ಅಹ್ಮದಾಬಾದ್ ಕ್ರಿಕೆಟ್ ಸ್ಟೇಡಿಯಂ ಸುತ್ತಮುತ್ತ ಪ್ರದೇಶದಲ್ಲಿ ಇವತ್ತೂ ಮಳೆ, ಅಟವೇನಾದರೂ ರದ್ದಾದರೆ?
ಒಂದು ಪಕ್ಷ ಮಳೆಯಿಂದ ಇವತ್ತು ಪಂದ್ಯ ರದ್ದಾದರೆ ನಾಳೆ (ಜೂನ್ 4) ರಿಜರ್ಸ್ ಡೇ ಆಗಿದ್ದು ಆಟ ಆಡಲಾಗುತ್ತದೆ. ನಾಳೆಯೂ ಮಳೆಯ ಕಾರಣ ಆಟ ಸಾಧ್ಯವಾಗದೆ ಪಂದ್ಯ ರದ್ದಾದರೆ, ಲೀಗ್ ಹಂತದಲ್ಲಿ ಉನ್ನತ ಸ್ಥಾನ ಗಳಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುವುದು. ಹಾಗಾದಲ್ಲಿ ಆರ್ಸಿಬಿಗೆ ಮತ್ತೊಮ್ಮೆ ನಿರಾಸೆ ಕಟ್ಟಿಟ್ಟ ಬುತ್ತಿ! ಎರಡೂ ತಂಡಗಳಿಗೆ ಲಭಿಸಿದ್ದು 19 ಅಂಕ ನಿಜವಾದರೂ ನೆಟ್ ರನ್ ರೇಟ್ನಲ್ಲಿ ಪಂಜಾಬ್, ಆರ್ಸಿಬಿಗಿಂತ ಮುಂದಿದೆ.
ಅಹ್ಮದಾಬಾದ್ (ಗುಜರಾತ್) ಜೂನ್ 3: ಇದ್ಯಾವ ಮಳೆ ಮಾರಾಯ್ರೇ, ಸುರಿಯಲು ಇದಕ್ಕೇನು ಹೊತ್ತು ಗೊತ್ತು ಇಲ್ವಾ? ಗುಜರಾತಿನ ಅಹ್ಮದಾಬಾದ್ನಲ್ಲಿ ಅದೂ ಸ್ಟೇಡಿಯಂ ಬಳಿ ಇದ್ದಕ್ಕಿದಂತೆ ಧೋ ಅಂತ ಮಳೆ ಸುರಿಯಲಾರಂಭಿಸಿದೆ. ಮಳೆಯಾದರೂ ಇಂಡಿಯನ್ ಪ್ರಿಮೀಯರ್ ಲೀಗ್ ಫೈನಲ್ (IPL finals) ಪಂದ್ಯ ನಡೆಯುತ್ತದೆ, ಆ ಪ್ರಶ್ನೆ ಬೇರೆ. ಪಿಬಿಕೆಎಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಸೆಕೆಂಡ್ ಕ್ವಾಲಿಫೈಯರ್ ಪಂದ್ಯದ ಸಮಯದಲ್ಲೂ ಮಳೆರಾಯ ಕಾಡಿ ಪಂದ್ಯ ತಡವಾಗಿ ಶುರುವಾಗುವಂತೆ ಮಾಡಿದ್ದ. ಇವತ್ತು ಕೂಡ ಸ್ಟೇಡಿಯಂ ಸುತ್ತಮುತ್ತವೇ ಮಳೆ ಸುರಿಯುತ್ತಿದೆ. ಫೈನಲ್ ಪಂದ್ಯ ಕೊಂಚ ತಡವಾಗಿ ಅರಂಭಗೊಳ್ಳಬಹುದು.
ಇದನ್ನೂ ಓದಿ: IPL 2025 Final: ಅಯ್ಯರ್ ಅಥವಾ ಪಾಟಿದಾರ್: ಐಪಿಎಲ್ ದಾಖಲೆಯ ಪುಟದಲ್ಲಿ ಇಂದು ಯಾರ ಹೆಸರು ಸೇರುತ್ತೆ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Jun 03, 2025 06:37 PM