AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಫೈನಲ್: ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಜನಜಾತ್ರೆ, ಹೆಚ್ಚು ಅರ್​ಸಿಬಿ ಫ್ಯಾನ್​ಗಳು

ಐಪಿಎಲ್ ಫೈನಲ್: ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಜನಜಾತ್ರೆ, ಹೆಚ್ಚು ಅರ್​ಸಿಬಿ ಫ್ಯಾನ್​ಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2025 | 7:46 PM

Share

ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ವಿಶ್ವದಲ್ಲೇ ಅತಿ ದೊಡ್ಡದು, ಅಸ್ಟ್ರೇಲಿಯಾದ ಮೆಲ್ಬರ್ನ್ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನಕ್ಕಿಂತ ದೊಡ್ಡದು. ಮೈದಾನದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್​ ಕೌಂಟರ್​​ಗಳ ಮೂಲಕ ಮಾರಾಟವಾಗಿವೆ. ಬೇರೆ ಬೇರೆ ಏಜೆನ್ಸಿಗಳಿಂದ, ಮತ್ತು ಬ್ಲ್ಯಾಕ್ ಖರೀದಿಸಿದವರು ಇದರಲ್ಲಿ ಸೇರಿಲ್ಲ, ಆ ಲೆಕ್ಕ ಬೇರೆ!

ಅಹ್ಮದಾಬಾದ್ (ಗುಜರಾತ್) ಜೂನ್ 3 : ಜನಸಾಗರ, ಜನಪ್ರವಾಹ, ಸುನಾಮಿಯಂತೆ ಜನ ಅನ್ನೋದನ್ನು ನಾವು ಕೇಳುತ್ತಿರುತ್ತೇವೆ. ಈ ಪದಗಳ ಅರ್ಥವನ್ನು ಅಹ್ಮದಾಬಾದ್​ನಲ್ಲಿ ನಮ್ಮಟಿವಿ9 ತಂಡ ತೋರಿಸುತ್ತಿರುವ ದೃಶ್ಯಗಳನ್ನು ನೋಡಿ ತಿಳಿದುಕೊಳ್ಳಬಹುದು. ಅದೇನು ಜನ ಮಾರಾಯ್ರೇ. ಅಲ್ ರೋಡ್ಸ್ ಇನ್ ಅಹ್ಮದಾಬಾದ್ ಲೀಡ್ ಟು ನರೇಂದ್ರ ಮೋದಿ ಸ್ಟೇಡಿಯಂ! ದೇಶದ ನಾನಾಭಾಗಗಳಿಂದ ಜನ ಇವತ್ತಿನ ಪಂದ್ಯವನ್ನು ನೋಡಲು ಬಂದಿದ್ದಾರೆ. ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ವಿದೇಶಗಳಲ್ಲಿರುವ ಭಾರತೀಯರೂ ಸಹ ವಿಮಾನ ಪ್ರಯಾಣಕ್ಕೆ 20-30 ಸಾವಿರ ರೂ ಹಣ ತೆತ್ತು ಅಹ್ಮದಾಬಾದ್​​ಗೆ ಬಂದಿದ್ದಾರೆ. ಆರ್​ಸಿಬಿ ಮತ್ತು ಪಿಬಿಕೆಎಸ್ ನಡುವೆ ಇವತ್ತು ನಡೆಯುವ ಪಂದ್ಯ ವೀಕ್ಷಿಸಲು ಬಂದವರಲ್ಲಿ ಹೆಚ್ಚಿನವರು ಬೆಂಗಳೂರು ಟೀಮಿನ ಅಭಿಮಾನಿಗಳು ಅನ್ನೋದು ಮತ್ತೂ ವಿಶೇಷ.

ಇದನ್ನೂ ಓದಿ:  ಆರ್​ಸಿಬಿ ಚಾಂಪಿಯನ್​ಶಿಪ್ ಗೆಲ್ಲಲಿ ಅಂತ ಮೈಸೂರಲ್ಲಿ ಅಭಿಮಾನಿಗಳಿಂದ ಹೋಮ, ಹವನ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ