ಕೊಪ್ಪಳದ ಮುಸಲ್ಮಾನರೊಬ್ಬರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮತ್ತು ಅನ್ನ ಸಂತರ್ಪಣೆ, ಭಾವೈಕ್ಯತೆಗೆ ಉತ್ಕೃಷ್ಟ ಉದಾಹರಣೆ

ಕೊಪ್ಪಳದ ಮುಸಲ್ಮಾನರೊಬ್ಬರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮತ್ತು ಅನ್ನ ಸಂತರ್ಪಣೆ, ಭಾವೈಕ್ಯತೆಗೆ ಉತ್ಕೃಷ್ಟ ಉದಾಹರಣೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 10, 2024 | 11:50 AM

ಕೊಪ್ಪಳದ ಟಿವಿ9 ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಪಿಂಜಾರ ಸಮುದಾಯ ಜಿಲ್ಲಾಧ್ಯಕ್ಷರಾಗಿರುವ ಖಾಸಿಂ ಅಲಿ ಮುದ್ದಾಬಳ್ಳಿ ಎಲ್ಲಾ ಧರ್ಮಗಳು ಒಂದೇ, ಸಮುದಾಯಗಳ ಜನರಿಗೆ ಧರ್ಮಗಳೆಲ್ಲ ಒಂದೇ ತತ್ವ ಸಾರುತ್ತವೆ ಅನ್ನೋದು ಗೊತ್ತಿರಬೇಕು ಅಂತ ಹೇಳುತ್ತಾರಂತೆ.

ಕೊಪ್ಪಳ: ಮಾಲೆಧರಿಸಿರುವ ಅಯ್ಯಪ್ಪ ಸ್ವಾಮಿ ಭಕ್ತರು (Ayyappa Swamy devotees) ಮನೆಯೊಂದರಲ್ಲಿ ಕುಳಿತು ಎಂದಿನ ಭಕ್ತಿಭಾವದಿಂದ ಭಜನೆ ಮತ್ತು ಪೂಜೆಯಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಾಣುತ್ತದೆ. ಇದರಲ್ಲೇನು ವಿಶೇಷ? ಮಾಲೆಧಾರಿ ಅಯ್ಯಪ್ಪ ಸ್ವಾಮಿ ಭಕ್ತರು ತಮ್ಮ ತಮ್ಮ ಊರುಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೀಗೆ ಪೂಜೆ ಮತ್ತು ಭಜನೆ ಮಾಡುತ್ತಾರೆ ಅಂತ ನೀವು ಹೇಳಬಹುದು. ವಿಶೇಷ ಇದೆ ಸ್ವಾಮಿ. ಅವರು ಕುಳಿತಿರೋದು ದೇವಸ್ಥಾನದಲ್ಲಾಗಲೀ ಅಥವಾ ಒಬ್ಬ ಹಿಂದೂ ಮಾಲೆಧಾರಿಯ ಮನೆಯಲ್ಲಾಗಲೀ ಅಲ್ಲ. ಅರ್ಚಕರ ಸಮ್ಮುಖದಲ್ಲಿ ಭಜನೆ ಮತ್ತು ಪೂಜೆ ನಡೆಯುತ್ತಿರೋದು ಒಬ್ಬ ಮುಸಲ್ಮಾನನ (Muslim) ಮನೆಯಲ್ಲಿ! ಹೌದು, ಮಂಗಳವಾರ ರಾತ್ರಿ ಜಿಲ್ಲೆಯ ಗಂಗಾವತಿ (Gangavati) ಪಟ್ಟಣದ ಜಯನಗರದಲ್ಲಿರುವ ಖಾಸಿಂ ಅಲಿ ಮುದ್ದಾಬಳ್ಳಿ ಅವರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ನಡೆಯಿತು. ಪೂಜೆಯ ಬಳಿಕ ಖಾಸಿಂ ಅಲಿ ಕುಟುಂಬದವರು ಮಾಲೆಧಾರಿಗಳಿಗೆ ಅನ್ನಸಂತರ್ಪಣೆ ಮಾಡಿದರು. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಅಲಿ ಸಹ ಅಯ್ಯಪ್ಪ ಸ್ವಾಮಿ ವ್ರತ ಕೈಗೊಂಡಿರುವವರ ಜೊತೆ ಭಜನೆಯಲ್ಲಿ ಪಾಲ್ಗೊಂಡಿದ್ದು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ