ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಪೂಜೆ ಮಾಡಲು, ತಂಗಲು ಅವಕಾಶ ಕೊಟ್ಟು ಭಾವೈಕ್ಯತೆ ಮೆರೆದ ಧರ್ಮಗುರು

ಬೆಳಗಾವಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಐವರು ಭಕ್ತರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಡತ್ತರ ಗ್ರಾಮದಲ್ಲಿರುವ ಮಸೀದಿಯಲ್ಲಿ ಆಶ್ರಯ ಪಲ್ಪಿಸಿಕೊಡುವ ಮೂಲಕ ಧರ್ಮಗುರುಗಳೊಬ್ಬರು ಭಾವೈಕ್ಯತೆ ಮೆರೆದಿದ್ದಾರೆ. ಹಾಗೂ ಮಸೀದಿಯ ಪಕ್ಕದಲ್ಲೇ ಪೂಜೆಗೂ ಅವಕಾಶ ಮಾಡಿಕೊಟ್ಟಿದ್ದಾರೆ.

ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಪೂಜೆ ಮಾಡಲು, ತಂಗಲು ಅವಕಾಶ ಕೊಟ್ಟು ಭಾವೈಕ್ಯತೆ ಮೆರೆದ ಧರ್ಮಗುರು
ಅಯ್ಯಪ್ಪ ವೃತಧಾರಿಗಳಿಗೆ ಮಸೀದಿಯಲ್ಲಿ ಪೂಜೆ ಮಾಡಲು, ತಂಗಲು ಅವಕಾಶ ಕೊಟ್ಟು ಭಾವೈಕ್ಯತೆ ಮೆರೆದ ಧರ್ಮಗುರು
Follow us
TV9 Web
| Updated By: ಆಯೇಷಾ ಬಾನು

Updated on:Jan 06, 2024 | 11:41 AM

ಕೊಡಗು, ಜ.06: ಆಚಾರ-ವಿಚಾರಗಳಿಗಾಗಿಯೇ ಸಂಘರ್ಷಗಳಾಗುವ ಇಂತಹ ಸಮಯದಲ್ಲಿ ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ (Ayyappa Swamy Devotees) ಮಾಲಾಧಾರಿಗಳಿಗೆ ಆಶ್ರಯ ನೀಡುವ ಮೂಲಕ ಧರ್ಮ ಗುರುಗಳೊಬ್ಬರು (Muslim Molvi) ಭಾವೈಕ್ಯತೆ ಮೆರೆದಿದ್ದಾರೆ. ಅಯ್ಯಪ್ಪ ಮಾಲೆ ಧರಿಸಿ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳುವ ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಆಶ್ರಯ ನೀಡುವ ಮೂಲಕ ಮಸೀದಿ ಧರ್ಮ ಗುರುಗಳೊಬ್ಬರು ಮಾನವೀಯತೆ, ಭಾವೈಕ್ಯತೆ ಮೆರೆದಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಡತ್ತರ ಗ್ರಾಮದಲ್ಲಿರುವ ಮಸೀದಿಯಲ್ಲಿ ಬೆಳಗಾವಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಐವರು ಭಕ್ತರು ಆಶ್ರಯಪಡೆದಿದ್ದಾರೆ.

ಬೆಳಗಾವಿಯಿಂದ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಮಾರ್ಲಾಧಾರಿಗಳು ಮಳೆ ಮತ್ತು ಕತ್ತಲಾದ ಕಾರಣ ಮಸೀದಿಯ ಧರ್ಮ ಗುರುಗಳಿಗೆ ತಂಗಲು ಅವಕಾಶ ನೀಡುವಂತೆ ಕೇಳಿದ್ದರು. ಭಕ್ತಾಧಿಗಳ ಕೋರಿಕೆಗೆ ಸ್ಪಂದಿಸಿದ ಮಸೀದಿ ಆಡಳಿತ ಮಂಡಳಿ, ಮಸೀದಿ ಬಳಿಯಲ್ಲೇ ಪೂಜೆ ಮಾಡಲು ಅವಕಾಶ ನೀಡಿ ಹಾಗೂ ಮಲಗಲು ವ್ಯವಸ್ಥೆ ಮಾಡಿಕೊಡಲಾಗಿದೆ. ಐವರು ಭಕ್ತರು ರಾತ್ರಿ ಮಸೀದಿಯಲ್ಲೇ‌ ತಂಗಿ ಬೆಳಗ್ಗೆ ಪ್ರಯಾಣ ಮುಂದುವರಿಸಿದ್ದಾರೆ. ಮಸೀದಿ ಧರ್ಮಗುರುಗಳ ಈ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮಂಗಳೂರಿನ ವಜ್ರದೇಹಿ ಕೋಲದಲ್ಲಿ ರಿಷಬ್ ಭಾಗಿ; ದೈವ ಕೊಟ್ಟ ಸೂಚನೆ ಏನು?

ಹೆತ್ತ ಅಮ್ಮನ್ನ ನಡುರಸ್ತೆಯಲ್ಲಿ ಬಿಟ್ಟು ಹೋದ ಮಗಳು, ಅಳಿಯ

ಎಷ್ಟೋ ಜನ ಮಕ್ಕಳಿಲ್ಲ ಅಂತ ಕೊರಗುತ್ತಾರೆ. ಆದರೆ ಇಲ್ಲೊಬ್ಬ ವೃದ್ಧೆಯ ಪಾಡು ನೋಡಿದ್ರೆ ಮಕ್ಕಳೇ ಬೇಡ ಅನಿಸೋಹಾಗಿದೆ. ಯಾಕಂದ್ರೆ ಮಗಳು ಮತ್ತು ಅಳಿಯ ಸೇರಿ ವೃದ್ಧೆಯನ್ನು ಮಧ್ಯೆರಾತ್ರಿ ನಡುರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ. ಅಮ್ಮ.. ಇದೊಂದು ಜೀವಕ್ಕಾಗಿ ಎಷ್ಟೋ ಜನ ಹಾತೊರೆಯುತ್ತಾರೆ. ತಾಯಿ ಇಲ್ಲದ ತಬ್ಬಲಿಗಳು ಜೀವನ ಪೂರ್ತಿ ಮರುಗುತ್ತಾರೆ. ಆದ್ರೆ ಹೆತ್ತಮ್ಮನನ್ನೇ ಮಧ್ಯರಾತ್ರಿ ಕೊರೆಯುವ ಚಳಿಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ವಿ.ಕಲ್ಲಹಳ್ಳಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. 80 ವರ್ಷದ ವೃದ್ದೆ ಓಬಮ್ಮಳನ್ನು ಮಗಳು ಆಶಾರಾಣಿ ಮತ್ತು ಅಳಿಯ ಮಂಜುನಾಥ್ ಕಾರಿನಲ್ಲಿ ಕರೆದುಕೊಂಡು ಬಂದು ದೇವಾಲಯದ ಬಳಿ ಬಿಟ್ಟು ಹೋಗಿದ್ದಾರೆ. ಮಕ್ಕಳ ನೀಚ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೃದ್ದೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಳು. ದೇವಸ್ಥಾನದ ಬಳಿಯಿದ್ದ ವೃದ್ಧೆಯ ಬಗ್ಗೆ ಸ್ಥಳೀಯರು ವಿಚಾರಿಸಿದ್ದಾರೆ. ಈ ವೇಳೆ ಅಜ್ಜಿ ಆಶ್ರಮಕ್ಕೆ ಹೋಗುತ್ತೇನೆ ಅಂತ ಹೇಳಿದ್ದಾರೆ. ಹೀಗಾಗಿ ವೃದ್ದೆಯನ್ನ ರಕ್ಷಣೆ ಮಾಡಿ ಆಶ್ರಮಕ್ಕೆ ಬಿಟ್ಟಿದ್ದಾರೆ. ತಾಯಿಯನ್ನು ಬಿಟ್ಟು ಹೋದ ಮಗಳು ಮತ್ತು ಅಳಿಯನ ಮೇಲೆ ಕ್ರಮ ಆಗಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:28 am, Sat, 6 January 24