ಟಾಟಾ ಐಪಿಎಲ್-2025ಕಪ್ ನಮ್ಮದು: ಆರ್ಸಿಬಿ ಗೆಲುವಿಗೆ ಕುಣಿದು ಕುಪ್ಪಳಿಸಿದ ಮಾಲೂರು ಶಾಸಕ ನಂಜೇಗೌಡ
ನಂಜೇಗೌಡರಿಗೆ ಈಗ 63ರ ಪ್ರಾಯ, ಅದರೆ ಅವರು ಯುವಕರಂತೆ ಕುಣಿದು ಬೆಂಗಳೂರು ತಂಡದ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ಅಭಿಮಾನಿಗಳು ಅವರನ್ನೆತ್ತಿಕೊಂಡು, ಹೆಗಲ ಮೇಲೆ ಕೂರಿಸಿಕೊಂಡು ಕುಣಿಯುವಾಗಲೂ ಶಾಸಕ ಹರ್ಷಚಿತ್ತರು. ರಜತ್ ಪಾಟೀದಾರ್ ತಂಡ ಕನ್ನಡ ನಾಡಿನ ಜನರಿಗೆ ಪೂರ್ತಿ ಒಂದು ವರ್ಷಕ್ಕಾಗುವಷ್ಟು ಸಂತಸ ನೀಡಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಕೋಲಾರ, ಜೂನ್ 4: ನಮ್ಮ ರಾಜಕಾರಣಿಗಳಲ್ಲಿ ಅನೇಕರು ಅರ್ಸಿಬಿ ಫ್ಯಾನ್ಗಳು. ಹಾಗೆ ನೋಡಿದರೆ, ನಿನ್ನೆ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ಶಿಪ್ ಗೆದ್ದಿರೋದನ್ನ ಸಂಭ್ರಮಿಸದ ಕನ್ನಡಿಗನೇ ಇಲ್ಲ. ನಟ ಕಮಲ್ ಹಾಸನ್ ಸಂಭ್ರಮಿಸಿರಲಿಕ್ಕಿಲ್ಲ, ಆ ಮಾತು ಬೇರೆ! ಮಾಲೂರಿನ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ನಿಮಗೆ ಗೊತ್ತಲ್ವಾ? ಅವರು ಪಕ್ಕಾ ಕ್ರಿಕೆಟ್ ಪ್ರೇಮಿ ಮತ್ತು ಆರ್ಸಿಬಿ ಅಭಿಮಾನಿ. ಅವರ ಕುಟುಂಬದ ಸದಸ್ಯರೂ ಕ್ರಿಕೆಟ್ ಪ್ರೇಮಿಗಳೇ. ನಿನ್ನೆ ರಾತ್ರಿ ಕುಟುಂಬದವರೆಲ್ಲ ಸೇರಿ ಆರ್ಸ್ಸಿಬಿ ಗೆಲುವನ್ನು ಆಚರಿಸಿದರು.
ಇದನ್ನೂ ಓದಿ: ಕಾರನ್ನು ಸಂಪೂರ್ಣವಾಗಿ ಆರ್ಸಿಬಿಮಯಗೊಳಿಸಿ ನೆಚ್ಚಿನ ತಂಡಕ್ಕೆ ಒಂದು ಚಿಕ್ಕ ಟ್ರಬ್ಯೂಟ್ ಎಂದು ಕಾರಿನ ಒಡೆಯ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos