ಷ್ಯದಿಂದ ಉದ್ಯೋಗದಲ್ಲಿ ನಷ್ಟವಾಗಲಿದೆ. ಹಣದ ಮೂಲವು ಇಂದು ಇಲ್ಲವಾಗುತ್ತದೆ. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದೆ. ವಿದೇಶಕ್ಕೆ ಗಮನವೂ ಸಾಧ್ಯವಾಗುವುದು. ಜೀವನದಲ್ಲಿ ಬಹಳ ಗೊಂದಲಗಳನ್ನು ಇಟ್ಟುಕೊಂಡಿರುವಿರಿ. ಮಾತನಿಂದ ಆಗದೇ ಇರುವ ಕೆಲಸವು ಮೌನದಿಂದ ಆಗಲಿದೆ. ಸಂತತಿಯ ನಷ್ಟದಿಂದ ಬೇಸರವಾದೀತು. ಇನ್ನೊಬ್ಬರ ಕುರಿತು ಕುತೂಹಲವನ್ನು ಇಟ್ಟುಕೊಂಡಿರುತ್ತೀರಿ. ಆದಷ್ಟು ಒತ್ತಡದಿಂದ ಹೊರಬರಬೇಕು ಎಂದಿದ್ದರೂ ಸಾಧ್ಯವಾಗುವುದು. ನಿಮ್ಮ ವ್ಯಕ್ತಿತ್ವವು ಅನುಸಾರ್ಯವಾಗಲಿದೆ.
ವೃಶ್ಚಿಕ ರಾಶಿ: ಜನವರಿಯ ಎರಡನೇ ವಾರದಲ್ಲಿ ರಾಶ್ಯಧಿಪತಿಯಾದ ಕುಜನು ನೀಚನಾಗಿ ರವಿಯ ಅಂಶವನ್ನು ಪಡೆದು ನವಮದಲ್ಲಿ ಇದ್ದಾನೆ. ಪರಸ್ಪರ ಮಿತ್ರರಾದ ಕಾರಣ ಕುಜನಿಂದ ಅತಿಯಾದ ಅಶುಭವನ್ನು ನಿರೀಕ್ಷಿಸಬಾರದು. ಧೈರ್ಯ ಸಾಹಸ ಕಾರ್ಯಕ್ಕೆ ಒಮ್ಮೆ ಉತ್ಸಾಹವಿದ್ದರೂ ಅನಂತರ ಹೋಗುವುದು. ನಿಮ್ಮ ಮಾತುಗಳು ಪ್ರೇಯಸಿಗೆ ನಕಾರಾತ್ಮಕ ಭಾವವನ್ನು ನೀಡಬಹುದು. ಬಹಳ ಹಿಂದೆ ಆಸೆ ಪಟ್ಟ ವಸ್ತುವೊಂದು ಅನಿರೀಕ್ಷಿತವಾಗಿ ಸಿಗಬಹುದು. ಉತ್ತಮವಾದ ವಸ್ತುವನ್ನು ಯೋಗ್ಯವಾದ ವ್ಯಕ್ತಿಗೆ ದಾನ ಮಾಡಲಿದ್ದೀರಿ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯುಂಟಾಗಬಹುದು. ಧಾರ್ಮಿಕ ಆಚರಣೆಗಳನ್ನು ಮಾಡುವ ಮನಸ್ಸು ಮಾಡುವಿರಿ. ಯಾರದೋ ತಪ್ಪಿನಿಂದ ನೀವು ಕಷ್ಟವನ್ನು ಪಡಬೇಕಾದೀತು. ಸರ್ಕಾರಿ ಕೆಲಸದಲ್ಲಿ ವಿಳಂಬವಾಗುವುದು.
ಧನು ರಾಶಿ: ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ಷಷ್ಠದಲ್ಲಿ ಬುಧನ ಅಂಶವನ್ನು ಪಡೆದು ಬಂಧುಗಳ ಜೊತೆ ವಿರಸವನ್ನು ತರಿಸುವನು. ನಿಮ್ಮ ಯೋಜನೆಗಳನ್ನು ಬದಲಾಯಿಸಲು ಯೋಚಿಸಬೇಡಿ. ಮನೆಯಲ್ಲಿ ಮಕ್ಕಳು ಇರಲಿದ್ದಾರೆ. ಅವರಿಂದ ಸಂತೋಷವು ಇರಲಿದೆ. ವಿದೇಶದ ವ್ಯಾಪಾರದಿಂದ ಲಾಭವಾಗುವುದು. ಆರೋಗ್ಯದ ವ್ಯತ್ಯಾಸದಿಂದ ಆಸ್ಪತ್ರೆಗೆ ಹೋಗಬೇಕಾಗಿಬರಬಹುದು. ಅನಿರೀಕ್ಷಿತವಾಗಿ ಕಾರ್ಯದಲ್ಲಿ ಒತ್ತಡವು ಸಂಭವಿಸುವುದು. ಸಾಹಿತ್ಯಾಸಕ್ತರು ಸಾಹಿತ್ಯಸಮಾರಂಭದಲ್ಲಿ ಭಾಗವಹಿಸುವಿರಿ. ಹಣಕಾಸಿನ ಹರಿವು ತಕ್ಕಮಟ್ಟದಲ್ಲಿ ಇರಲಿದೆ.
ಮಕರ ರಾಶಿ: ಈ ತಿಂಗಳ ಎರಡನೇ ವಾರದಲ್ಲಿ ರಾಶಿಯ ಅಧಿಪತಿ ಶನಿಯು ದ್ವಿತೀಯದಲ್ಲಿ ಇದ್ದು ಮಿತ್ರನ ಅಂಶವನ್ನು ಪಡೆದ ಕಾರಣ ಮಿತ್ರನಿಂದ ಧನಲಾಭ. ಕುಟುಂಬದಲ್ಲಿ ಸೌಖ್ಯವಿರುವುದು. ನೀವು ಆಯ್ಕೆ ಮಾಡಿಕೊಂಡ ದಾರಿಯು ಸುಗಮವಾಗಲಿದೆ. ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ತೀರ್ಪುಗಳು ಬರಬಹುದು. ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಅಮೂಲ್ಯವಾದ ಸಂಪತ್ತುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ. ಹಗುರವಾದ ಮಾತುಗಳು ನಿಮ್ಮನ್ನು ಹಗುರ ಮಾಡುವುದು. ಕಾಕತಾಳೀಯದಂತೆ ನಿಮಗೆ ಆಗಬೇಕಿದ್ದ ಕೆಲಸಗಳು ಆಗುವುವು. ಅತಿಯಾದ ಹಸಿವು ನಿಮ್ಮನ್ನು ಬಾಧಿಸಬಹುದು.
ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ಶನಿಯಿಂದ ಶುಭ. ಕುಜನ ಅಂಶವನ್ನೂ ಪಡೆದು ಸ್ವರಾಶಿಯಲ್ಲಿ ಇದ್ದು ಉತ್ಸಾಹವನ್ನು ಹೆಚ್ಚಿಸುವನು. ಒಂದೇ ತೆರನಾದ ಕೆಲಸಗಳು ನಿಮಗೆ ಬೇಸರವನ್ನು ತರಿಸಬಹುದು. ಯಾವುದೇ ಹುಚ್ಚಾಟದ ಸಾಹಸಕ್ಕೆ ಹೋಗದೇ ಇರುವುದು ಉತ್ತಮ. ಕೋಪವು ಅಸ್ಥಾನದಲ್ಲಿ ಬರುವುದು. ಕೆಲಸವಾಗಲಿಲ್ಲವೆಂದು ಹತಾಶವಾಗಬೇಡಿ. ಆಗುವ ಕಾಲಕ್ಕೆ ಆಗಿಯೇ ಆಗುವುದು ಎನ್ನುವ ದೃಢವಾದ ನಂಬಿಕೆಯನ್ನು ಇಟ್ಟಿರಿ. ಆರೋಗ್ಯವು ಹದ ತಪ್ಪಬಹುದು. ಯಾವ ಸಂದರ್ಭದಲ್ಲಿಯೂ ಸಿಗುವ ನೀವು ನಿಮ್ಮವರಿಗೆ ಬೇಕಾದವರಾಗಿರುತ್ತೀರಿ. ಸಂಪತ್ತಿನ ವಿಚಾರದಲ್ಲಿ ವಿವೇಚನೆ ಇರಲಿ. ಮಿತವ್ಯಯವಿರಲಿ. ಯಾರ ಮೇಲೂ ಅಸೂಯೆ ಬೇಡ. ತಾಳ್ಮೆಯನ್ನು ಇಟ್ಟುಕೊಳ್ಳಿ.
ಮೀನ ರಾಶಿ; ಜನವರಿಯ ಎರಡನೇ ವಾರದಲ್ಲಿ ರಾಶಿಯ ಅಧಿಪತಿ ಬುಧನ ಅಂಶದಲ್ಲಿ ತೃತೀಯ ಸ್ಥಾನದಲ್ಲಿ ಇರುವನು. ಸಹೋದರರ ನಡುವೆ ಸಾಮರಸ್ಯ ಬೆಳೆಯುವುದು. ಸಿನಿಮಾರಂಗದಲ್ಲಿ ಅವಕಾಶಗಳು ಸಿಗಲಿದೆ. ತ್ಯಾಗದಿಂದ ಸಫಲತೆ ಎನ್ನುವ ಮಂತ್ರವನ್ನು ನೀವು ಪಠಿಸುತ್ತಿರುತ್ತೀರಿ. ಸ್ನೇಹವನ್ನು ಕಳೆದುಕೊಳ್ಳುವ ಯೋಚನೆ ದೂರಾಗುವುದು. ಸರ್ಕಾರಿ ನೌಕರರು ವರ್ಗಾವಣೆಯಿಂದ ಹಿಂಸೆಯನ್ನು ಅನುಭವಿಸಬಹುದು. ಈ ವಾರದಲ್ಲಿ ಯಾರ ಹಿತವಚನವನ್ನೂ ನೀವು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಅಭ್ಯಾಸಮಾಡಬೇಕಿದೆ. ಭವಿಷ್ಯವನ್ನು ನಿರ್ಧರಿಸಲು ಉತ್ತಮ ದಿನವಾಗಲಿದೆ. ಹಣಕಾಸಿನ ತೊಂದರೆ ಇರಲಿದೆ.ಲೋಹಿತ ಹೆಬ್ಬಾರ್ – 8762924271 (what’s app only)