AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಫೈನಲ್​ ಪಂದ್ಯದ ವೇಳೆ ಯಮಧರ್ಮನಾಗಿ ಪ್ರತ್ಯಕ್ಷವಾದ ರಾಯಚೂರಿನ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್

ಐಪಿಎಲ್ ಫೈನಲ್​ ಪಂದ್ಯದ ವೇಳೆ ಯಮಧರ್ಮನಾಗಿ ಪ್ರತ್ಯಕ್ಷವಾದ ರಾಯಚೂರಿನ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್

ಭೀಮೇಶ್​​ ಪೂಜಾರ್
| Edited By: |

Updated on: Jun 04, 2025 | 9:06 AM

Share

ಐಪಿಎಲ್ ಟ್ರೋಫಿಗೆ ಆರ್​ಸಿಬಿ ಮುತ್ತಿಕ್ಕಿದ ಸಂಭ್ರಮ ಅಭಿಮಾನಿಗಳಿಗೆ ಒಂದೆಡೆಯಾದರೆ, ಫೈನಲ್ ಪಂದ್ಯದ ವೇಳೆ ಯಮಧರ್ಮನ ವೇಷ ಧರಿಸಿ ಸ್ಟೇಡಿಯಂನಲ್ಲಿ ಮಿಂಚಿದ ರಾಯಚೂರು ಮೂಲದ ವೆಂಕಟ್ ರಾಘವನ್ ಎಂಬ ಆರ್​ಸಿಬಿ ಅಭಿಮಾನಿಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋ ಇಲ್ಲಿದೆ.

ರಾಯಚೂರು, ಜೂನ್ 4: ಗುಜರಾತ್​ನ ಅಹಮದಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಫೈನಲ್​​ನಲ್ಲಿ ಆರ್​ಸಿಬಿ ಗೆದ್ದು ಚಾಂಪಿಯನ್ ಆಗಿದೆ. 18 ವರ್ಷಗಳ ನಂತರ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದೆ. ಇದೇ ಪಂದ್ಯದ ಸಂದರ್ಭದಲ್ಲಿ ರಾಯಚೂರು ಮೂಲದ ವೆಂಕಟ್ ರಾಘವನ್ ಎಂಬ ಆರ್​​ಸಿಬಿ ಅಭಿಮಾನಿ ಯಮ ಧರ್ಮನಾಗಿ ವೇಷ ಧರಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸ್ಟೇಡಿಯಂ ಹೊರಗೆ ಮತ್ತು ಗ್ಯಾಲರಿಯಲ್ಲಿ ವೆಂಕಟ್ ರಾಘವನ್ ಜೊತೆ ಸೆಲ್ಫೀ, ರೀಲ್ಸ್​​ಗೆ ಜನ ಮುಗಿಬಿದ್ದಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
ಭೀಮೇಶ್​​ ಪೂಜಾರ್
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More