VIDEO: ಇದು ಈ ಬಾರಿಯ ಐಪಿಎಲ್ನ 10 ಲಕ್ಷ ರೂ. ಮೌಲ್ಯದ ಕ್ಯಾಚ್
IPL 2025 Catch of the Season: ಕಮಿಂದು ಮೆಂಡಿಸ್ ಕ್ಯಾಚ್ಗೆ ಪೈಪೋಟಿ ನೀಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ದುಷ್ಮಂತ ಚಮೀರಾ ಹಿಡಿದ ಕ್ಯಾಚ್. ಐಪಿಎಲ್ನ 48ನೇ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಕೊನೆಯ ಓವರ್ನ 4ನೇ ಎಸೆತವನ್ನು ಕೆಕೆಆರ್ ತಂಡದ ಅನುಕುಲ್ ರಾಯ್ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಬೌಂಡರಿಯತ್ತ ಬಾರಿಸಿದ್ದರು. ಈ ವೇಳೆ ಅಲ್ಲೇ ಫೀಲ್ಡಿಂಗ್ನಲ್ಲಿದ್ದ ದುಷ್ಮಂತ ಚಮೀರ ಓಡಿ ಬಂದು ಅತ್ಯದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.
IPL 2025: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯುತ್ತಮ ಫೀಲ್ಡಿಂಗ್ಗೆ ಸಾಕ್ಷಿಯಾಗಿತ್ತು. ಅದರಲ್ಲೂ ಕೆಲ ಆಟಗಾರರು ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಹೀಗೆ ಎಲ್ಲರನ್ನು ಚಕಿತಗೊಳಿಸಿ ಕಮಿಂದು ಮೆಂಡಿಸ್ ಹಿಡಿದ ಕ್ಯಾಚ್ ಈ ಬಾರಿಯ ಬೆಸ್ಟ್ ಕ್ಯಾಚ್ ಎನಿಸಿಕೊಂಡಿದೆ.
ಐಪಿಎಲ್ 43ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಆಟಗಾರ ಕಮಿಂದು ಮೆಂಡಿಸ್ ಅದ್ಭುತ ಕ್ಯಾಚ್ ಹಿಡಿದ್ದರು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಡೆವಾಲ್ಡ್ ಬ್ರೆವಿಸ್ ಸ್ಪೋಟಕ ಇನಿಂಗ್ಸ್ ಆಡಿದ್ದರು.
ಭರ್ಜರಿ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದ ಬ್ರೆವಿಸ್ 13ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಬಾರಿಸಿದ್ದರು. ಅಲ್ಲೇ ಫೀಲ್ಡಿಂಗ್ನಲ್ಲಿದ್ದ ಕಮಿಂದು ಮೆಂಡಿಸ್ ಅದ್ಭುತ ಡೈವಿಂಗ್ನೊಂದಿಗೆ ಕ್ಯಾಚ್ ಹಿಡಿದರು. ಶ್ರೀಲಂಕಾ ಆಟಗಾರ ಹಿಡಿದ ಈ ಅದ್ಭುತ ಕ್ಯಾಚ್ ನೋಡಿ ಪ್ರೇಕ್ಷಕರು ನಿಬ್ಬೆರಗಾದರು. ಇದೀಗ ಕಮಿಂದು ಮೆಂಡಿಸ್ ಅವರ ಕಮಾಲ್ ಕ್ಯಾಚ್ಗೆ ಐಪಿಎಲ್ 2025ರ ಬೆಸ್ಟ್ ಕ್ಯಾಚ್ ಪ್ರಶಸ್ತಿ ಲಭಿಸಿದೆ.
ಇನ್ನು ಕಮಿಂದು ಮೆಂಡಿಸ್ ಕ್ಯಾಚ್ಗೆ ಪೈಪೋಟಿ ನೀಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ದುಷ್ಮಂತ ಚಮೀರಾ ಹಿಡಿದ ಕ್ಯಾಚ್. ಐಪಿಎಲ್ನ 48ನೇ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಕೊನೆಯ ಓವರ್ನ 4ನೇ ಎಸೆತವನ್ನು ಕೆಕೆಆರ್ ತಂಡದ ಅನುಕುಲ್ ರಾಯ್ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಬೌಂಡರಿಯತ್ತ ಬಾರಿಸಿದ್ದರು. ಈ ವೇಳೆ ಅಲ್ಲೇ ಫೀಲ್ಡಿಂಗ್ನಲ್ಲಿದ್ದ ದುಷ್ಮಂತ ಚಮೀರ ಓಡಿ ಬಂದು ಅತ್ಯದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.
ಅತ್ತ ಕಮಿಂದು ಮೆಂಡಿಸ್ ಹಾಗೂ ಇತ್ತ ದುಷ್ಮಂತ ಚಮೀರ ಹಿಡಿದ ಕ್ಯಾಚ್ಗಳು ಬೆಸ್ಟ್ ಕ್ಯಾಚ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದವು. ಅಂತಿಮವಾಗಿ ಕಮಿಂದು ಮೆಂಡಿಸ್ ಹಿಡಿದ ಫ್ಲೈಯಿಂಗ್ ಅನ್ನು ಬೆಸ್ಟ್ ಕ್ಯಾಚ್ ಎಂದು ಪರಿಗಣಿಸಲಾಗಿದ್ದು, ಅದರಂತೆ 10 ಲಕ್ಷ ರೂ. ಬಹುಮಾನ ಮೊತ್ತ ನೀಡಲಾಗಿದೆ.