Horoscope Today: ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಸೆಪ್ಟೆಂಬರ್ 13, ಭಾನುವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಸೆಪ್ಟೆಂಬರ್ 13, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷಋತು, ಶುಕ್ಲಪಕ್ಷ, ಬಿದಿಗೆ, ಹಸ್ತಾ ನಕ್ಷತ್ರ, ಶುಕ್ಲಯೋಗ, ಕೌಲವಕರಣ ಒಳಗೊಂಡಿದೆ. ರಾಹುಕಾಲ ಸಂಜೆ 4:51 ರಿಂದ 6:23 ನಿಮಿಷದವರೆಗೆ ಇರುತ್ತದೆ. ಸರ್ವಸಿದ್ಧಿಕಾಲ, ಸಂಕಲ್ಪಕಾಲ, ಶುಭಕಾಲ ಬೆಳಗ್ಗೆ 10:43 ರಿಂದ 12:15 ನಿಮಿಷದವರೆಗೆ ಇರಲಿದೆ.
ನಾಳೆ ಗಣೇಶ ಚತುರ್ಥಿ ಇರುವುದರಿಂದ, ಇಂದು ಹರಿತಾಳಿಕಾ ವ್ರತದ ಜೊತೆಗೆ ಗೌರಿ ಪ್ರತಿಷ್ಠಾಪನೆಗೆ ಬೆಳಗಿನ ಜಾವ 6:08 ರಿಂದ 7:07 ನಿಮಿಷದೊಳಗಡೆ ಶುಭ ಮುಹೂರ್ತವಿದೆ. ವಿನಾಯಕನ ಪ್ರತಿಷ್ಠಾಪನೆಗೆ 11:01 ರಿಂದ 1:28 ನಿಮಿಷದೊಳಗೆ ಉತ್ತಮ ಕಾಲ ಎಂದು ಗುರೂಜಿ ತಿಳಿಸಿದ್ದಾರೆ.

