AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಅಕ್ಷತಾ ವರ್ಕಾಡಿ
|

Updated on:Sep 13, 2026 | 11:03 AM

Share

ಟಿವಿ9 ಡಿಜಿಟಲ್ ವಾಹಿನಿಯು ಪ್ರಸ್ತುತಪಡಿಸುವ ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಸೆಪ್ಟೆಂಬರ್ 14 ರಿಂದ 20ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವಾರ ಗಣೇಶ ಚತುರ್ಥಿ, ಸರ್ ಎಂ ವಿಶ್ವೇಶ್ವರಯ್ಯ ಜನ್ಮದಿನ ಸೇರಿದಂತೆ ಹಲವು ವಿಶೇಷ ದಿನಗಳಿದ್ದು, ಗ್ರಹಗಳ ಸಂಚಾರದ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು 2026ರ ಸೆಪ್ಟೆಂಬರ್ 14 ರಿಂದ 20ರ ವರೆಗಿನ ವಾರದ ಫಲಾಫಲಗಳನ್ನು ತಿಳಿಸಿದ್ದಾರೆ. ಈ ವಾರ ಪರಾಭವ ನಾಮ ಸಂವತ್ಸರದ ಭಾದ್ರಪದ ಮಾಸವಿದ್ದು, ಹಲವು ಮಹತ್ವದ ಹಬ್ಬಗಳು ಮತ್ತು ವಿಶೇಷ ದಿನಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಪ್ರಥಮ ಪೂಜಿತ ಗಣೇಶನ ಚತುರ್ಥಿ, ಸ್ವರ್ಣ ಗೌರಿ ವ್ರತ, ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನ, ಋಷಿ ಪಂಚಮಿ, ಶ್ರೀಪಾದ ವಲ್ಲಭರ ಜಯಂತ್ಯೋತ್ಸವ ಮತ್ತು ಕನ್ಯಾ ಸಂಕ್ರಮಣದಂತಹ ಪರ್ವಕಾಲಗಳು ಈ ವಾರದಲ್ಲಿವೆ. ಅಲ್ಲದೆ, ಸೂರ್ಯ ಷಷ್ಠಿ, ವಿಶ್ವಕರ್ಮ ಜಯಂತಿ, ರಾಧಾ ಜಯಂತಿ, ದೂರ್ವಾಷ್ಟಮಿ ಮತ್ತು ಕೇದಾರ ವ್ರತಗಳನ್ನು ಕೂಡ ಆಚರಿಸಲಾಗುತ್ತದೆ. ಈ ವಾರದಲ್ಲಿ ಗ್ರಹಗಳ ಸಂಚಾರದಲ್ಲಿ ಮಹತ್ವದ ಬದಲಾವಣೆಗಳಿದ್ದು, ಕುಜ ಗ್ರಹವು ಸೆಪ್ಟೆಂಬರ್ 18ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಿ ಗುರು ಗ್ರಹದೊಂದಿಗೆ ಸಂಚರಿಸಲಿದೆ. ಗುರೂಜಿ ಅವರು ಪ್ರತಿ ರಾಶಿಯವರಿಗೆ ಧನಲಾಭ, ಉದ್ಯೋಗದಲ್ಲಿ ಬಡ್ತಿ, ವೈವಾಹಿಕ ಜೀವನ, ಆರೋಗ್ಯ, ವ್ಯಾಪಾರ, ಶಿಕ್ಷಣ, ಬಂಧು-ಬಾಂಧವ್ಯಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಜೊತೆಗೆ, ಶುಭ ಪರಿಹಾರಗಳು, ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಮಂತ್ರಗಳನ್ನು ಸಹ ಸೂಚಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published on: Sep 13, 2026 09:34 AM

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More