ಒಂದು ‘ಪದ’ ಬದಲಾವಣೆಗೆ 18 ವರ್ಷ ಕಾದ RCBಯ ಮೂವರು ದಿಗ್ಗಜರು
IPL 2025 Final RCB vs PBKS: ಐಪಿಎಲ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 190 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 184 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ರೋಚಕ ಜಯದೊಂದಿಗೆ ಆರ್ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತನು ಮನ ಅರ್ಪಿಸಿದ ಆಟಗಾರರೆಂದರೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್. 2011 ರಲ್ಲಿ ಜೊತೆಯಾದ ತ್ರಿಮೂರ್ತಿಗಳು ಹಲವು ವರ್ಷಗಳ ಕಾಲ ಆರ್ಸಿಬಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಶ್ರಮಿಸಿದ್ದರು. ದುರಾದೃಷ್ಟವಶಾತ್ ಈ ಪ್ರಯತ್ನ ಫಲ ನೀಡಲೇ ಇಲ್ಲ.
ಇತ್ತ ಐಪಿಎಲ್ನಿಂದ ನಿವೃತ್ತರಾದ ಬಳಿಕ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಈ ಸಲ ನಮ್ದೆ ಎನ್ನುವ ಮೂಲಕ ಪ್ರತಿ ಬಾರಿಯೂ ಆರ್ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದರು. ಆದರೆ ಎಂದಿನಂತೆ ಪ್ರತಿ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರಾಶೆಯೊಂದಿಗೆ ಹಿಂತಿರುಗಿತ್ತಿತ್ತು.
ಆದರೆ ಈ ಬಾರಿ ಹಾಗೆ ಆಗಲಿಲ್ಲ. ವಿರಾಟ್ ಕೊಹ್ಲಿಯ ಬಹುಕಾಲದ ಕನಸು ಈಡೇರಿದೆ. ಈ ಕನಸು ನನಸಾಗುತ್ತಿದ್ದಂತೆ ಕಿಂಗ್ ಕೊಹ್ಲಿಗೆ ತಮ್ಮ ಕನಸಿಗೆ ಸಾಥ್ ನೀಡಿದ್ದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರನ್ನು ಬಿಗಿದಪ್ಪಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಕೆಲ ವರ್ಷಗಳಿಂದ ಒಂದು ಪದ ಬದಲಾವಣೆಗೆ ಕಾದು ಕುಳಿತಿದ್ದ ತ್ರಿಮೂರ್ತಿಗಳು ಕೊನೆಗೂ ಈ ಸಲ ಕಪ್ ನಮ್ದು ಎಂದಿದ್ದಾರೆ.
ಈ ಮೂಲಕ ನಮ್ದೇ ಎನ್ನುವ ಪದವನ್ನು ಆರ್ಸಿಬಿಯ ಮೂವರು ದಿಗ್ಗಜರು 18ನೇ ವರ್ಷದಲ್ಲಿ ನಮ್ದು ಎಂದು ಸಂಭ್ರಮಿಸಿರುವುದು ವಿಶೇಷ. ಇದೀಗ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಜೊತೆಯಾಗಿ ಈ ಸಲ ಕಪ್ ನಮ್ದು ಎನ್ನುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ

ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!

ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
