RCB IPL Celebration: ಬೆಂಗಳೂರು ತಂಡಕ್ಕಿರುವ ಫ್ಯಾನ್ಗಳ ಸಂಖ್ಯೆ ಕಂಡು ದಂಗಾದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಹಿಂದೆ ಇನ್ನೂ ಮೀಸೆ ಮೂಡದ ಯುವಕನನ್ನು ನೀವು ನೋಡಬಹುದು, ಅದು ಪ್ರಾಯಶಃ ಸಿದ್ದರಾಮಯ್ಯರ ಮೊಮ್ಮಗನಿರಬಹುದು (ದಿವಂಗತ ರಾಕೇಶ್ ಸಿದ್ದರಾಮಯ್ಯ ಮಗ). ಹುಡುಗನ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೊಂಚ ಕುತೂಹಲ ಪ್ರದರ್ಶಿಸುತ್ತಾರೆ ಮತ್ತು ಅವನ ಬಗ್ಗೆ ಕೆಲ ಪ್ರಶ್ನೆಗಳನ್ನು ಸಿದ್ದರಾಮಯ್ಯನವರಿಗೆ ಕೇಳುತ್ತಾರೆ.
ಬೆಂಗಳೂರು, ಜೂನ್ 4: ರಾಜಕಾರಣಿಗಳಿಗಿಂತಲೂ ಕ್ರಿಕೆಟ್ ಆಟಗಾರರು ಹೆಚ್ಚು ಖ್ಯಾತರೇ ಅಂತ ವಿಧಾನಸೌಧದ ಮುಂದೆ ನೆರೆದಿರುವ ಕ್ರೌಡ್ ಅನ್ನು ನೋಡಿ ರಾಜ್ಯದಲ್ಲಿ ಮಾಸ್ ಲೀಡರ್ ಅಂತ ಗುರುತಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಂದುಕೊಂಡಿರಬಹುದು. ತಮ್ಮ ಯಾವುದೇ ಸಭೆಯಲ್ಲಿ ಸಿದ್ದರಾಮಯ್ಯ ಈ ಪಾಟಿ ಜನರನ್ನು ನೋಡಿಲಾರರು. ನೀವೂ ಸಹ ಗಮನಿಸಿರುತ್ತೀರಿ, ಸಿದ್ದರಾಮಯ್ಯ ಸಾರ್ವಜನಿಕ ಸಭೆಯೊಂದರಲ್ಲಿ ವೇದಿಕೆ ಹತ್ತಿ ಜನರತ್ತ ಕೈ ಬೀಸಿದಾಗ ಶಿಳ್ಳೆ, ಚಪ್ಪಾಳೆಗಳ ಪ್ರತಿಕ್ರಿಯೆ ಬರುತ್ತದೆ. ಆದರೆ ಅವರು ವಿಧಾನ ಸೌಧದ ಮೆಟ್ಟಿಲುಗಳನ್ನೇರಿ ಆರ್ಸಿಬಿ ಅಭಿಮಾನಿಗಳ ಕಡೆ ತಿರುಗಿ ಕೈ ಬೀಸಿದಾಗ ಅವರು ನಿರೀಕ್ಷಿಸಿದಂಥ ಪ್ರತಿಕ್ರಿಯೆ ಬರೋದಿಲ್ಲ. ಸಚಿವ ಜಮೀರ್ ಅಹ್ಮದ್ ಸಹ ಮುಂದೆ ಬಂದು ಕೈ ಮುಗಿಯುತ್ತಾರೆ. ಅದರೆ ಜನರಿಗೆ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಲೋಕಲ್ ಬಾಯ್ ಮಯಾಂಕ್ ಅಗರ್ವಾಲ್ ಮೊದಲಾದವರನ್ನು ನೋಡಬೇಕಿದೆ.
ಇದನ್ನೂ ಓದಿ: RCB IPL Celebration: ವಿಧಾನಸೌಧದ ಮುಂದೆ ಆರ್ಸಿಬಿ ಅಭಿಮಾನಿಗಳ ದಂಡು, ಎತ್ತ ನೋಡಿದರೂ ರೆಡ್ ಆರ್ಮಿ!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ