ಆರ್ಸಿಬಿ ಗೆದ್ದ ಬಳಿಕ ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
ಆರ್ಸಿಬಿ ಇದೇ ಮೊದಲ ಬಾರಿಗೆ ಕಪ್ ಗೆದ್ದಿದೆ. ಈ ವಿಚಾರ ಖುಷಿ ನೀಡಿದೆ. ಈ ಮಧ್ಯೆ ಪ್ರಶಾಂತ್ ನೀಲ್ ಅವರು ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಪ್ರಶಾಂತ್ ನೀಲ್ ಅವರನ್ನು ಎಲ್ಲರೂ ಕೊಂಡಾಡಿದ್ದಾರೆ.
ಪ್ರಶಾಂತ್ ನೀಲ್ (Prashanth Neel) ಅವರು ಪಕ್ಕಾ ‘ಆರ್ಸಿಬಿ’ ಅಭಿಮಾನಿ. ಹೀಗಾಗಿ, ಸಮಯ ಮಾಡಿಕೊಂಡು ಐಪಿಎಲ್ ಮ್ಯಾಚ್ ನೋಡುತ್ತಾರೆ. ಜೂನ್ 3ರಂದು ಆರ್ಸಿಬಿ ಕಪ್ ಗೆದ್ದಿದೆ. ಈ ಖುಷಿಯ ಕ್ಷಣವನ್ನು ಪ್ರಶಾಂತ್ ನೀಲ್ ಅವರು ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಶಾಂತ್ ನೀಲ್ ಅವರ ಕ್ರಿಕೆಟ್ ಪ್ರೇಮವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 04, 2025 12:02 PM
Latest Videos