ಬೆಂಗಳೂರಿನ ಹರಿಶ್ಚಂದ್ರಘಾಟ್ ನಲ್ಲಿ ಸುಚನಾಳ 4-ವರ್ಷದ ಮಗುವಿನ ಅಂತ್ಯಕ್ರಿಯೆ, ಅಂತಿಮ ವಿಧಿವಿಧಾನ ಪೂರೈಸಿದ ತಂದೆ

ಬೆಂಗಳೂರಿನ ಹರಿಶ್ಚಂದ್ರಘಾಟ್ ನಲ್ಲಿ ಸುಚನಾಳ 4-ವರ್ಷದ ಮಗುವಿನ ಅಂತ್ಯಕ್ರಿಯೆ, ಅಂತಿಮ ವಿಧಿವಿಧಾನ ಪೂರೈಸಿದ ತಂದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 10, 2024 | 10:57 AM

ಪೊಲೀಸ್ ಮೂಲಗಳ ಪ್ರಕಾರ ಗೋವಾದಲ್ಲಿ ಸರ್ವಿಸ್ ಅಪಾರ್ಟ್ಮೆಂಟ್ ಒಂದರಲ್ಲಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದ ನಂತರ ಸುಚನಾ ಸೇಟ್ ತಮ್ಮ ಮುಂಗೈ ನರ ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರು ರೂಮ್ ಖಾಲಿ ಮಾಡಿದ ಬಳಿಕ ಬಾತ್ ರೂಮಿನಲ್ಲಿ ರಕ್ತದ ಕಲೆಗಳನ್ನು ಹೌಸ್ ಕೀಪಿಂಗ್ ಸಿಬ್ಬಂದಿ ನೋಡಿದ ಬಳಿಕ ಅಪಾರ್ಟ್ಮೆಂಟ್ ನವರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು.

ಬೆಂಗಳೂರು: ನಗರದ ಸ್ಟಾರ್ಟ್ಅಪ್ ಕಂಪನಿಯೊಂದರಲ್ಲಿ (Startup company) ಸಿಇಓ ಆಗಿ ಕೆಲಸ ಮಾಡುತ್ತಿದ್ದ ಸುಚನಾ ಸೇಟ್ ರಿಂದ (Suchana Seth) ಕೊಲೆಯಾದ ಎಂದು ಗೋವಾ ಪೊಲೀಸರು ಆರೋಪಿಸಿರುವ 4-ವರ್ಷದ ಮಗುವಿನ ಅಂತಿಮ ವಿಧಿವಿಧಾನಗಳನ್ನು (final rites) ನೇರವೇರಿಸಲು ದೇಹವನ್ನು ನಗರದ ಹರಿಶ್ಚಂದ್ರ ಘಾಟ್ ಗೆ ತಂದಿರುವುದು ದೃಶ್ಯಗಳಲ್ಲಿ ನೋಡಬಹುದು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ನಿನ್ನೆ ಸಾಯಂಕಾಲ ಮಗುವಿನ ದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ತಡರಾತ್ರಿ ಸುಮಾರು 1.30 ಕ್ಕೆ ರಾಜಾಜಿನಗರದಲ್ಲಿರುವ ಸುಚನಾರ ಅಪಾರ್ಟ್ ಮೆಂಟ್ ಗೆ ಕಳೆಬರವನ್ನು ತರಲಾಗಿತ್ತು. ವಿಡಿಯೋದಲ್ಲಿ ಮಗುವಿನ ತಂದೆ ಅಂದರೆ ಸುಚನಾರಿಂದ ವಿಚ್ಚೇದನ ಪಡೆಯದಿದ್ದರೂ ದೂರವಾಗಿರುವ ವೆಂಕಟ ರಾಮನ್ ಮತ್ತು ಕೆಲ ಸಂಬಂಧಿಕರನ್ನು ನೋಡಬಹುದು. ಲಭ್ಯವಿರುವ ಮಾಹಿತಿ ಪ್ರಕಾರ ರಾಮನ್ ಕೇರಳ ಮೂಲದವರಾಗಿದ್ದು ಇಂಡೋನೇಶ್ಯಾದ ಜಕಾರ್ತಾದಲ್ಲಿ ಕೆಲಸ ಮಾಡುತ್ತಾರೆ. ನಿನ್ನೆ ಪೊಲೀಸರಿಂದ ವಿಷಯ ಗೊತ್ತಾದ ಬಳಿಕ ಅವರು ಬೆಂಗಳೂರಿಗೆ ಧಾವಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ