ಟಾಟಾ ಐಪಿಎಲ್-2025 ಕಪ್ ನಮ್ಮದು: ಶಿವಮೊಗ್ಗದಲ್ಲಿ ಸಂಭ್ರಮಾಚರಣೆಗೆ ಲಿಂಗಭೇದವಿಲ್ಲ, ಜಾತಿಭೇದವಿಲ್ಲ
ವಿರಾಟ್ ಕೊಹ್ಲಿ ತಂಡದ ಪಕ್ಕಾ ಅಭಿಮಾನಿಯಾಗಿರುವ ಗೃಹಿಣಿಯೊಬ್ಬರು ತಮ್ಮ ಮಕ್ಕಳೊಂದಿಗೆ ಮನೆಯಿಂದ ಹೊರಬಂದು ಸಂತೋಷದಿಂದ ಕುಣಿದರು. ಎಲ್ಲರ ಬಾಯಲ್ಲೂ ಆರ್ಸಿಬಿ, ಆರ್ಸಿಬಿ ಅಂತ ಜಯಘೋಷಗಳು. ಮಕ್ಕಳು, ಹಿರಿಯರು, ಯುವಕರು, ಯುವತಿಯರು-ಎಲ್ಲ ವಯೋಮಾನದ ಜರು ರಸ್ತೆಗಳಲ್ಲಿ ಕುಣಿಯುವುದನ್ನು ನೋಡಬಹುದು. ಕ್ರಿಕೆಟ್ ಸಂಭ್ರಮಾಚರಣೆ ಜಾತಿಭೇದವಿಲ್ಲ, ಲಿಂಗಭೇದವಿಲ್ಲ ಮತ್ತು ವಯಸ್ಸಿನ ತಾರತಮ್ಯವೂ ಇಲ್ಲ.
ಶಿವಮೊಗ್ಗ, ಜೂನ್ 4: ನಿನ್ನೆ ರಾತ್ರಿ ಕರ್ನಾಟಕದಾದ್ಯಂತ ಆರ್ಸಿಬಿ ಅಭಿಮಾನಿಗಳು (RCB fans) ನಡೆಸಿದ ಸೆಲಿಬ್ರೇಷನ್ಗಳನ್ನು ತೋರಿಸಿದ್ದೇವೆ. ಇವತ್ತು ಇನ್ನಷ್ಟು ವಿಡಿಯೋಗಳು ಲಭ್ಯವಾಗುತ್ತಿವೆ. ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಟೀಮು ನಿನ್ನೆ ಅಹ್ಮದಾಬಾದ್ನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವನ್ನು ಸೋಲಿಸಿ 18 ವರ್ಷಗಳ ಇಂಡಿಯನ್ ಪ್ರೀಮಿಯ್ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದಿದೆ. ರಾಜ್ಯದ ಇತರ ನಗರ, ಊರು, ಗ್ರಾಮಗಳಲ್ಲಿ ನಡೆದಂತೆ ಶಿವಮೊಗ್ಗದಲ್ಲೂ ರಾತ್ರಿಯೆಲ್ಲ ಸಂಭ್ರಮಾಚರಣೆ ನಡೆಯಿತು. ಅರ್ಸಿಬಿಯ ವಿಜಯೋತ್ಸವವನ್ನು ಜನ ಹುಚ್ಚೆದ್ದು ಕುಣಿಯುತ್ತ ಆಚರಿಸಿದರು.
ಇದನ್ನೂ ಓದಿ: ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ದೀಪಾವಳಿ! ಬಾನಂಗಳದಲ್ಲಿ ಪಟಾಕಿಗಳ ಚಿತ್ತಾರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos