AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB IPL Celebration: ವಿಧಾನಸೌಧದ ಮುಂದೆ ಆರ್​ಸಿಬಿ ಅಭಿಮಾನಿಗಳ ದಂಡು, ಎತ್ತ ನೋಡಿದರೂ ರೆಡ್​ ಆರ್ಮಿ!

RCB IPL Celebration: ವಿಧಾನಸೌಧದ ಮುಂದೆ ಆರ್​ಸಿಬಿ ಅಭಿಮಾನಿಗಳ ದಂಡು, ಎತ್ತ ನೋಡಿದರೂ ರೆಡ್​ ಆರ್ಮಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 04, 2025 | 5:02 PM

Share

ಕೆಲ ಅಭಿಮಾನಿಗಳು ಹಹೈಕೋರ್ಟ್ ಕಟ್ಟಡವನ್ನು ಹತ್ತಿದ್ದಾರೆ, ಪೊಲೀಸರು ನೋಡಿದರೆ ಇಳಿಸುತ್ತಾರೆ ಅನ್ನೋದು ಬೇರೆ ವಿಷಯ. ಇನ್ನೂ ಕೆಲವರು ವಿಧಾನಸೌಧ ಹೊರಭಾಗದಲ್ಲಿರುವ ಮರಗಳನ್ನು ಹತ್ತಿ ಕೂತಿದ್ದಾರೆ, ಸೌಧದ ಮುಂದಿಂದ ಹೋಗುವ ಬಿಎಂಟಿಸಿ ಬಸ್​ಗಳ ಮೇಲೆ ಜನ ಹತ್ತಿ ಕೂತಿದ್ದಾರೆ. ಅಭೂತಪೂರ್ವ ಸನ್ನಿವೇಶಗಳು ಕೆಮೆರಾ ಮತ್ತು ಕೆಮೆರಾ ಹೊತ್ತ ಡ್ರೋಣ್ ಗಳಿಗೆ ಸೆರೆ ಸಿಗುತ್ತಿವೆ.

ಬೆಂಗಳೂರು, ಜೂನ್ 4: ಬೆಂಗಳೂರಲ್ಲಿ ಅರ್​ಸಿಬಿ ತಂಡಕ್ಕಿರುವ ಅಭಿಮಾನಿಗಳ ಗಣತಿ ಮಾಡಲು ಶುರುವಿಟ್ಟುಕೊಂಡರೆ ಸಂಖ್ಯೆಗಳು ಮುಗಿದುಹೋದಾವು ಆದರೆ ಎಣಿಕೆ ಮುಗಿಯಲಾರದು. ನಿನ್ನೆ ಅಹಮದಾಬಾದ್​​ನಲ್ಲೂ ಅಪರಿಮಿತ ಅರ್​ಸಿಬಿ ಅಭಿಮಾನಿಗಳು. ಇಲ್ನೋಡಿ, ತಾಜ್ ವೆಸ್ಟೆಂಡ್ ನಿಂದ ಆಟಗಾರರು ಬರುವ ಮೊದಲೇ ಸಹಸ್ರಾರು ಜನ ವಿಧಾನ ಸೌಧದ (Vidhana Soudha) ಮುಂದೆ ಜಾತ್ರೆಯಂತೆ ಸೇರಿದ್ದಾರೆ. ಎಲ್ಲಿ ನೋಡಿದರೂ ಕೆಂಪು ಜೆರ್ಸಿ ತೊಟ್ಟಿರುವ ಅಭಿಮಾನಿಗಳು-ರೆಡ್ ಅರ್ಮಿ! ವಿಧಾನಸೌಧದಲ್ಲಿ ಕೆಲಸ ಮಾಡುವ ಜನ ಮೇಲೆ ನಿಂತು ವೇದಿಕೆ ಕಡೆ ನೋಡುತ್ತಿದ್ದಾರೆ. ಕಾರ್ಯಕ್ರಮದ ನಿರೂಪಕ ಅಭಿಮಾನಿಗಳ ವರ್ತನೆ ಹೇಗಿರಬೇಕು, ಪೊಲೀಸರೊಂದಿಗೆ ಸಹಕರಿಸಬೇಕು ಎಂದೆಲ್ಲ ಹೇಳುತ್ತಿದ್ದಾರೆ.

ಇದನ್ನೂ ಓದಿ:  ಐಪಿಎಲ್ ಫೈನಲ್: ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಜನಜಾತ್ರೆ, ಹೆಚ್ಚು ಅರ್​ಸಿಬಿ ಫ್ಯಾನ್​ಗಳು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More