AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಅಭಿಮಾನಿಗಳ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ? ಇಲ್ಲಿದೆ ಮಾಹಿತಿ

RCB ಅಭಿಮಾನಿಗಳ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ? ಇಲ್ಲಿದೆ ಮಾಹಿತಿ

ಝಾಹಿರ್ ಯೂಸುಫ್
|

Updated on:Jun 04, 2025 | 10:05 AM

Share

IPL 2025 Final RCB vs PBKS: ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 190 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 184 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ರೋಚಕ ಜಯದೊಂದಿಗೆ ಆರ್​ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ ನಡೆಸಲಿದೆ. ಅಹಮದಾಬಾದ್​ನಿಂದ ಆರ್​ಸಿಬಿ ತಂಡವು ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ 1.30 ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಆ ಬಳಿಕ ವಿಜಯಯಾತ್ರೆಗೆ ಸಿದ್ಧತೆಯನ್ನು ನಡೆಸಲಿದೆ.

ಸಂಜೆ 3.30 ಕ್ಕೆ ಬೆಂಗಳೂರಿನ ವಿಧಾನಸೌಧದಿಂದ ಆರ್​​ಸಿಬಿ ತಂಡದ ವಿಜಯಯಾತ್ರೆ ಆರಂಭವಾಗಲಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಈ ಪರೇಡ್ ಮುಂದುವರೆಯಲಿದೆ.

ಇನ್ನು ಈ ವಿಜಯಯಾತ್ರೆ ವೇಳೆ 2024 ರಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್​ಸಿಬಿ ಮಹಿಳಾ ತಂಡವನ್ನು ಸಹ ಕರೆತರುವ ಸಾಧ್ಯತೆಯಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎರಡು ಟ್ರೋಫಿಗಳೊಂದಿಗೆ ವಿಜಯಯಾತ್ರೆ ನಡೆಸುವ ಬಗ್ಗೆ ಚಿಂತಿಸಿದೆ.

ಇದಾಗ್ಯೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ವಿಜಯೋತ್ಸವ ನಡೆಯಲಿದೆಯಾ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಇಂದು ಸಂಜೆ 3.30 ರಿಂದ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಜಯಯಾತ್ರೆ ನಡೆಸುವುದಾಗಿ ಮಾಹಿತಿ ಆರ್​ಸಿಬಿ ಫ್ರಾಂಚೈಸಿ ಹೇಳಿಕೊಂಡಿದೆ. ಇದಾದ ಬಳಿಕ ಆರ್​ಸಿಬಿ ತಂಡವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಿದರೂ ಅಚ್ಚರಿಪಡಬೇಕಿಲ್ಲ.

Published on: Jun 04, 2025 10:03 AM